ETV Bharat / bharat

ದಿಗ್ಬ್ರಮೆ ಹುಟ್ಟಿಸಿದ ಪಕ್ಷದ ಆಂತರಿಕ ಸಮೀಕ್ಷೆ.. ಹಿಮಾಚಲದಲ್ಲಿ ಮತ್ತೆ ಅಧಿಕಾರ ಹಿಡಿಯಲೂ ಬಿಜೆಪಿ ಪ್ಲಾನ್ ಬಿ ರೆಡಿ! - ನಿರುದ್ಯೋಗ

ಹಿಮಾಚಲದಲ್ಲಿ 'ಮಿಷನ್ ಪುನರಾವರ್ತನೆ' ಯಶಸ್ವಿ ಆಗುವುದು ಅಷ್ಟು ಸುಲಭವಲ್ಲ ಎಂದು ಬಿಜೆಪಿ ಆಂತರಿಕ ವಲಯ ಸಮೀಕ್ಷೆ ಕೈಗೊಂಡ ಗ್ರೌಂಡ್ ರಿಪೋರ್ಟ್ ದಲ್ಲಿ ಗೊತ್ತಾಗಿದ್ದು, ಬಿಜೆಪಿ ಮುಂಗಡವಾಗಿ ರಕ್ಷಣಾತ್ಮಕ ರಾಜಕೀಯ ಚದುರಂಗ ಆಡಲು ಪ್ರಾರಂಭಿಸಿದೆ. ಅಲ್ಪ ಬಹುಮತ ಕೊರತೆ ಎದುರಾದರೆ ಸರ್ಕಾರ ರಚನೆಗಾಗಿ ಪಕ್ಷವು ಪ್ಲಾನ್-ಬಿ ತಂತ್ರವನ್ನೂ ಪ್ರಯೋಗಿಸಲೂ ಸಜ್ಜಾಗಿದೆ. ಮತ ಎಣಿಕೆ ದಿನ ಮುನ್ನವೇ ಬಂಡಾಯಗಾರರು ಮತ್ತು ಸ್ವತಂತ್ರ ಅಭ್ಯರ್ಥಿಗಳ ವಿಶ್ವಾಸವನ್ನು ಗೆಲ್ಲುವಲ್ಲಿ ತನ್ನ ದೃಷ್ಟಿ ಹರಿಸಿದೆ.

BJP flag
ಬಿಜೆಪಿ ಧ್ವಜ
author img

By

Published : Dec 7, 2022, 5:50 PM IST

ಶಿಮ್ಲಾ: ಹಿಮಾಚಲ ಪ್ರದೇಶದ ವಿಧಾನಸಭೆ ಮತದಾನ ಮುಗಿದಿದ್ದು ಗದ್ದುಗೆ ಹಿಡಿಯಲು ಪಕ್ಷಗಳು ನಾಳೆಯ ಫಲಿತಾಂಶವನ್ನು ಕಾತರದಿಂದ ಕಾಯುತ್ತಿವೆ. ಆದರಲ್ಲೂ ಮಾಧ್ಯಮಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ಪಕ್ಷದ ನಾಯಕರಲ್ಲಿ ದಿಗಿಲು ಹುಟ್ಟಿಸಿವೆ. ಇದರಲ್ಲಿ ಬಿಜೆಪಿ ಪಕ್ಷ ಒಂದು ಹೆಜ್ಜೆ ಮುಂದಿಟ್ಟಿದೆ.

ತನ್ನ ಆಂತರಿಕ ಸಮೀಕ್ಷೆಯಿಂದ ದಿಗ್ಬ್ರಮೆಗೊಂಡಿರುವ ಬಿಜೆಪಿ, ಬಹುಮತಕ್ಕೆ ಕೊರತೆಯುಂಟಾದರೆ, ಅಗತ್ಯ ಬೆಂಬಲ ಪಡೆದು ಸರ್ಕಾರ ರಚಿಸಲು ಪ್ಲಾನ್​ ಬಿ ರೂಪಿಸಿಕೊಂಡಿದೆ. ಸ್ವಂತಂತ್ರ ಅಭ್ಯರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದು ಗಾಳ ಹಾಕುತ್ತಿದೆ. ಹಿಮಾಚಲದಲ್ಲಿ 'ಮಿಷನ್ ಪುನರಾವರ್ತನೆ' ಯಶಸ್ವಿ ಆಗುವುದು ಅಷ್ಟು ಸುಲಭವಲ್ಲ ಎಂದು ಬಿಜೆಪಿ ಆಂತರಿಕ ವಲಯದಲ್ಲಿ ಕೈಗೊಂಡ ಗ್ರೌಂಡ್ ರಿಪೋರ್ಟ್ ದಲ್ಲಿ ಗೊತ್ತಾಗಿದೆ.

ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಬಿಜೆಪಿ: ಬಿಜೆಪಿ ಮುಂಗಡವಾಗಿ ರಕ್ಷಣಾತ್ಮಕ ರಾಜಕೀಯ ಚದುರಂಗ ಆಡಲು ಪ್ರಾರಂಭಿಸಿದೆ. ಅಲ್ಪ ಬಹುಮತ ಕೊರತೆ ಎದುರಾದರೆ ಸರ್ಕಾರ ರಚನೆಗಾಗಿ ಪಕ್ಷವು ಪ್ಲಾನ್-ಬಿ ತಂತ್ರವನ್ನೂ ಪ್ರಯೋಗಿಸಲೂ ಸಜ್ಜಾಗಿದೆ. ಮತ ಎಣಿಕೆ ದಿನ ಮುನ್ನವೇ ಬಂಡಾಯಗಾರರು ಮತ್ತು ಸ್ವತಂತ್ರ ಅಭ್ಯರ್ಥಿಗಳ ವಿಶ್ವಾಸವನ್ನು ಗೆಲ್ಲುವಲ್ಲಿ ತನ್ನ ದೃಷ್ಟಿ ಹರಿಸಿದೆ.

ಹಿಮಾಚಲ ಪ್ರದೇಶ ವಿಧಾನಸಭೆ ಒಟ್ಟಾರೆ ಬಲ 68 ಸ್ಥಾನ. ಅದರಲ್ಲಿ ಬಿಜೆಪಿ 32ಕ್ಕೆ ಸಿಕ್ಕಿಕೊಳ್ಳಲಿದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಅತ್ತ ಕಾಂಗ್ರೆಸ್ ಕೂಡ ಅದೇ ಸ್ಥಿತಿಯಲ್ಲಿದೆ. ಹೀಗಾಗಿ ಬಹುತೇಕ ಸ್ವತಂತ್ರರು ನಿರ್ಣಾಯಕ ಸ್ಥಾನ ವಹಿಸುವ ಸಾಧ್ಯತೆಗಳು ಗೋಚರಿಸುತ್ತಿವೆ. ಹೀಗಾಗಿ ಬಿಜೆಪಿ ಕಿಂಗ್ ಮೇಕರ್ ಸ್ವತಂತ್ರ ಅಭ್ಯರ್ಥಿಗಳ ಸಹಾಯ ಪಡೆದು ಕಿಂಗ್ ಆಗಲು ಹವಣಿಸುತ್ತಿದೆ.

ಸಿಎಂಗೆ ಶಿಮ್ಲಾದಲ್ಲೇ ಇರುವಂತೆ ಸೂಚನೆ: 35 ಸ್ಥಾನ ತಲುಪಲು ಬಿಜೆಪಿಗೆ ಇತರರ ಸಹಾಯವೂ ಅಗತ್ಯವಿದೆ. ಹೀಗಾಗಿ ಹಾಲಿ ಸಿಎಂ ಜೈರಾಮ್ ಠಾಕೂರ್ ಅವರನ್ನು ಶಿಮ್ಲಾದಲ್ಲೇ ಇರುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ. ಚುನಾವಣಾ ಪ್ರಚಾರದಲ್ಲಿ ಹಳೆಯ ಪಿಂಚಣಿ ಯೋಜನೆ, ಹಣದುಬ್ಬರದ ಕುರಿತಾಗಿ ಪ್ರತಿಪಕ್ಷ ಕಾಂಗ್ರೆಸ್ ಎತ್ತಿದ ಎರಡು ವಿಷಯಗಳು ಬಿಜೆಪಿಗೆ ಹಾನಿಯನ್ನುಂಟುಮಾಡುವ ನಿರೀಕ್ಷೆಯಿದೆ.

