ETV Bharat / bharat

ಹೊಸದಲ್ಲ ಈ 'ಲಾಕ್​ಡೌನ್​​'.. 121 ವರ್ಷಗಳ ಹಿಂದೆಯೂ ಹೇರಲಾಗಿತ್ತು ಇಂತಹ ನಿರ್ಬಂಧ

author img

By

Published : May 16, 2021, 4:06 PM IST

Updated : May 16, 2021, 4:33 PM IST

ಡೆಡ್ಲಿ ವೈರಸ್ ಕೊರೊನಾ ಹತೋಟಿಗೆ ತರಲು ದೇಶಾದ್ಯಂತ ಲಾಕ್​ಡೌನ್​ ಅಸ್ತ್ರ ಬಳಸಲಾಗ್ತಿದೆ. ಆದರೆ 121 ವರ್ಷಗಳ ಹಿಂದೆಯೂ ಸಹ ಇಂತಹ ಮಾಹಾಮಾರಿ ಸೋಂಕು ತಡೆಗಟ್ಟಲು ಲಾಕ್​ಡೌನ್ ರೀತಿಯ ನಿರ್ಬಂಧ ಜಾರಿಗೊಳಿಸಲಾಗಿತ್ತು.

Kerala Lockdown
Kerala Lockdown

ಮಲಪ್ಪುರಂ(ಕೇರಳ): ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಲಾಕ್​ಡೌನ್​ ವಿಧಿಸಲಾಗ್ತಿದೆ. ಈ ಮೂಲಕ ಡೆಡ್ಲಿ ವೈರಸ್​ ತಡೆಗಟ್ಟುವ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಭಾರತದಲ್ಲಿ ಕಳೆದ 121 ವರ್ಷಗಳ ಹಿಂದೆಯೂ ಮಹಾಮಾರಿ ನಿಯಂತ್ರಣಕ್ಕೆ ಈ ನಿರ್ಬಂಧ ಕೈಗೊಳ್ಳಲಾಗಿತ್ತು ಎಂಬ ವಿಷಯ ಇದೀಗ ತಿಳಿದು ಬಂದಿದೆ.

ಪುರಾತತ್ವ ಶಾಸ್ತ್ರ ಇಲಾಖೆ ನೀಡಿರುವ ದಾಖಲೆಗಳ ಪ್ರಕಾರ, ಭಾರತದಲ್ಲಿ 'ಬುಬೊನಿಕ್​ ಪ್ಲೇಗ್​' ತಡೆಗಟ್ಟಲು 121 ವರ್ಷಗಳ ಹಿಂದೆ ಕೇರಳದಲ್ಲಿ ಲಾಕ್​ಡೌನ್​ ತರಹದ ನಿರ್ಬಂಧ ವಿಧಿಸಲಾಗಿತ್ತು. ಆ ಸಮಯದಲ್ಲಿ ಮಹಾಮಾರಿ ಪ್ಲೇಗ್​ನಿಂದ ಇಡೀ ಭಾರತ ಹಾಗೂ ಇತರೆ ರಾಷ್ಟ್ರಗಳು ತತ್ತರಿಸಿ ಹೋಗಿದ್ದವು. ಇದರಿಂದ ಪಾರಾಗುವ ಉದ್ದೇಶದಿಂದ ಕೇರಳ ಈ ರೀತಿಯ ನಿರ್ಬಂಧ ಹಾಕಿಕೊಂಡಿತ್ತು ಎಂಬ ದಾಖಲೆ ಹಾಗೂ ಪತ್ರಿಕೆಯ ಕ್ಲಿಪಿಂಗ್ ಇದೀಗ ಲಭ್ಯವಾಗಿವೆ.

Kerala Lockdown
ಅಂದು ಮುದ್ರಣಗೊಂಡಿದ್ದ ಪತ್ರಿಕೆಯ ಪ್ರತಿ

ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೆರಿಯಲ್ಲಿರುವ ಉನ್ನಿಕೃಷ್ಣನ್​​ ನಂಬೂತಿರಿ ಲಾಕ್​ಡೌನ್ ಬಗ್ಗೆ ಲಭ್ಯವಿರುವ ದಾಖಲೆ ರಕ್ಷಣೆ ಮಾಡಿ ಇಟ್ಟಿದ್ದಾರೆ. ಬುಬೊನಿಕ್​ ಪ್ಲೇಗ್​​ ಇಡೀ ದೇಶದ ತುಂಬ ಹರಡಿದ್ದ ಸಂದರ್ಭದಲ್ಲಿ ಕಠಿಣ ನಿಯಮ ಜಾರಿಗೊಳಿಲಾಗಿತ್ತು. ಅದಕ್ಕೆ ಲಾಕ್​ಡೌನ್​ ಎಂದು ಹೆಸರಿಡದಿದ್ದರೂ, ಸಾಂಕ್ರಾಮಿಕ ರೋಗ ಹರಡುವುದನ್ನ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರಯಾಣ ಹಾಗೂ ಒಟ್ಟಿಗೆ ಸೇರುವುದರ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಯಾವುದೇ ರೀತಿಯ ಸಾಮೂಹಿಕ ಕಾರ್ಯಕ್ರಮ, ಹಬ್ಬ-ಜಾತ್ರೆಗಳ ಮೇಲೆ ಸಂಪೂರ್ಣ ನಿಗಾ ವಹಿಸಲಾಗಿತ್ತು.

