ETV Bharat / bharat

ಹಿಜಾಬ್​ ವಿವಾದ: ಆ ತಾಯಿ ಸರಸ್ವತಿ ಎಲ್ಲರಿಗೂ ಒಳ್ಳೆ ಬುದ್ದಿಕೊಡಲಿ.. ಅವಳು ತಾರತಮ್ಯ ಮಾಡೋದಿಲ್ಲ ಎಂದ ರಾಹುಲ್​ ಗಾಂಧಿ!

ಹಿಜಾಬ್​​ನಿಂದಾಗಿ ಹೆಣ್ಣುಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳಲಾಗುತ್ತಿದೆ. ನಾವು ದೇಶದ ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಭವಿಷ್ಯವನ್ನು ಹಾಳು ಮಾಡುತ್ತಿದೇವೆ. ಆ ದೇವಿ ಸರಸ್ವತಿ ಎಲ್ಲರಿಗೂ ಒಳ್ಳೆಯ ಬುದ್ದಿ ಕೊಡಲಿ, ಆ ತಾಯಿ ಯಾರನ್ನೂ ಭೇದ ಭಾವ ಮಾಡುವುದಿಲ್ಲ ಎಂದು ನಂಬಿದ್ದೇನೆ ಎಂದು ರಾಹುಲ್​ ಗಾಂಧಿ ಟ್ವೀಟ್​​​ ಮಾಡಿದ್ದಾರೆ.

author img

By

Published : Feb 5, 2022, 11:01 AM IST

Updated : Feb 5, 2022, 12:17 PM IST

ಹಿಜಾಬ್​ ವಿವಾದ: ಆ ತಾಯಿ ಸರಸ್ವತಿ ಎಲ್ಲರಿಗೂ ಒಳ್ಳೆ ಬುದ್ದಿಕೊಡಲಿ
hijab raw Ma Saraswati gives knowledge to all rahul Gandhi

ನವದೆಹಲಿ: ಮಹಿಳಾ ಕಾಲೇಜಿನಲ್ಲಿ ಹಿಜಾಬ್ ವಿವಾದ ಮುಂದುವರೆದಿದ್ದು, ಮೂರು ವಾರ ಕಳೆದರೂ ಅಂತ್ಯಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಹಿಜಾಬ್ ಧರಿಸುವುದು ತಮ್ಮ ಹಕ್ಕು ಎಂದು ವಿದ್ಯಾರ್ಥಿನಿಯರು ಹೇಳಿದರೆ, ಮತ್ತೊಂದೆಡೆ ಕಾಲೇಜು ಆಡಳಿತ ಮಂಡಳಿಯು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ.

ಈ ವಿಚಾರ ಈಗ ರಾಷ್ಟ್ರೀಯ ವಿವಾದವಾಗಿ ಮಾರ್ಪಟ್ಟಿದೆ. ಈ ನಡುವೆ ಹಿಜಾಬ್​ ಬಗ್ಗೆ ರಾಹುಲ್​ ಗಾಂಧಿ ಟ್ವೀಟ್​ ಮಾಡಿ, ಮಾ ಸರಸ್ವತಿ ಎಲ್ಲರಿಗೂ ಬುದ್ಧಿಕೊಡಲಿ, ಆ ತಾಯಿ ಯಾರನ್ನೂ ಭೇದ ಭಾವ ಮಾಡುವುದಿಲ್ಲ ಎಂದು ನಾನು ನಂಬಿದ್ದೇನೆ ಎಂದಿದ್ದಾರೆ.

  • By letting students’ hijab come in the way of their education, we are robbing the future of the daughters of India.

    Ma Saraswati gives knowledge to all. She doesn’t differentiate. #SaraswatiPuja

    — Rahul Gandhi (@RahulGandhi) February 5, 2022 " class="align-text-top noRightClick twitterSection" data=" ">

ಅಷ್ಟೇ ಅಲ್ಲ ಹಿಜಾಬ್​​ನಿಂದಾಗಿ ಹೆಣ್ಣುಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳಲಾಗುತ್ತಿದೆ. ನಾವು ದೇಶದ ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಭವಿಷ್ಯವನ್ನು ಹಾಳು ಮಾಡುತ್ತಿದೇವೆ. ಆ ದೇವಿ ಸರಸ್ವತಿ ಎಲ್ಲರಿಗೂ ಒಳ್ಳೆಯ ಬುದ್ದಿ ಕೊಡಲಿ, ಆ ತಾಯಿ ಯಾರನ್ನೂ ಭೇದ ಭಾವ ಮಾಡುವುದಿಲ್ಲ ಎಂದು ನಂಬಿದ್ದೇನೆ ಎಂದು ಟ್ವೀಟ್​​​ ಮಾಡಿದ್ದಾರೆ.

ಏನಿದು ವಿವಾದ?: ಕಳೆದ ಮೂರು ವಾರಗಳ ಹಿಂದೆ ಆರಂಭವಾದ ಹಿಜಾಬ್ ವಿವಾದವು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ನಮಗೆ ಧರ್ಮದ ಕಟ್ಟುಪಾಡುಗಳೇ ಮುಖ್ಯ, ಇದು ನಮ್ಮ ಹಕ್ಕು ಎಂದು ವಿದ್ಯಾರ್ಥಿನಿಯರು ಹಠಕ್ಕೆ ಬಿದ್ದಿದ್ದು, ಪರೋಕ್ಷವಾಗಿ ಕೆಲ ಸಂಘಟನೆಗಳು ಇದಕ್ಕೆ ಸಾಥ್ ನೀಡುತ್ತಿವೆ. ಹೀಗಾಗಿ ಪರಿಸ್ಥಿತಿ ಮತ್ತಷ್ಟು ಇನ್ನಷ್ಟು ಬಿಗಡಾಯಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಕಳೆದ 37 ವರ್ಷಗಳಿಂದ ಉಡುಪಿಯ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಸರ್ವಧರ್ಮದ ವಿದ್ಯಾರ್ಥಿನಿಯರು ಸಮವಸ್ತ್ರ ಮಾತ್ರ ಧರಿಸಿ ತರಗತಿಗೆ ಹಾಜರಾಗುತ್ತಿದ್ದರು. ಹಿಜಾಬ್ ಧರಿಸಿ ಬಂದವರು, ತರಗತಿ ಪ್ರವೇಶಿಸುವಾಗ ಅದನ್ನು ತೆಗೆದಿರಿಸಿ ಪಾಠ ಕೇಳುತ್ತಿದ್ದರು. ಈಗ ನೂರಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿನಿಯರು ಇಲ್ಲಿ ಪಿಯುಸಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಹಿಜಾಬ್ ವಿವಾದ ಅಂತ ಆರಂಭವಾಗಿರುವುದು ಇದೇ ಮೊದಲಾಗಿದೆ. ಕೆಲ ಸಂಘಟನೆಗಳ ಬೆಂಬಲದೊಂದಿಗೆ ವಿದ್ಯಾರ್ಥಿನಿಯರು ಈ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನು ಓದಿ:ನೈಜ ಸಮಸ್ಯೆ ಮರೆಮಾಚಲು ಹಿಜಾಬ್‌ ವಿವಾದ: ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆರೋಪ

Last Updated : Feb 5, 2022, 12:17 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.