ಕೇಸರಿ ಪಕ್ಷದ ವಿಶ್ವಾಸಾರ್ಹ ಮೂಲಗಳು, ಶೇಕಡಾ 25 ಕ್ಕಿಂತ ಹೆಚ್ಚು ಜನರು ಹಣದುಬ್ಬರ ನಿರುದ್ಯೋಗವನ್ನು ಕಳವಳಕಾರಿ ಸಮಸ್ಯೆ ಎಂದು ಪರಿಗಣಿಸಿದ್ದಾರೆ. ಕೆಲ ಇಲಾಖೆಗಳಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಪ್ರಕರಣಗಳು ಬಾಕಿ ಉಳಿದು, ನ್ಯಾಯಾಲಯದ ಮೆಟ್ಟಿಲೇರಿರುವುದು ಯುವಜನರಲ್ಲಿ ಅಸಮಾಧಾನ ಸೃಷ್ಟಿಸಿದೆ. ಸದ್ಯ ಬಿಜೆಪಿ ನಡೆಸಿರುವ ಸಮೀಕ್ಷೆಯಲ್ಲಿ ಪಕ್ಷ ಗರಿಷ್ಠ 32 ಸ್ಥಾನ ಪಡೆಯುವ ನಿರೀಕ್ಷೆ ಇದೆ. ಇಂಥ ಪರಿಸ್ಥಿತಿಯಲ್ಲಿ ಪಕ್ಷವು ಪ್ಲಾನ್-ಬಿಯಲ್ಲಿ ಕೆಲಸ ಮಾಡಬೇಕಿದೆ ಎಂದು ತಿಳಿಸಿವೆ.

ನಡ್ಡಾ ಕೆರಳಿಸಿರುವ ಬಂಡುಕೋರರು: ಹಿಮಾಚಲದಲ್ಲಿ ಬಂಡುಕೋರರು ಚುನಾವಣೆ ಕಣಕ್ಕೆ ಧುಮಕಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಕೆರಳಿಸಿವೆ. ಇದರಿಂದಾಗಿ ದೆಹಲಿಯಲ್ಲಿ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನವನ್ನೂ ಹೊರಹಾಕಿದ್ದಾರೆ. ಆದರೆ, ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ಸಹ ಅಪ್ತರಲ್ಲಿ ಸೂಚಿಸಿದ್ದಾರೆ.

ಎಲ್ಲರ ದೃಷ್ಟಿ ಈಗ ಡಿಸೆಂಬರ್ 8 ರಂದು ನಡೆಯುವ ಮತ ಎಣಿಕೆ ದಿನದತ್ತ ನೆಟ್ಟಿದೆ. ಇನ್ನು ಅತ್ಯಲ್ಪ ಗಂಟೆಗಳಲ್ಲಿ ಅಂತಿಮ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು ಬಿಜೆಪಿ ನಾಯಕರು ಹಿಮಾಲಯ ರಾಜ್ಯದಲ್ಲಿ ಮತ್ತೆ ಸರ್ಕಾರ ರಚಿಸುವ ಕುರಿತು ದಾಳ ಹೊರಗೆ ಇನ್ನೂ ಬಿಡುತ್ತಿಲ್ಲ. ಬಿಜೆಪಿ ಮೂವತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬಂಡಾಯಗಾರರೂ ಗಣನೀಯ ಪ್ರಮಾಣದಲ್ಲಿ ಸ್ಥಾನ ಗಳಿಸಿದರೆ ಪ್ಲಾನ್-ಬಿ ಕಾರ್ಯರೂಪಕ್ಕೆ ತರುವುದು ಹೇಗೆ ಎಂಬುದಂತೂ ಸ್ಪಷ್ಟವಾಗಲಿದೆ.

ಇದನ್ನೂಓದಿ:ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಬಿಗ್ ಪ್ಲಾನ್​​: ಹಿಂದೂ ಅಜೆಂಡಾದ ರ‍್ಯಾಲಿಗಳಿಗೆ ಮೊರೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.