ETV Bharat / bharat

ಲವ್​ ಜಿಹಾದ್​ ವಿರುದ್ಧ ಆಕ್ರೋಶ.. ರಸ್ತೆಗಿಳಿದು ಪ್ರತಿಭಟಿಸಿದ ಹಿಂದೂ ಸಂಘಟನೆಗಳು

author img

By

Published : Sep 3, 2022, 2:17 PM IST

ಗುಜರಾತ್​​ನಲ್ಲಿ ನಡೆದ ಲವ್​ ಜಿಹಾದ್​ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿವಿಧ ಹಿಂದೂಪರ ಸಂಘಟನೆ ಹಾಗೂ ವ್ಯಾಪಾರ ಒಕ್ಕೂಟಗಳು ಬಂದ್​​​ಗೆ ಕರೆ ನೀಡಿವೆ.

rally against love jihad
rally against love jihad

ಬನಸ್ಕಾಂತ(ಗುಜರಾತ್​): ಲವ್​ ಜಿಹಾದ್​ ವಿರುದ್ಧ ಗುಜರಾತ್​​ನಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದೆ. ಹಿಂದೂಪರ ಸಂಘಟನೆಗಳು ಬಂದ್​ಗೆ ಕರೆ ನೀಡಿರುವ ಕಾರಣ, ಅನೇಕರು ರ‍್ಯಾಲಿಯಲ್ಲಿ ಭಾಗಿಯಾಗಿದ್ದಾರೆ. ಮತಾಂತರ ವಿಚಾರದಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಕಳೆದ ಕೆಲ ತಿಂಗಳ ಅಂತರದಲ್ಲಿ ಮೂರು ಕುಟುಂಬಗಳು ಮತಾಂತರಗೊಂಡಿರುವ ಕಾರಣ ವಿವಿಧ ಸಂಘಟನೆಗಳು ರಸ್ತೆಗಿಳಿದಿವೆ.

ಯಾವ ಕಾರಣಕ್ಕಾಗಿ ಪ್ರತಿಭಟನೆ: ದಿಸಾ ತಾಲೂಕಿನ ರಾಜ್​ಪುರ ಗವಾಡಿ ಗ್ರಾಮದ ವ್ಯಕ್ತಿಯೋರ್ವ ಕಾಲೇಜ್​​ನಲ್ಲಿ ಓದುತ್ತಿದ್ದ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದ. ಇದರ ಬೆನ್ನಲ್ಲೇ ಹುಡುಗಿಯ ತಾಯಿ ಹಾಗೂ ಸಹೋದರನನ್ನು ಮತಾಂತರಗೊಳಿಸಲಾಗಿತ್ತು. ಜೊತೆಗೆ 25 ಲಕ್ಷ ರೂಪಾಯಿಗೆ ಬೇಡಿಕೆ ಇಡಲಾಗಿತ್ತು. ಹೀಗಾಗಿ, ಬಾಲಕಿಯ ತಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ, ಪೊಲೀಸರು ಕೆಲ ಆರೋಪಿಗಳನ್ನು ಮಾತ್ರ ಬಂಧಿಸಿದ್ದರು. ಇದರ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗ್ತಿದೆ.

ಲವ್​ ಜಿಹಾದ್​ ವಿರುದ್ಧ ಗುಜರಾತ್​​ನಲ್ಲಿ ಆಕ್ರೋಶ

ಇದನ್ನೂ ಓದಿ: ತನ್ನ ಹೆಸರು ಬದಲಿಸಿ ಹುಡುಗಿಯ ಮತಾಂತರ ಯತ್ನ: ಯುಪಿಯಲ್ಲಿ ಯುವಕನ ಬಂಧನ

ಗುಜರಾತ್​​ನ ದಿಶಾ ಗಂಜ್‌ಬಜಾರ್, ದಿಸಾ ಶೇಕ್ ಮಾರ್ಕೆಟ್ ಮತ್ತು ಕೋಲ್ಡ್ ಸ್ಟೋರೇಜ್ ಅಸೋಸಿಯೇಷನ್ ಸೇರಿ ಅನೇಕ ಸಂಘಟನೆ, ಒಕ್ಕೂಟಗಳು ಬಂದ್​ಗೆ ಬೆಂಬಲ ಸೂಚಿಸಿವೆ. ಇದರ ಜೊತೆಗೆ ಜಿಲ್ಲೆಯ ಅನೇಕ ಗ್ರಾಮದ ಜನರು ಭಾಗಿಯಾಗಿದ್ದು, 200ಕ್ಕೂ ಹೆಚ್ಚು ಟ್ರ್ಯಾಕ್ಟರ್​​​ ತೆಗೆದುಕೊಂಡು ಬಂದಿದ್ದರು. ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದ ಕಾರಣ ಪೊಲೀಸರು ಬಿಗಿ ಬಂದೋಬಸ್ತ್​ ಕೈಗೊಂಡಿದ್ದರು. ಬೆಳಗ್ಗೆ 10 ಗಂಟೆಯಿಂದ ಆರಂಭಗೊಂಡಿರುವ ಪ್ರತಿಭಟನೆಯಲ್ಲಿ 10 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.