ETV Bharat / bharat

ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯ ಶಿರಚ್ಛೇದಿಸಿ ಬರ್ಬರ ಹತ್ಯೆ: ಭುಗಿಲೆದ್ದ ಆಕ್ರೋಶ - ಕೃಷ್ಣ ಕುಮಾರಿ

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ ಧರ್ಮೀಯ ಮಹಿಳೆಯನ್ನು ದುಷ್ಕರ್ಮಿಗಳು ಅತ್ಯಂತ ಅಮಾನವೀಯ ರೀತಿಯಲ್ಲಿ ಕೊಲೆ ಮಾಡಿದ್ದಾರೆ. ಘಟನೆಗೆ ಭಾರತ ಕಳವಳ ವ್ಯಕ್ತಪಡಿಸಿದ್ದು, ಅಲ್ಪಸಂಖ್ಯಾತರನ್ನು ರಕ್ಷಿಸುವಂತೆ ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.

hindu-woman-daya-bheel-killed-in-sindh-province-pakistan
ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯ ಶಿರಚ್ಛೇದ ಮಾಡಿ ಕ್ರೂರವಾಗಿ ಹತ್ಯೆ
author img

By

Published : Dec 29, 2022, 6:52 PM IST

ಇಸ್ಲಾಮಾಬಾದ್​/ನವದೆಹಲಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಮಹಿಳೆಯ ಶಿರಚ್ಛೇದಿಸಿ, ಎದೆಯ ಭಾಗವನ್ನು ಕತ್ತರಿಸಿ, ಆಕೆಯ ದೇಹದ ಚರ್ಮವನ್ನೂ ಸುಲಿದು ಹಾಕಿದ್ದಾರೆ. ಪಾಕಿಸ್ತಾನಿಗಳ ಅಮಾನವೀಯ ದುಷ್ಕೃತ್ಯಕ್ಕೆ ಪಾಕಿಸ್ತಾನದಲ್ಲೇ ಆಕ್ರೋಶ ಭುಗಿಲೆದ್ದಿದೆ. ಭಾರತ ಕೂಡ ಪ್ರಕರಣವನ್ನು ಬಲವಾಗಿ ಖಂಡಿಸಿ, ಪಾಕಿಸ್ತಾನ ಅಲ್ಪಸಂಖ್ಯಾತರನ್ನು ರಕ್ಷಿಸಬೇಕೆಂದು ಆಗ್ರಹಿಸಿದೆ.

ಘಟನೆಯ ವಿವರ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಸುಮಾರು 40 ವರ್ಷದ ಹಿಂದೂ ಮಹಿಳೆ, ವಿಧವೆ ದಯಾ ಭೀಲ್ ಅವರನ್ನು ಕೊಲೆ ಮಾಡಲಾಗಿದೆ. ಭೀಬತ್ಸ್ಯ ಕೃತ್ಯವನ್ನು ಥಾರ್ಪಾರ್ಕರ್ ಸಿಂಧ್‌ನ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸೆನೆಟರ್ ಕೃಷ್ಣ ಕುಮಾರಿ ಖಚಿತಪಡಿಸಿದ್ದಾರೆ. ದಯಾ ಭೀಲ್ ಕೊಲೆ ನಡೆದ ಗ್ರಾಮಕ್ಕೆ ಅವರು ಪೊಲೀಸರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಘಟನೆಯ ಮಾಹಿತಿ ಪಡೆದಿದ್ದಾರೆ.

  • Daya Bhel 40 years widow brutally murdered and body was found in very bad condition. Her head was separated from the body and the savages had removed flesh of the whole head. Visited her village Police teams from Sinjhoro and Shahpurchakar also reached. pic.twitter.com/15bIb1NXhl

    — Krishna Kumari (@KeshooBai) December 29, 2022 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ಕೃಷ್ಣ ಕುಮಾರಿ, 40 ವರ್ಷದ ದಯಾ ಭೀಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆಕೆಯ ದೇಹವು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಲೆಯು ದೇಹದಿಂದ ಬೇರ್ಪಟ್ಟಿದೆ. ಆ ಅನಾಗರಿಕರು ಇಡೀ ತಲೆಯ ಮಾಂಸವನ್ನೂ ಹೊರಗೆ ತೆಗೆದುಹಾಕಿದ್ದಾರೆ. ಸಂತ್ರಸ್ತೆಯ ಗ್ರಾಮಕ್ಕೆ ಭೇಟಿ ನೀಡಿ ಸಿಂಜೋರೊ ಮತ್ತು ಶಾಹ್ಪುರ್ಚಕರ್‌ ಪೊಲೀಸರನ್ನು ಭೇಟಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಇಷ್ಟೊಂದು ಕ್ರೂರವಾಗಿ ಹತ್ಯೆಗೀಡಾದ ದಯಾ ಭೀಲ್ ಮತ್ತು ಆಕೆಯ ಪ್ರಕರಣವನ್ನು ಪಾಕಿಸ್ತಾನದ ಮಾಧ್ಯಮಗಳು ಸುದ್ದಿ ಮಾಡಿಲ್ಲ. ಈ ಬಗ್ಗೆ ಇಸ್ಲಾಮಾಬಾದ್‌ನ ರಾಜಕಾರಣಿಗಳು ಅಥವಾ ಸಿಂಧ್ ಸರ್ಕಾರ ಕೂಡಾ ಯಾವುದೇ ಹೇಳಿಕೆ ನೀಡಿಲ್ಲ. ಪೊಲೀಸರು ಆರೋಪಿಗಳನ್ನು ಬಂಧಿಸುತ್ತಾರೆಯೇ?. ತಮ್ಮ ಮಾತೃಭೂಮಿಯಾದ ಸಿಂಧ್‌ನಲ್ಲಿ ಹಿಂದೂಗಳನ್ನು ಸಮಾನ ನಾಗರಿಕರಾಗಿ ಪರಿಗಣಿಸುತ್ತಾರೆಯೇ? ಎಂದು ದಿ ರೈಸ್ ನ್ಯೂಸ್ ಎಂಬ​ ಸುದ್ದಿಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಅಲ್ಪಸಂಖ್ಯಾತರನ್ನು ರಕ್ಷಿಸಿ-ಭಾರತ: ಪಾಕಿಸ್ತಾನದಲ್ಲಿ ನಡೆದ ಹಿಂದೂ ಮಹಿಳೆಯ ಹತ್ಯೆ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನವು ತನ್ನ ಅಲ್ಪಸಂಖ್ಯಾತರನ್ನು ರಕ್ಷಿಸಬೇಕೆಂದು ತಾಕೀತು ಮಾಡಿದ್ದಾರೆ. ಹಿಂದೂ ಮಹಿಳೆಯ ಹತ್ಯೆ ಕುರಿತ ವರದಿಗಳನ್ನು ಗಮನಿಸಿದ್ದೇವೆ. ಆದರೆ ಪ್ರಕರಣದ ಬಗ್ಗೆ ನಿರ್ದಿಷ್ಟ ವಿವರಗಳಿಲ್ಲ. ಆದರೆ, ಅಲ್ಲಿನ ಅಲ್ಪಸಂಖ್ಯಾತರ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮವು ಪಾಕಿಸ್ತಾನದ ಜವಾಬ್ದಾರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಿಜಾಬ್​ಗೆ ವಿರೋಧ ವ್ಯಕ್ತಪಡಿಸಿದ ಇರಾನಿನ್ ಚೆಸ್​​ ಆಟಗಾರ್ತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.