ETV Bharat / bharat

ಹಿಮಾಚಲ ಪ್ರದೇಶ, ಗುಜರಾತ್​ನಲ್ಲಿ ಬಿಜೆಪಿ ಸೇರಿದ ಕಾಂಗ್ರೆಸ್‌ ನಾಯಕರು - ಗುಜರಾತಿ ಉದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್​ ಅದಾನಿ

ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ಗುಜರಾತ್​ ಮತ್ತು ಹಿಮಾಚಲ ಪ್ರದೇಶದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ.

himachal-pradesh-and-gujarat-congress-leaders-join-bjp
ಹಿಮಾಚಲದಲ್ಲಿ ಕೈ ಬಿಟ್ಟ ಕಾರ್ಯಾಧ್ಯಕ್ಷ, ಉಪಾಧ್ಯಕ್ಷ... ಗುಜರಾತ್​ನಲ್ಲೂ ಕಾಂಗ್ರೆಸ್​ ತೊರೆದ ನಾಯಕರು
author img

By

Published : Aug 17, 2022, 6:07 PM IST

Updated : Aug 17, 2022, 6:49 PM IST

ನವದೆಹಲಿ: ಗುಜರಾತ್​ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ಗೆ ಸ್ವಪಕ್ಷೀಯ ನಾಯಕರೇ ಶಾಕ್​ ನೀಡಿದ್ದಾರೆ. ಉಭಯ ರಾಜ್ಯಗಳಲ್ಲೂ ಪಕ್ಷದ ನಾಲ್ವರು ಪ್ರಮುಖ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಕಾರ್ಯಾಧ್ಯಕ್ಷ ಪವನ್​ ಕುಮಾರ್​ ಕಾಜಲ್​ ಹಾಗೂ ಉಪಾಧ್ಯಕ್ಷ ಲಖ್ವಿಂದರ್​ ಸಿಂಗ್ ರಾಣಾ ಕೇಸರಿ ಪಕ್ಷದ ಬಾವುಟ ಹಿಡಿದಿದ್ದಾರೆ. ಈ ಇಬ್ಬರೂ ಕೂಡ ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಜೈರಾಮ್​ ಠಾಕೂರ್​, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅರುಣ್​ ಸಿಂಗ್​ ಸಮ್ಮುಖದಲ್ಲಿ ಕೇಸರಿ ಬಾವುಟ ಹಿಡಿದರು. ಪವನ್​ ಮತ್ತು ಲಖ್ವಿಂದರ್​ ಇಬ್ಬರೂ ಕಾಂಗ್ರೆಸ್​ ಪಕ್ಷದಿಂದ ಎರಡು ಬಾರಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು.

ಈ ಸಂದರ್ಭದಲ್ಲಿ ಸಿಎಂ ಜೈರಾಮ್​ ಠಾಕೂರ್ ಮಾತನಾಡಿ, ಪವನ್​ ಕುಮಾರ್​ ಕಾಜಲ್​ ಹಿಂದುಳಿದ ವರ್ಗಗಳ ಪ್ರಬಲ ನಾಯಕರಾಗಿದ್ದಾರೆ. ಇವರ ಸೇರ್ಪಡೆಯಿಂದ ಬಿಜೆಪಿಗೆ ಬಲ ಬಂದಿದೆ ಎಂದು ಹೇಳಿದರು.

ಗುಜರಾತ್​ನಲ್ಲೂ ಕಾಂಗ್ರೆಸ್ ತೊರೆದ ಇಬ್ಬರು: ಗುಜರಾತ್​ನಲ್ಲೂ ಇಬ್ಬರು ಹಿರಿಯ ನಾಯಕರು ಕಾಂಗ್ರೆಸ್ ತೊರೆದು, ಕಮಲ ಪಾಳಯಕ್ಕೆ ಸೇರ್ಪಡೆಯಾಗಿದ್ದಾರೆ. ನರೇಶ್​ ರಾವಲ್​ ಮತ್ತು ರಾಜು ಪರ್ಮಾರ್​ ಅವರು ಗುಜರಾತ್​ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್​.ಪಾಟೀಲ್​ ನೇತೃತ್ವದಲ್ಲಿ ಸೇರ್ಪಡೆಗೊಂಡರು.

ನಂತರ ಮಾತನಾಡಿರುವ ನರೇಶ್​ ರಾವಲ್​, ಕಾಂಗ್ರೆಸ್​ ರಾಷ್ಟ್ರೀಯ ನಾಯಕತ್ವಕ್ಕೆ ಗುಜರಾತ್​ ಮತ್ತು ಗುಜರಾತಿಗಳ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಗೌರವಿಸುವುದಿಲ್ಲ. ಗುಜರಾತಿ ಉದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್​ ಅದಾನಿ ಬಗ್ಗೆಯೂ ಗೌರವ ಹೊಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್​ ಈಗಾಗಲೇ ನೆಲಮಟ್ಟಕ್ಕೆ ಕುಸಿದಿದೆ. ಅದು ಮತ್ತೆ ಪುನಶ್ಚೇತನವಾಗಲು ಸಾಧ್ಯವೇ ಇಲ್ಲ. ಹೀಗಾಗಿಯೇ ನಾನು ಕಾಂಗ್ರೆಸ್​ ಬಿಟ್ಟಿರುವೆ. ಕಳೆದ ಎರಡ್ಮೂರು ದಶಕಗಳ ಹಿಂದಿನ ಪಕ್ಷವಾಗಿ ಈಗ ಉಳಿದಿಲ್ಲ. ಕಟಿಬದ್ಧ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೂ ಗೌರವ ಸಿಗುತ್ತಿಲ್ಲ ಎಂದೂ ರಾವಲ್​ ಹೇಳಿದರು.

ಇದನ್ನೂ ಓದಿ: ಮೇಕ್​ ಇಂಡಿಯಾ ನಂ.1 ಮಿಷನ್​​ ಘೋಷಿಸಿದ ದೆಹಲಿ ಸಿಎಂ ಕೇಜ್ರಿವಾಲ್​

Last Updated : Aug 17, 2022, 6:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.