ತಿರುಪ್ಪತ್ತೂರು (ತಮಿಳುನಾಡು): ಸರಕು ಸಾಗಾಟ ಸಾಗಿಸುತ್ತಿದ್ದ ರೈಲಿನ ಮೇಲೆ ಹೈವೋಲ್ಟೇಜ್ ವಿದ್ಯುತ್ ತಂತಿ ಬಿದ್ದಿರುವ ಘಟನೆ ಅಂಬೂರು ಪಕ್ಕದ ವಿನ್ನಮಂಗಲಂ ಪ್ರದೇಶದಲ್ಲಿ ಬುಧವಾರ ನಡೆಯಿತು. ಅಂಬೂರಿನಲ್ಲಿ ಬಲವಾದ ಗಾಳಿ ಸಹಿತ ಜೋರು ಮಳೆಯಾಗಿದೆ. ಪಕ್ಕದ ವಿನ್ನಮಂಗಲಂ ಪ್ರದೇಶದಲ್ಲಿ ರಾತ್ರಿ 9.45ಕ್ಕೆ ಚೆನ್ನೈ-ಬೆಂಗಳೂರು ಮತ್ತು ಕೊಯಮತ್ತೂರು ರೈಲ್ವೇ ಮೀಸಲು ಪ್ರದೇಶದಲ್ಲಿ ವಿದ್ಯುತ್ ತಂತಿ ಹಠಾತ್ ಬಿದ್ದಿದೆ.
ಇದನ್ನೂ ಓದಿ: ವಿದ್ಯುತ್ ಇಂಜಿನ್ನಿಂದ 4 ರೈಲುಗಳ ಸಂಚಾರ ಪ್ರಾರಂಭ: ನಿತ್ಯ 5,000 ಲೀ. ಡೀಸೆಲ್ ಉಳಿತಾಯ
ರೈಲ್ವೇ ಸಿಬ್ಬಂದಿ 3 ಗಂಟೆಗೂ ಹೆಚ್ಚು ಕಾಲ ಶ್ರಮಿಸಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸರಿಪಡಿಸಿ 12:30ಕ್ಕೆ ದುರಸ್ತಿಗೊಳಿಸಿದರು. ಬಳಿಕ ಮಂಗಳೂರು ಎಕ್ಸ್‌ಪ್ರೆಸ್, ಯೇರ್ಕಾಡ್ ಎಕ್ಸ್‌ಪ್ರೆಸ್ ಸೇರಿದಂತೆ 5ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳು ಹಾಗೂ ಈ ಭಾಗದಲ್ಲಿ ಸಂಚರಿಸುವ ಹಲವು ಸರಕು ಸಾಗಣೆ ರೈಲುಗಳು ಸ್ಥಗಿತಗೊಂಡಿದ್ದವು. ಕೆಲವು ಮಾರ್ಗ ಬದಲಾಯಿಸಲಾಯಿತು, ಇನ್ನೂ ಕೆಲವು ದುರಸ್ತಿ ಕಾರ್ಯ ಬಳಿಕ ಸಂಚರಿಸಿದವು.