1890ರ ಸಮಯದಲ್ಲಿ ಇಂದಿನ ಕೋವಿಡ್​ನಂತೆ ಪ್ಲೇಗ್​ ಇಡೀ ಭಾರತದ ತುಂಬ ಹಬ್ಬಿತ್ತು. ಇದರಿಂದ ಪ್ರತಿದಿನ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಕೇರಳದಲ್ಲಿ ಅಂದಿನ ರಾಜ್ಯಪಾಲರು ಲಾಕ್​ಡೌನ್​​ನಂತಹ ನಿರ್ಬಂಧ ವಿಧಿಸಿ ಆದೇಶಿಸಿದ್ದರು. ಅಂದಿನ ಮಲಬಾರ್ ಕಲೆಕ್ಟರ್ ಎಚ್.ಬಿ. ಜಾಕ್ಸನ್ ಈ ನಿರ್ಧಾರ ಕೈಗೊಂಡಿದ್ದರು.

ಇದನ್ನೂ ಓದಿ: ವಧು-ವರರಿಬ್ಬರಿಗೂ ಕೊರೊನಾ.. ಕೋವಿಡ್ ಕೇರ್​​ ಸೆಂಟರ್​ನಲ್ಲೇ ಕಲ್ಯಾಣ!

ಪುರಾತತ್ವ ಇಲಾಖೆ ಈ ಮಾಹಿತಿ ಇದೀಗ ಡಿಜಿಟಲೀಕರಣಗೊಳಿಸಿ, ಸಂರಕ್ಷಣೆ ಮಾಡಿದೆ. ಮೂಲತಃ ಮಲಯಾಳಂನಲ್ಲಿ ಈ ಲೇಖನ ಪ್ರಕಟಗೊಂಡಿದೆ. ಪ್ರಮುಖವಾಗಿ ಮೈಸೂರು ಜಿಲ್ಲೆ, ಸೇಲಂ ಹಾಗೂ ಇತರೆ ಪ್ಲೇಗ್ ಪೀಡಿತ ಜಿಲ್ಲೆಗಳಿಗೆ ಜನರು ಪ್ರಯಾಣಿಸಲು ಹಾಗೂ ಅಲ್ಲಿಂದ ಬರಲು ನಿರ್ಬಂಧ ವಿಧಿಸಲಾಗಿತ್ತು. 1897ರ ಸಾಂಕ್ರಾಮಿಕ ಕಾಯ್ದೆ ಪ್ರಕಾರ, 1900ರ ನವೆಂಬರ್​ 16ರನಿಂದ ಡಿಸೆಂಬರ್​ವರೆಗೆ ಗುರುವಾಯೂರಿನಲ್ಲಿನ ಹಬ್ಬ ಮತ್ತು ಜಾತ್ರೆಗೆ ಪ್ರಯಾಣಿಸುವುದನ್ನ ನಿಷೇಧಿಸಲಾಗಿತ್ತು. ಯಾರಾದ್ರೂ ಪ್ರಯಾಣಿಸಿದರೆ ಹಾಗೂ ಉತ್ಸವದಲ್ಲಿ ಭಾಗಿಯಾಗಲು ಪ್ರಯತ್ನಿಸಿದರೆ ವಾಪಸ್​ ಕಳುಹಿಸಲಾಗುವುದು ಎಂದು ಹೇಳಲಾಗಿತ್ತು.

ಅಂದಿನ ಮಲಬಾರ್​ ಕಲೆಕ್ಟರ್​​ ಎಚ್​ಬಿ ಜಾಕ್ಸನ್​​ ಹೊರಡಿಸಿದ ಆದೇಶ ಮತ್ತು ಅದನ್ನು ಜನಸಾಮಾನ್ಯರಿಗೆ ತಲುಪಿಸಲು ಪ್ರಕಟವಾದ ಪತ್ರಿಕೆ ಜಾಹೀರಾತು ಇಂದಿನ ಲಾಕ್​ಡೌನ್​ಗೆ ಸಾಕ್ಷಿಯಾಗಿದೆ. ಗುರುವಾಯೂರ್​ ಏಕಾದಶಿ ಹಬ್ಬದ ಸಂದರ್ಭದಲ್ಲಿ ಪ್ಲೇಗ್​ನ ಸಾಂಕ್ರಾಮಿಕ ರೋಗ ತಡೆಗಟ್ಟಲು ಮೈಸೂರು, ಸೇಲಂ ಮತ್ತು ಇತರೆ ಪ್ಲೇಗ್​ ಪೀಡಿತ ಜಿಲ್ಲೆಗಳಿಂದ ಎಲ್ಲ ರೀತಿಯ ಪ್ರಯಾಣ ಮತ್ತು ಸಂಚಾರವನ್ನು ನಿಷೇಧಿಸಲಾಗಿತ್ತು.

Last Updated : May 16, 2021, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.