ETV Bharat / bharat

ಹಿಂದೂ ರಾಷ್ಟ್ರ ಪರಿಕಲ್ಪನೆ ಗಾಂಧಿ ಸಿದ್ಧಾಂತಕ್ಕೆ ವಿರುದ್ಧ: ಬಿಹಾರ ಸಿಎಂ ನಿತೀಶ್ ಕುಮಾರ್

author img

By

Published : Feb 17, 2023, 3:41 PM IST

ಹಿಂದೂ ರಾಷ್ಟ್ರ ಪರಿಕಲ್ಪನೆಯ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.

Concept of Hindu Rashtra against Mahatma Gandhis ideals Nitish

ಪಾಟ್ನಾ : ಹಿಂದೂ ರಾಷ್ಟ್ರ ಎಂಬ ಪರಿಕಲ್ಪನೆಯು ಮಹಾತ್ಮಾ ಗಾಂಧೀಜಿಯವರ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಈ ಮೂಲಕ ಸಂಘ ಪರಿವಾರದ ಹಿಂದೂ ರಾಷ್ಟ್ರ ಪರಿಕಲ್ಪನೆಗೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಾರದ ಆರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಿಂದೂ ರಾಷ್ಟ್ರ ಪರಿಕಲ್ಪನೆಗೆ ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದ್ದರು. ಇದರ ಬಗ್ಗೆ ಸಿಎಂ ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಗಾಂಧೀಜಿಯವರ ಸಿದ್ಧಾಂತಕ್ಕೆ ವಿರುದ್ಧವಾದ ಯಾವುದಕ್ಕೂ ನಾವು ಕಿವಿಗೊಡಬಾರದು. ಈ ದೇಶದಲ್ಲಿ ಎಲ್ಲ ಧರ್ಮದ ಜನರು ಒಗ್ಗಟ್ಟಾಗಿ ಬದುಕುತ್ತಿದ್ದಾರೆ. ಗಾಂಧೀಜಿ ಏಕತೆಗಾಗಿ ಹೋರಾಡಿದ್ದರು. ಇದೇ ಅವರ ಹತ್ಯೆಗೆ ಕಾರಣವಾಗಿತ್ತು ಎಂದು ನಿತೀಶ್ ಹೇಳಿದರು. ನಿತೀಶ್ ಕುಮಾರ್ ತಮ್ಮ ಆಡಳಿತದಲ್ಲಿ ಗಾಂಧೀಜಿಯವರ ಸಿದ್ಧಾಂತದ ಮೇಲೆ ನೀತಿಗಳನ್ನು ರೂಪಿಸುತ್ತಾರೆ ಎನ್ನಲಾಗಿದೆ.

ಜಾತ್ಯತೀತತೆಯ ಕುರಿತು ಗಾಂಧಿಯವರ ನಿಲುವಿನಿಂದ ವಿಮುಖರಾದರೆ ಅದು ವಿಕೃತಿಗಳಿಗೆ ಕಾರಣವಾಗಬಹುದು ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ. 1974 ರ ಬಿಹಾರ ಚಳವಳಿಯ ಕಾಲದಲ್ಲಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದ ನಿತೀಶ್ ಕುಮಾರ್ ಅವರು 1990 ರ ದಶಕದಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು ಮತ್ತು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು. ಸುದೀರ್ಘ ಅವಧಿಗೆ ಸಿಎಂ ಆಗಿರುವ ಹೆಗ್ಗಳಿಕೆ ಹೊಂದಿರುವ ಇವರು, 2005 ರಲ್ಲಿ ಪ್ರಥಮ ಬಾರಿಗೆ ಬಿಹಾರ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಮೈತ್ರಿಯ ಹೊರತಾಗಿಯೂ ಬಿಜೆಪಿಯ ಹಿಂದುತ್ವ ನಿಲುವಿಗೆ ಮನ್ನಣೆ ನೀಡದೆ ಇವರು ಆಡಳಿತ ನಡೆಸಿದ್ದಾರೆ.

