ETV Bharat / bharat

ರೆಪೋ ದರ ಏರಿಕೆ... ಠೇವಣಿದಾರರಿಗೆ ಖುಷಿ: ಸಾಲಗಾರರಿಗೆ ಬಿಸಿ..!

author img

By

Published : May 12, 2022, 3:48 PM IST

ಈಗ ರೆಪೋ ಆಧಾರಿತ ಬಡ್ಡಿದರಗಳು ರೆಪೋ ಲಿಂಕ್ಡ್ ಲೆಂಡಿಂಗ್ ರೇಟ್ (RLLR)ಗೆ ಮರಳುತ್ತಿವೆ. ರೆಪೊ ದರ ಏರಿಕೆಗೆ ಅನುಗುಣವಾಗಿ ಬ್ಯಾಂಕ್‌ಗಳು ಆರ್‌ಎಲ್‌ಎಲ್ ದರಗಳನ್ನು ಬದಲಾಯಿಸುವ ಸಾಧ್ಯತೆಯಿದೆ. ಈಗಾಗಲೇ ಕೆಲವು ಬ್ಯಾಂಕ್​ಗಳು ಬದಲಾಯಿಸಿವೆ ಕೂಡಾ. ಮತ್ತೊಂದೆಡೆ, ನಗದು ಮೀಸಲು ಅನುಪಾತ (CRR) ಹೆಚ್ಚಳವು ಬ್ಯಾಂಕ್‌ಗಳಿಗೆ ಹರಿದು ಬರುವ ನಗದು ಪ್ರಮಾಣ ಸಹಜವಾಗೇ ಕಡಿಮೆ ಆಗಲಿದೆ.

Hike in RBI repo rate, a boon to fixed depositors, bane to loanees
ರೆಪೋ ದರ ಏರಿಕೆ... ಠೇವಣಿದಾರರಿಗೆ ಖುಷಿ: ಸಾಲಗಾರರಿಗೆ ಬಿಸಿ..!

ಹೈದರಾಬಾದ್: ಭಾರತೀಯ ರಿಸರ್ವ್ ಬ್ಯಾಂಕ್ ಆಗಸ್ಟ್ 2018 ರ ಬಳಿಕ ಇದೇ ಮೊದಲ ಬಾರಿಗೆ ರೆಪೋ ದರದಲ್ಲಿ ಏರಿಕೆ ಮಾಡಿದೆ. ಇತ್ತೀಚೆಗೆ ನಡೆದ ಆರ್​​ಬಿಐ ಸಭೆ ಬಳಿಕ ಮಾತನಾಡಿದ ಆರ್​ಬಿಐ ಗವರ್ನರ್​​​​​​​​ 40 ಬೇಸಿದ್​ ಪಾಯಿಂಟ್​​​​​​​​​​​​ಗಳಷ್ಟು ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ಬಡ್ಡಿದರಗಳು ಏರಿಕೆ ಕಾಣಲು ಆರಂಭಿಸಿವೆ.

ಆರ್​​​ಬಿಐ ಈ ಘೋಷಣೆಯಿಂದಾಗಿ ನಿಶ್ಚಿತ ಠೇವಣಿದಾರರು ಮತ್ತು ಸಣ್ಣ ಉಳಿತಾಯದಾರರು ಖುಷಿಯಲ್ಲಿದ್ದಾರೆ. ಬಡ್ಡಿದರಗಳು ಹೆಚ್ಚುತ್ತಿರುವ ಸಮಯದಲ್ಲಿ ಇತರ ಹೂಡಿಕೆದಾರರು ಮತ್ತು ಸಾಲಗಾರರು ಏನು ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ನಿರೀಕ್ಷೆಗೂ ಮೀರಿ ಹಣದುಬ್ಬರ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ, ಅದರ ನಿಯಂತ್ರಣಕ್ಕೆ ಆರ್​ಬಿಐ ಮುಂದಾಗಿದೆ. ಈ ಹಿಂದೆಯೇ ಸುಳಿವು ನೀಡಿದ್ದ ಆರ್​ಬಿಐ ಈ ಭಾರಿಯ ತನ್ನ ಆರ್ಥಿಕ ನೀತಿಯಲ್ಲಿ ರೆಪೋ ದರ ಏರಿಕೆ ಮೂಲಕ ಹಣದುಬ್ಬರಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಈಗಾಗಲೇ ಹಲವು ಬ್ಯಾಂಕ್​​​ಗಳು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (MCLR) ದರಗಳನ್ನು ಸ್ವಲ್ಪಮಟ್ಟಿಗೆ ಪರಿಷ್ಕರಿಸಿವೆ.

