ETV Bharat / bharat

ಹಳಿ ಕಾಮಗಾರಿ ವೇಳೆ ರೈಲು ಡಿಕ್ಕಿಯಾಗಿ ನಾಲ್ವರು ದುರ್ಮರಣ - ಹರಿದ್ವಾರ-ಲಕ್ಸಾರ್ ರೈಲ್ವೆ ಹಳಿಯ ಕಾಮಗಾರಿ

ಹರಿದ್ವಾರ-ಲಕ್ಸಾರ್ ರೈಲ್ವೆ ಹಳಿಯ ಕಾಮಗಾರಿ ನಡೆಯುತ್ತಿದ್ದ ವೇಳೆ ಪರೀಕ್ಷಾರ್ಥವಾಗಿ ಓಡಾಡುತ್ತಿದ್ದ ರೈಲು ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟಿದ್ದಾರೆ.

high-speed-train-hit-four-people-in-haridwar
ಹಳಿ ಕಾಮಗಾರಿ ವೇಳೆ ರೈಲು ಡಿಕ್ಕಿಯಾಗಿ ನಾಲ್ವರು ದುರ್ಮರಣ
author img

By

Published : Jan 7, 2021, 11:00 PM IST

ಹರಿದ್ವಾರ(ಉತ್ತರಾಖಂಡ) : ರೈಲು ಮಾರ್ಗದಲ್ಲಿ ಡಬಲ್​ ಟ್ರ್ಯಾಕ್​ ನಿರ್ಮಾಣ ಕಾಮಗಾರಿಯ ವೇಳೆ ಪರೀಕ್ಷಾರ್ಥವಾಗಿ ಓಡಾಡುತ್ತಿದ್ದ ರೈಲು ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.

ಜ್ವಾಲಾಪುರ ಕೊತ್ವಾಲಿ ಪ್ರದೇಶದ ಜಮಾಲ್​ಪುರದಲ್ಲಿ ಘಟನೆ ಸಂಭವಿಸಿದ್ದು, ಹರಿದ್ವಾರ-ಲಕ್ಸಾರ್ ರೈಲ್ವೆ ಹಳಿಯ ಕಾಮಗಾರಿ ನಡೆಯುತ್ತಿದ್ದ ವೇಳೆ ಪರೀಕ್ಷಾರ್ಥವಾಗಿ ಓಡಾಡುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ. ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ನಿಂತಿದ್ದ ಟ್ರಕ್​ಗೆ ಗುದ್ದಿದ ಕಾರು: ತಿರುಪತಿಯಿಂದ ಮರಳುತ್ತಿದ್ದ ಐವರ ದುರ್ಮರಣ

ಸ್ಥಳೀಯ ಶಾಸಕ ಯತಿಶ್ವರಾನಂದ್ ಕೂಡಾ ಸ್ಥಳಕ್ಕೆ ಧಾವಿಸಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಪ್ರಕರಣವನ್ನು ನ್ಯಾಯಾಂಗೀಯ ತನಿಖೆಗೆ ವಹಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್​​​ಗೆ ಸೂಚಿಸಿದ್ದಾರೆ

ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಸೂಚನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.