ETV Bharat / bharat

ಮುಂಬೈಗೂ ಕಾಲಿಟ್ಟ ಹಿಜಾಬ್ ವಿವಾದ : ಕಾಲೇಜ್​ಗಳಲ್ಲಿ ದುಪಟ್ಟಾ, ಮುಸುಕು, ಬುರ್ಖಾ ನಿಷೇಧ

ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಇದೀಗ ರಾಜ್ಯದ ಗಡಿ ದಾಟಿದೆ. ಮುಂಬೈನ ಎಂಎಂಪಿ ಷಾ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸ್ಕಾರ್ಫ್, ವೇಲ್ ಮತ್ತು ಬುರ್ಖಾ ಧರಿಸಿ ಕಾಲೇಜಿಗೆ ಪ್ರವೇಶಿಸುವಂತಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ..

ಎಂಎಂಪಿ ಷಾ ಕಾಲೇಜ್​
ಎಂಎಂಪಿ ಷಾ ಕಾಲೇಜ್​
author img

By

Published : Feb 11, 2022, 1:48 PM IST

ಮುಂಬೈ : ಕರ್ನಾಟಕದಲ್ಲಿ ಪ್ರಾರಂಭವಾಗಿರುವ ಹಿಜಾಬ್ ವಿವಾದ ಇದೀಗ ಮುಂಬೈಗೂ ಕಾಲಿಟ್ಟಿದೆ. ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಾಗಿರುವ ಎಂಎಂಪಿ ಷಾ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸ್ಕಾರ್ಫ್, ವೇಲ್ ಮತ್ತು ಬುರ್ಖಾ ಧರಿಸಿ ಕಾಲೇಜಿಗೆ ಪ್ರವೇಶಿಸುವಂತಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡುರುವ ಕಾಲೇಜಿನ ಪ್ರಾಂಶುಪಾಲೆ ಲೀನಾ ರಾಜೆ, ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿ ತರಗತಿಗಳಿಗೆ ಹಾಜರಾಗಬೇಕು. ಸ್ಕಾರ್ಫ್, ವೇಲ್ ಮತ್ತು ಬುರ್ಖಾ ಧರಿಸಿ ಕಾಲೇಜಿಗೆ ಪ್ರವೇಶಿಸುವಂತಿಲ್ಲ. ನಮ್ಮ ಕಾಲೇಜ್​ ನಿಯಮಾವಳಿ ಪ್ರಕಾರ ಹಿಜಾಬ್ ಮಾತ್ರವಲ್ಲದೇ, ಮುಸುಕನ್ನು ಕೂಡ ನಿಷೇಧಿಸಿದ್ದೇವೆ ಎಂದರು.

ಕಾಲೇಜಿನ ನಿಯಮಗಳ ಕುರಿತು ಮಾಹಿತಿ
ಕಾಲೇಜಿನ ನಿಯಮಗಳ ಕುರಿತು ಮಾಹಿತಿ

ಇದಕ್ಕೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಶಾಸಕ ರಯೀಸ್ ಶೇಖ್, ಮಹಾರಾಷ್ಟ್ರದ ಕಾಲೇಜುಗಳಲ್ಲಿ ಇಂತಹ ನಿಯಮಗಳಿದ್ದರೆ ಅದಕ್ಕೆ ನಮ್ಮ ವಿರೋಧವಿದೆ. ಕಾಲೇಜ್ ಆಡಳಿತ ಮಂಡಳಿಯವರು ಕಾಲಮಿತಿಯಲ್ಲಿ ನಿಯಮಾವಳಿಗಳನ್ನು ಬದಲಾಯಿಸಬೇಕು. ಈ ಕುರಿತು ಮಹಾರಾಷ್ಟ್ರ ಸರ್ಕಾರ ಕೂಡಲೇ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹೈಕೋರ್ಟ್ ತಿಳಿಸಿದರೂ ಕಾಲೇಜು ಆರಂಭಕ್ಕೆ ಸರ್ಕಾರ ಹಿಂದೇಟು ಹಾಕುತ್ತಿರುವುದು ಯಾಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.