ETV Bharat / bharat

ಬಿಜೆಪಿ ನಾಯಕ ಠಾಕೂರ್ ಭೇಟಿಯಾದ ಹಿಮಾಚಲ ಕಾಂಗ್ರೆಸ್​ ನಿಯೋಜಿತ ಸಿಎಂ ಸುಖ್ವಿಂದರ್ - ಜೈರಾಮ್​​ ಠಾಕೂರ್​

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮಾಜಿ ಮುಖ್ಯಮಂತ್ರಿಯಾದ ಬಿಜೆಪಿ ನಾಯಕ ಜೈರಾಮ್​​ ಠಾಕೂರ್​ ಅವರನ್ನು ಕಾಂಗ್ರೆಸ್​ ನಿಯೋಜಿತ ಸಿಎಂ ಸುಖ್ವಿಂದರ್ ಸಿಂಗ್ ಸುಖು ಭೇಟಿ ಮಾಡಿದ್ದಾರೆ.

himachal-cm-designate-sukhwinder-singh-sukhu-meet-former-cm-jairam-thakur
ಬಿಜೆಪಿ ನಾಯಕ ಠಾಕೂರ್ ಭೇಟಿಯಾದ ಹಿಮಾಚಲ ಕಾಂಗ್ರೆಸ್​ ನಿಯೋಜಿತ ಸಿಎಂ ಸುಖ್ವಿಂದರ್
author img

By

Published : Dec 10, 2022, 10:34 PM IST

ಶಿಮ್ಲಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ನಿಯೋಜಿತ ಮುಖ್ಯಮಂತ್ರಿಯಾದ ಕಾಂಗ್ರೆಸ್​ ನಾಯಕ ಸುಖ್ವಿಂದರ್ ಸಿಂಗ್ ಸುಖು ಹಾಗೂ ಇತರ ಕಾಂಗ್ರೆಸ್​ ಮುಖಂಡರು ಮಾಜಿ ಮುಖ್ಯಮಂತ್ರಿಯಾದ ಬಿಜೆಪಿ ನಾಯಕ ಜೈರಾಮ್​​ ಠಾಕೂರ್​ ಅವರನ್ನು ಭೇಟಿ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್​ ಸರ್ಕಾರ ರಚನೆಗೆ ಸಜ್ಜಾಗಿದೆ. ಭಾನುವಾರ ಮುಂದಿನ ಮುಖ್ಯಮಂತ್ರಿ ಆಗಿ ಸುಖ್ವಿಂದರ್ ಸಿಂಗ್ ಸುಖು ಪದಗ್ರಹಣ ಮಾಡಲಿದ್ದಾರೆ. ಜೊತೆಗೆ ಮತ್ತೊಬ್ಬ ನಾಯಕ ಮುಖೇಶ್ ಅಗ್ನಿಹೋತ್ರಿ ಅವರನ್ನು ಉಪ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.

ಇದರ ಬೆನ್ನಲ್ಲೇ ನಿಗರ್ಮಿತ ಮುಖ್ಯಮಂತ್ರಿಯಾದ ಜೈರಾಮ್​​ ಠಾಕೂರ್ ಅವರ ನಿವಾಸಕ್ಕೆ ಸುಖ್ವಿಂದರ್ ಸಿಂಗ್ ಸುಖು ಹಾಗೂ ಮುಖೇಶ್ ಅಗ್ನಿಹೋತ್ರಿ ತೆರಳಿದ್ದರು. ಇವರೊಂದಿಗೆ ಎಐಸಿಸಿ ವೀಕ್ಷಕರಾದ ಛತ್ತೀಸ್​ಗಢ ಸಿಎಂ ಭೂಪೇಶ್​ ಬಘೇಲ್ ಹಾಗೂ ಹಿಮಾಚಲ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಶುಕ್ಲಾ ಕೂಡ ಜೈರಾಮ್​​ ಠಾಕೂರ್​ ನಿವಾಸಕ್ಕೆ ತೆರಳಿರುವುದು ಅಚ್ಚರಿಯನ್ನು ಉಂಟು ಮಾಡಿದೆ.

  • Himachal Pradesh CM-designate Sukhwinder Singh Sukhu, Chhattisgarh CM Bhupesh Baghel, Congress Himachal Pradesh in-charge Rajeev Shukla and other Congress leaders meet former Himachal Pradesh CM Jairam Thakur at CM residence in Shimla. pic.twitter.com/EldzoV7eP5

    — ANI (@ANI) December 10, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಹಿಮಾಚಲ ಫಲಿತಾಂಶ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಜೈರಾಮ್ ಠಾಕೂರ್

68 ಸದಸ್ಯ ಬಲದ ಹಿಮಾಚಲ ವಿಧಾನಸಭೆಯ ಚುನಾವಣಾ ಫಲಿತಾಂಶವು ಡಿ.8ರಂದು ಪ್ರಕಟವಾಗಿದ್ದು, ಅಧಿಕಾರದಲ್ಲಿದ್ದ ಜೈರಾಮ್​​ ಠಾಕೂರ್ ನೇತೃತ್ವದ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್​​ 40 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸುವ ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿಗೆ 25 ಸ್ಥಾನಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ. ಉಳಿದಂತೆ ಮೂವರು ಪಕ್ಷೇತರರು ಆಯ್ಕೆಯಾಗಿದ್ದಾರೆ.

ಇನ್ನು, ಹಿಮಾಚಲ ಪ್ರದೇಶದಲ್ಲಿ 1985ರಿಂದಲೂ ಯಾವುದೇ ಪಕ್ಷವು ಸತತವಾಗಿ ಅಧಿಕಾರ ಪಡೆಯಲು ವಿಫಲವಾಗಿದೆ. ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ಅಧಿಕಾರದ ಚುಕ್ಕಾಣಿಯನ್ನು ಹಿಮಾಚಲ ಮತದಾರರು ಬದಲಾಯಿಸುತ್ತಲೇ ಬಂದಿದ್ದಾರೆ. ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಜೈರಾಮ್​​ ಠಾಕೂರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ: ನಾಳೆ ಹಿಮಾಚಲ ಸಿಎಂ ಆಗಿ ಸುಖ್ವಿಂದರ್ ಪದಗ್ರಹಣ: ಡಿಸಿಎಂ ಆಗಿ ಅಗ್ನಿಹೋತ್ರಿ ನೇಮಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.