ಈಗ ರೆಪೋ ಆಧಾರಿತ ಬಡ್ಡಿದರಗಳು ರೆಪೋ ಲಿಂಕ್ಡ್ ಲೆಂಡಿಂಗ್ ರೇಟ್ (RLLR)ಗೆ ಮರಳಿವೆ. ರೆಪೊ ದರ ಏರಿಕೆಗೆ ಅನುಗುಣವಾಗಿ ಬ್ಯಾಂಕ್‌ಗಳು ಆರ್‌ಎಲ್‌ಎಲ್ ದರಗಳನ್ನು ಬದಲಾಯಿಸುವ ಸಾಧ್ಯತೆಯಿದೆ. ಈಗಾಗಲೇ ಕೆಲವು ಬ್ಯಾಂಕ್​ಗಳು ಬದಲಾಯಿಸಿವೆ ಕೂಡಾ. ಮತ್ತೊಂದೆಡೆ, ನಗದು ಮೀಸಲು ಅನುಪಾತ (CRR) ಹೆಚ್ಚಳವು ಬ್ಯಾಂಕ್‌ಗಳಿಗೆ ಹರಿದು ಬರುವ ನಗದು ಪ್ರಮಾಣ ಸಹಜವಾಗೇ ಕಡಿಮೆ ಆಗಲಿದೆ.

ಈ ಕಾರಣದಿಂದಾಗಿ ಬ್ಯಾಂಕ್​ಗಳು ಠೇವಣಿದಾರರನ್ನು ಆಕರ್ಷಿಸಲು ಎಫ್​​ಡಿ ಬಡ್ಡಿ ದರಗಳನ್ನು ಏರಿಸುತ್ತವೆ. ಈಗಾಗಲೇ ಕೆಲ ಬ್ಯಾಂಕ್​ಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿ ಆದೇಶ ಹೊರಡಿಸಿವೆ.

ದೀರ್ಘಾವಧಿ ಸಾಲ ನಿಧಿ: ಹಲವು ವಿಧದ ಸಾಲ ನಿಧಿಗಳಿವೆ. ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ, ಲಿಕ್ವಿಡ್ ಫಂಡ್‌ಗಳು ಅಥವಾ ಅಲ್ಪಾವಧಿಯ ನಿಧಿಗಳನ್ನು ಆರಿಸಿಕೊಳ್ಳುವುದು ಸೂಕ್ತ. ದೀರ್ಘಾವಧಿಯ ಫಂಡ್‌ಗಳಿಗೆ ಹೋಲಿಸಿದರೆ ಇವು ಸ್ವಲ್ಪ ಕಡಿಮೆ ಏರಿಳಿತಗಳನ್ನು ತೋರಿಸಬಹುದು.

ಬಡ್ಡಿದರಗಳು ಹೆಚ್ಚಾದಂತೆ ಬಾಂಡ್ ದರಗಳು ಕಡಿಮೆಯಾಗುವ ಸಾಧ್ಯತೆಯಿದೆ. ಆದ್ದರಿಂದ, ದೀರ್ಘಾವಧಿಯ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವ ಫಂಡ್‌ಗಳಿಂದ ದೂರವಿರುವುದು ಸೂಕ್ತ. ಆದ್ದರಿಂದ, ನೀವು ಈಗಾಗಲೇ ಅಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ, ನೀವು ಅವುಗಳನ್ನು ಹಿಂತೆಗೆದುಕೊಳ್ಳಲು ಮತ್ತು ಅವುಗಳನ್ನು ಅಲ್ಪಾವಧಿಯ ಸಾಲ ಯೋಜನೆಗಳಿಗೆ ಪರಿವರ್ತನೆ ಮಾಡಿಕೊಂಡು ಹೊರೆ ತಗ್ಗಿಸಿಕೊಳ್ಳುವುದು ಉತ್ತಮ.

