ಸತಾರಾ: ಮಹಾರಾಷ್ಟ್ರ ರಾಜಕೀಯ ಪ್ರಕ್ಷುಬ್ಧತೆಯ ಕೇಂದ್ರಬಿಂದುವಾಗಿರುವ ಬಂಡಾಯ ನಾಯಕ ಏಕನಾಥ್ ಶಿಂದೆಗೆ ಸ್ವಕ್ಷೇತ್ರದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಶಿಂದೆಯನ್ನು 'ಜನನಾಯಕ' ಎಂದು ಬಣ್ಣಿಸಿರುವ ಅಲ್ಲಿನ ಜನರು, ಅವರ ನಿರ್ಧಾರಗಳು ಎಂದಿಗೂ ಸರಿಯಾಗಿರುತ್ತವೆ. ಏಕನಾಥ್ ಶಿಂದೆ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ನೋಡಲು ಬಯಸುತ್ತೇವೆ ಎಂದಿದ್ದಾರೆ.
ಏಕನಾಥ್ ಶಿಂದೆ ಅವರ ಸ್ವಗ್ರಾಮವಾದ ಡೇರ್ನ ಜನರು ಶಿಂಧೆ ಅವರ ನಿರ್ಧಾರದ ಹಿಂದೆ ಬಲವಾಗಿ ನಿಂತಿದ್ದಾರೆ. ಅವರು ಶೀಘ್ರದಲ್ಲೇ ರಾಜ್ಯದ ಮುಖ್ಯಮಂತ್ರಿಯಾಗುವುದನ್ನು ನೋಡಲು ಬಯಸಿದ್ದಾರೆ. 58 ವರ್ಷದ ಶಿಂದೆ ಅವರು ಸತಾರಾ ಮೂಲದವರಾಗಿದ್ದರೂ, ಮುಂಬೈಗೆ ಹೊಂದಿಕೊಂಡಿರುವ ಥಾಣೆ-ಪಾಲ್ಘರ್ನ ಪ್ರಮುಖ ಶಿವಸೇನಾ ನಾಯಕರಾಗಿದ್ದಾರೆ. ಥಾಣೆಯ ಕೊಪ್ರಿ-ಪಚ್ಪಖಾಡಿಯ ಶಾಸಕರಾಗಿರುವ ಶಿಂದೆ ಅವರ ಆಕ್ರಮಣಕಾರಿ ಧೋರಣೆಯಿಂದಲೇ ಹೆಸರುವಾಸಿಯಾಗಿದ್ದಾರೆ.
ಶಿಂದೆ ನಿರ್ಧಾರಕ್ಕೆ ಬದ್ಧ: ಶಿಂದೆ ಸಾಹೇಬರು ತೆಗೆದುಕೊಂಡ ಯಾವುದೇ ನಿರ್ಧಾರಗಳು ಸರಿಯಾಗಿರುತ್ತವೆ. ನಾವು ಅವರೊಂದಿಗೆ ಗಟ್ಟಿಯಾಗಿ ನಿಂತಿದ್ದೇವೆ. ಅವರಂತಹ ಜನನಾಯಕ ವ್ಯಕ್ತಿ ಮತ್ತೊಬ್ಬರಿಲ್ಲ. ಬಡವರು ಮತ್ತು ನಿರ್ಗತಿಕರ ಪರವಾಗಿದ್ದಾರೆ ಎಂದು ರೂಪೇಶ್ ಶಿಂಧೆ ಎಂಬುವವರು ಹೇಳಿದ್ದಾರೆ.
ಶಿವಸೇನೆಯ 38 ಮತ್ತು ಪಕ್ಷೇತರರು ಸೇರಿ 50 ಕ್ಕೂ ಹೆಚ್ಚು ಶಾಸಕರು ಏಕನಾಥ್ ಶಿಂದೆ ನೇತೃತ್ವದಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡೆದ್ದು ಅಸ್ಸೋಂನ ಗುವಾಹಟಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.
ಓದಿ: Maharashtra Political Crisis: ಮುಂಬೈ, ಥಾಣೆಯಲ್ಲಿ ನಿಷೇಧಾಜ್ಞೆ ಜಾರಿ