ETV Bharat / bharat

ಹಿಮಾಚಲ ಪ್ರದೇಶದಲ್ಲಿ ಶೇ 73.23 ಮತದಾನ: ಡಿ.8ಕ್ಕೆ ಫಲಿತಾಂಶ - Himachal Pradesh election result

ಹಿಮಾಚಲ ಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಶೇ73.23 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

assembly polls
ಹಿಮಾಚಲ ಪ್ರದೇಶ ಚುನಾವಣೆ
author img

By

Published : Nov 13, 2022, 8:41 AM IST

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ನಿನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 73.23 ರಷ್ಟು ಮತದಾನವಾಗಿದೆ. ಈ ಬಾರಿ ಸೋಲನ್ ಜಿಲ್ಲೆಯಲ್ಲಿ ಶೇ 76.82 ರಷ್ಟು ಅಂದರೆ, ರಾಜ್ಯದಲ್ಲೇ ಅತಿ ಹೆಚ್ಚು ಮತದಾನವಾಗಿದೆ. ಇನ್ನುಳಿದಂತೆ, ಶಿಮ್ಲಾದಲ್ಲಿ ಶೇ 69.88, ಉನಾದಲ್ಲಿ ಶೇ 76.69 ಹಾಗು ಕುಲುವಿನಲ್ಲಿ ಶೇ 76.15ರಷ್ಟು ವೋಟಿಂಗ್ ದಾಖಲಾಗಿದೆ.

ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಯಿತು. ರಾಜ್ಯದ 68 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್, ಎಎಪಿ ಮತ್ತು ಇತರೆ ಪಕ್ಷಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಹಿಮಾಚಲ ಚುನಾವಣೆ: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ, 300 ಯೂನಿಟ್​ ಉಚಿತ ವಿದ್ಯುತ್!

ವಿಶೇಷ ಅಂದ್ರೆ, ಈ ಬಾರಿ ಮೈಕೊರೆಯುವ ಮೈನಸ್ 10 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲೂ ಮತದಾರರು ಬಂದು ತಮ್ಮ ಹಕ್ಕು ಚಲಾಯಿಸುವ ಮೂಲಕ ಮಾದರಿಯಾದರು. 15,256 ಅಡಿ ಎತ್ತರ ಪ್ರದೇಶದ ತಾಶಿಗಂಗ್‌ನಲ್ಲಿ ಶೇ.100 ರಷ್ಟು ಮತದಾನವಾಗಿದೆ. ಕಾಜಾದಿಂದ ಸುಮಾರು 34 ಕಿಮೀ ದೂರದಲ್ಲಿರುವ ತಾಶಿಗಾಂಗ್ ಗ್ರಾಮವು ಭಾರತ-ಟಿಬೆಟ್ ಗಡಿಯ ಸಮೀಪವಿರುವ ಸ್ಪಿತಿ ಕಣಿವೆಯಲ್ಲಿನ ಅತಿ ಎತ್ತರದ ಪ್ರದೇಶವಾಗಿದೆ. ಈ ಗ್ರಾಮದ ಬಹುತೇಕರು ಸಾಂಪ್ರದಾಯಿಕ ಉಡುಗೆ ತೊಟ್ಟೇ ನಿನ್ನೆ ಮತಗಟ್ಟೆಗೆ ಆಗಮಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.