ಹಿಂದುತ್ವವಾದಿ ಇಮೇಜ್ ಹೊಂದಿದ್ದ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಬಿಹಾರದಲ್ಲಿ ಚುನಾವಣಾ ಪ್ರಚಾರ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ನಿತೀಶ್ ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡಿದ್ದರು. ಆದರೆ ಅವರು ಬಿಜೆಪಿಯೊಂದಿಗೆ 2017 ರಲ್ಲಿ ಮತ್ತೆ ಕೈಜೋಡಿಸಿದರು. ಆದಾಗ್ಯೂ 5 ವರ್ಷಗಳ ನಂತರ ಅಂದರೆ ಇತ್ತೀಚೆಗೆ ಅವರು ಮತ್ತೊಮ್ಮೆ ಬಿಜೆಪಿಯಿಂದ ದೂರವಾಗಿದ್ದಾರೆ. ಅಯೋಧ್ಯೆ, 370 ನೇ ವಿಧಿ, ತ್ರಿವಳಿ ತಲಾಖ್ ಮತ್ತು ಎನ್‌ಆರ್‌ಸಿಯಂತಹ ಪ್ರಮುಖ ವಿಷಯಗಳಲ್ಲಿ ನಿತೀಶ್ ತಮ್ಮದೇ ಆದ ಪ್ರತ್ಯೇಕ ಸೈದ್ಧಾಂತಿಕ ನಿಲುವು ಹೊಂದಿದ್ದಾರೆ.

ಬಿಹಾರ ಸರ್ಕಾರ ರೈತ ವಿರೋಧಿಯಾಗಿದೆ ಎಂಬ ಆರ್​ಜೆಡಿ ಶಾಸಕ ಹಾಗೂ ಮಾಜಿ ಸಚಿವ ಸುಧಾಕರ ಸಿಂಗ್ ಅವರ ಹೇಳಿಕೆಯನ್ನು ನಿತೀಶ್ ತಳ್ಳಿಹಾಕಿದರು. ರೈತರಿಗಾಗಿ ನಾವು ಏನೆಲ್ಲ ಮಾಡಿದ್ದೇವೆ ಎಂಬುದು ಇವರಿಗೆ ಗೊತ್ತಿಲ್ಲ. ಈ ವಿಚಾರದಲ್ಲಿ ಎಷ್ಟೆಲ್ಲ ಸಾಧಿಸಲಾಗಿದೆ ಎಂಬುದು ಸಹ ಇವರಿಗೆ ಗೊತ್ತಿಲ್ಲ ಎಂದರು.

ಬಿಬಿಸಿ ಮೇಲಿನ ದಾಳಿಗೆ ಖಂಡನೆ: ದೆಹಲಿ ಮತ್ತು ಮುಂಬೈನಲ್ಲಿನ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಸಮೀಕ್ಷೆಗಳು ನರೇಂದ್ರ ಮೋದಿ ಸರ್ಕಾರದ ಅಸಹಿಷ್ಣುತೆಗೆ ಸಾಕ್ಷಿಯಾಗಿದೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ. ನಾನು ಇಷ್ಟು ದಿನ ನನ್ನ ಸಮಾಧಾನ್ ಯಾತ್ರೆಯಲ್ಲಿ ನಿರತನಾಗಿದ್ದೆ. ಆದರೆ ನಾನು ಪತ್ರಿಕೆಗಳಲ್ಲಿ ಈ ಬಗ್ಗೆ ಓದಿದ್ದೇನೆ. ಅದರ ಬಗ್ಗೆ ಹೆಚ್ಚು ವಿವರವಾಗಿ ತಿಳಿಯಲು ಪ್ರಯತ್ನಿಸುತ್ತೇನೆ ಎಂದು ಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ: ವೇಶ್ಯಾವಾಟಿಕೆ ದಂಧೆ: ಠಾಣೆ ಎದುರೇ ಬೆಂಕಿ ಹಂಚಿಕೊಳ್ಳುವ ಬೆದರಿಕೆಯೊಡ್ಡಿದ ತೃತೀಯ ಲಿಂಗಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.