ಬಾಂಡ್​, ಠೇವಣಿಗಳತ್ತ ಚಿತ್ತ: ಬಡ್ಡಿದರಗಳು ಕಡಿಮೆಯಾದಾಗ ಅನೇಕ ಜನರು ಕಾರ್ಪೊರೇಟ್ ಬಾಂಡ್‌ಗಳು ಮತ್ತು ಕಾರ್ಪೊರೇಟ್ ಠೇವಣಿಗಳ ಕಡೆಗೆ ಒಲವು ತೋರುತ್ತಾರೆ. ಸಾಮಾನ್ಯವಾಗಿ, AAA, AA, A ಮತ್ತು A + ರೇಟಿಂಗ್ ಬಾಂಡ್‌ಗಳು ಮತ್ತು ಠೇವಣಿಗಳು ಸುರಕ್ಷಿತವಾಗಿರುತ್ತವೆ. ಆದರೆ, ಇವುಗಳಲ್ಲಿ ಬಡ್ಡಿ ಸ್ವಲ್ಪ ಕಡಿಮೆ ಬರುತ್ತದೆ. ವಿಶೇಷ ಎಂದರೆ ಬಿ, ಸಿ ಮತ್ತು ಡಿ ರೇಟಿಂಗ್‌ ಬಾಂಡ್​ ಅಥವಾ ಠೇವಣಿಗಳು ಹೆಚ್ಚಿನ ಬಡ್ಡಿ ತಂದು ಕೊಡುತ್ತವೆ. ಈಗ ಬಡ್ಡಿದರ ಏರಿಕೆಯಾಗುತ್ತಿದ್ದು, ನಾವು ಎಚ್ಚರಿಕೆ ವಹಿಸಬೇಕಾಗಿರುವುದು ಅಗತ್ಯ.

ಸಾಲ ವರ್ಗಾವಣೆ: ಹೊಸ ಮನೆ ಖರೀದಿಸಲು ಅಥವಾ ಕಾರು ತೆಗೆದುಕೊಳ್ಳಲು ಆಸಕ್ತಿ ಹೊಂದಿರುವವರು ಸಾಲದ ಮೇಲೆ ಪ್ರಸ್ತುತ ಬಡ್ಡಿದರಗಳು ಎಷ್ಟಿವೆ ಎಂಬುದರ ಬಗ್ಗೆ ಗಮನ ಹರಿಸಬೇಕು. ಈಗ, ಬ್ಯಾಂಕುಗಳು ಗೃಹ ಸಾಲಗಳ ಮೇಲೆ ಶೇಕಡಾ 7.5 ರಷ್ಟು ಬಡ್ಡಿಯನ್ನು ವಿಧಿಸುತ್ತಿವೆ.

ಆದರೆ, ಕಾರುಗಳಿಗೆ ಶೇಕಡಾ 8.5 ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಕೆಲವು ಬ್ಯಾಂಕುಗಳು ಇತ್ತೀಚೆಗೆ 7ರಿಂದ ಶೇ 7.5ಕ್ಕೆ ಏರಿಕೆ ಮಾಡಿದ್ದು, ವೈಯಕ್ತಿಕ ಸಾಲಗಳ ಮೇಲೆ ಕೆಲವು ವಿಶೇಷ ಕೊಡುಗೆಗಳನ್ನು ಘೋಷಿಸಿವೆ. ನೀವು ಈಗಾಗಲೇ ಶೇ 9 ಕ್ಕಿಂತ ಹೆಚ್ಚು ಬಡ್ಡಿಗೆ ಸಾಲವನ್ನು ಪಡೆದಿದ್ದರೆ, ಅವುಗಳನ್ನು ಕಡಿಮೆ - ಬಡ್ಡಿ ಸಾಲ ನೀಡುವ ಬ್ಯಾಂಕ್‌ಗಳಿಗೆ ಪರಿವರ್ತಿಸಲು ಪ್ರಯತ್ನಿಸಿ.

ಸ್ಥಿರ ಠೇವಣಿ: ರೆಪೋ ದರ ಏರಿಕೆ ಹಿನ್ನೆಲೆಯಲ್ಲಿ ಸ್ಥಿರ ಠೇವಣಿ(ಎಫ್​​​​ಡಿ) ಬಡ್ಡಿದರ ಏರಿಕೆ ಸಾಧ್ಯತೆಗಳಿವೆ. ಈ ಮೂಲಕ ಸ್ಥಿರ ಠೇವಣಿದಾರರಿಗೆ ಹೆಚ್ಚಿನ ಆದಾಯ ತರಲಿವೆ. ಹೊಸ ಠೇವಣಿದಾರರು ಉತ್ತಮ ಬಡ್ಡಿದರಗಳನ್ನು ಒದಗಿಸುವ ಆ ಬ್ಯಾಂಕುಗಳನ್ನು ನೋಡಬೇಕು. ಈಗಾಗಲೇ ಠೇವಣಿ ಹೊಂದಿರುವವರು ಯೋಚಿಸಬೇಕು. ಉದಾಹರಣೆಗೆ, ನೀವು ಈಗ ನಿಮ್ಮ ಠೇವಣಿಗಳ ಮೇಲೆ ಶೇ 5.5 ಬಡ್ಡಿಯನ್ನು ಪಡೆದಿದ್ದೀರಿ ಎಂದು ಭಾವಿಸಿದರೆ, ಬಡ್ಡಿ ದರಗಳಲ್ಲಿ 5.75 ಪ್ರತಿಶತ ಏರಿಕೆ ಆದರೆ ಆಗ ದೊಡ್ಡ ಪ್ರಯೋಜನವೇನೂ ಆಗುವುದಿಲ್ಲ.

