ನವದೆಹಲಿ: ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ಪ್ರಶ್ನಿಸುವ ಅರ್ಜಿಗಳ ಬ್ಯಾಚ್ನ ವಿಚಾರಣೆಯನ್ನು ಇಂದು ಮುಂದುವರೆಸಿದೆ.
23 ಅರ್ಜಿಗಳ ಬ್ಯಾಚ್ ಅನ್ನು ಪೀಠದ ಮುಂದೆ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವ ಹಕ್ಕನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ನೇರವಾಗಿ ಸಲ್ಲಿಸಲಾದ ರಿಟ್ ಅರ್ಜಿಗಳಾಗಿವೆ. ಇನ್ನು ಕೆಲವು ವಿಶೇಷ ಲೀವ್ ಪಿಟಿಷನ್ ಅರ್ಜಿಗಳಾಗಿದ್ದು, ಮಾರ್ಚ್ 15 ರಂದು ಕರ್ನಾಟಕ ಹೈಕೋರ್ಟ್ ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದ ತೀರ್ಪನ್ನು ಪ್ರಶ್ನಿಸಿ ಇವನ್ನು ಸಲ್ಲಿಸಲಾಗಿದೆ.
ಕರ್ನಾಟಕ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ಕೆ. ನಾವದಗಿ ಇಂದು ತಮ್ಮ ವಾದವನ್ನು ಮುಂದುವರಿಸಿದ್ದಾರೆ.ವಿಚಾರಣೆಯ ಆರಂಭದಲ್ಲಿ, ನಮಗೆ ಚಾರ್ಜ್‌ಶೀಟ್ ಸಲ್ಲಿಸಬೇಕು ಮತ್ತು ಕರ್ನಾಟಕದ ಆದೇಶವನ್ನು ಹಿಂದಿಗೆ ಅನುವಾದಿಸಬೇಕು ಎಂದು ನ್ಯಾಯಪೀಠ ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಎ.ಜಿ.ನಾವದಗಿ, ದಿನದ ಅಂತ್ಯದ ವೇಳೆಗೆ ಅದು ಸಿಗುತ್ತದೆ. ಎರಡೂ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದರು.
ಸದ್ಯ ಕರ್ನಾಟಕದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ಕೆ ನಾವದಗಿ ಪೀಠದ ಮುಂದೆ ತಮ್ಮ ವಿಸ್ತೃತ ವಾದವನ್ನು ಮಂಡಿಸುತ್ತಿದ್ದಾರೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್ ವಿಚಾರಣೆ: ವಿವಾದಕ್ಕೆ PFI ಕಾರಣವೆಂದ ಕರ್ನಾಟಕ ಸರ್ಕಾರ