ಕರ್ನೂಲ್(ಆಂಧ್ರಪ್ರದೇಶ): ಕರ್ನೂಲ್ ಜಿಲ್ಲೆಯ ಕೌತಾಳಂ ಮಂಡಲ ಕೇಂದ್ರದಲ್ಲಿರುವ ಖಾದರ್ ಲಿಂಗ ಸ್ವಾಮಿ ದರ್ಗಾದಲ್ಲಿ ಜಾತಿ, ಧರ್ಮ ಭೇದವಿಲ್ಲದೆ ಯುಗಾದಿ ಹಬ್ಬ ಆಚರಿಸಲಾಗುತ್ತಿದ್ದು, ಶತಮಾನಗಳಿಂದಲೂ ದರ್ಗಾವು ಹಿಂದೂ-ಮುಸ್ಲಿಂರ ಮಧ್ಯೆ ಸಾಮರಸ್ಯ ಸಾರುತ್ತ ಬರುತ್ತಿದೆ. ಇಲ್ಲಿ ಪ್ರತಿ ವರ್ಷ ಮುಸ್ಲಿಂ ಬಾಂಧವರ ಸಮ್ಮುಖದಲ್ಲಿ ಬ್ರಾಹ್ಮಣರು ಯುಗಾದಿ ಪಂಚಾಂಗದ ಬಗ್ಗೆ ವಿವರಿಸುವುದು ವಿಶೇಷವಾಗಿದೆ.
ಪ್ರತಿವರ್ಷದಂತೆ ಈ ಸಲವೂ ಕೂಡ ಬ್ರಾಹ್ಮಣರಾದ ಬದರಿನಾಥ್ ಎಂಬುವರು ಕ್ಯಾಲೆಂಡರ್ ಬಗ್ಗೆ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ದರ್ಗಾ ಟ್ರಸ್ಟಿ ಮುನಪಾಷಾ ಹಾಗೂ ಅನೇಕ ಮುಸ್ಲಿಂ ಬಾಂಧವರು ಕುಳಿತುಕೊಂಡು ಪಂಚಾಂಗವನ್ನು ಆಲಿಸಿದರು. ಹತ್ತಿ ಬೆಳೆ ಹಾಗೂ ಕೆಂಪು ಕಾಳು ಚೆನ್ನಾಗಿ ಬೆಳೆದು, ಮಳೆ ಸಮೃದ್ಧಿಯಾಗಿ ಆಗಲಿದೆ ಎಂದು ಬದರಿನಾಥ್ ಪಂಚಾಂಗದ ಬಗ್ಗೆ ತಿಳಿಸಿದರು.
ದರ್ಗಾದಲ್ಲಿ ಕಳೆದ 355 ವರ್ಷಗಳಿಂದಲೂ ಪಂಚಾಂಗ ಆಲಿಸುವ ಪದ್ಧತಿ ನಡೆದುಕೊಂಡು ಬರುತ್ತಿದೆ. ಇದಕ್ಕೂ ಮುನ್ನ ಖಾದರ್ಲಿಂಗಸ್ವಾಮಿ ದರ್ಗಾದಲ್ಲಿ ಅರ್ಚಕರಿಂದ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.
ಇದನ್ನೂ ಓದಿ: ಫೋನ್ ಮೂಲಕವೇ ವಿಚ್ಛೇದನ: ಪತ್ನಿಗೆ ಒಂದೇ ರೂಪಾಯಿ ಪರಿಹಾರ.. ಹೀಗೊಂದು ವಿಚಿತ್ರ ತೀರ್ಪು!