ಹೀಗಾಗಿ ಬಡ್ಡಿದರ ಅಲ್ಪ ಏರಿಕೆ ಕಂಡರೆ ತಕ್ಷಣ ಈಗಾಗಲೇ ನೀವು ಇಟ್ಟಿರುವ ಹಣವನ್ನು ತೆಗೆದು ಮತ್ತೊಂದು ಬ್ಯಾಂಕ್​​ನಲ್ಲಿ ಇಡಲು ಹೋಗಬೇಡಿ. ಏಕೆಂದರೆ, ಅರ್ಧದಲ್ಲೇ ತೆಗೆದರೆ ನಿಮಗೆ ದಂಡ ಬೀಳುತ್ತದೆ. ಆ ಬಗ್ಗೆ ಗಮನಿಸಿ ಮುಂದುವರೆಯಿರಿ. ಬಡ್ಡಿದರಗಳು ಕನಿಷ್ಠ 1 ರಿಂದ 1.5 ಪ್ರತಿಶತದಷ್ಟು ಏರಿದಾಗ ಅದರ ಬಗ್ಗೆ ಯೋಚಿಸಿ. ಆದಾಗ್ಯೂ, ಬಡ್ಡಿದರಗಳ ಹೆಚ್ಚಳಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನ ಗಮನದಲ್ಲಿಟ್ಟುಕೊಳ್ಳಿ.

ಸಣ್ಣ ಉಳಿತಾಯ: PPF, ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಸಂಪೂರ್ಣ ಸುರಕ್ಷಿತ ಆದಾಯ ಖಾತರಿ ಹೊಂದಿವೆ. ಈ ಯೋಜನೆಗಳು ಸೆಕ್ಷನ್ 80C ಅಡಿಯಲ್ಲಿ ತೆರಿಗೆ - ವಿನಾಯತಿ ಕೂಡಾ ಹೊಂದಿವೆ. ಆರ್ ಬಿಐ ರೆಪೊ ದರವನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಇವುಗಳ ಮೇಲಿನ ಬಡ್ಡಿ ದರಗಳು ಏರಿಕೆಯಾಗುವ ಸಾಧ್ಯತೆ ಇದೆ. ಹಾಗಾಗಿ, ಸಣ್ಣ ಉಳಿತಾಯದ ಬಗ್ಗೆ ಆಸಕ್ತಿ ಇರುವವರು ಇವುಗಳನ್ನು ಮರುಪರಿಶೀಲಿಸಬಹುದು.

ನಿಮ್ಮ ಸಾಲಗಳನ್ನು ಆದಷ್ಟು ಬೇಗ ತೀರಿಸಿ: ರೆಪೋ ದರ ಏರಿಕೆಯ ಪರಿಣಾಮ, ಬಡ್ಡಿ ದರಗಳು ಏರಿಕೆ ಆಗುವ ಸಾಧ್ಯತೆಗಳಿವೆ. ಆದ್ದರಿಂದ, ಈ ದೀರ್ಘಾವಧಿಯ ಸಾಲವನ್ನು ಸಾಧ್ಯವಾದಷ್ಟು ವೇಗವಾಗಿ ಪಾವತಿಸಲು ಪ್ರಯತ್ನಿಸಿ.

ಇದನ್ನು ಓದಿ:ಬ್ಲಾಕ್ ಮಾಡಿದ ಜಿಎಸ್‌ಟಿ ಸಂಖ್ಯೆ ‘ಅನ್ ಬ್ಲಾಕ್’ ಹೇಗೆಂದು ತಿಳಿಯದ ಇಲಾಖೆ! ಉದ್ಯಮಿಯ ವ್ಯವಹಾರಕ್ಕೆ ಧಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.