ETV Bharat / bharat

ಸೇನಾಪಡೆಗೂ ಹೈಸ್ಪೀಡ್​ ಡೇಟಾ: ಗಡಿಯುದ್ದಕ್ಕೂ ಬರಲಿದೆ 5G ನೆಟ್ವರ್ಕ್ - ಅದಾನಿ

ಯುದ್ಧತಂತ್ರದ ಪ್ರದೇಶದಲ್ಲಿನ ಮಿಲಿಟರಿ ಕಾರ್ಯಾಚರಣೆಗಳನ್ನು ಬೆಂಬಲಿಸಲು ಭಾರತೀಯ ಸೇನೆಗೆ 5ಜಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ. 5ಜಿ ಟೆಲಿಕಾಂ ಸೇವೆಗಳು ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.

ಸೇನಾಪಡೆಗೂ ಹೈಸ್ಪೀಡ್​ ಡೇಟಾ: ಗಡಿಯುದ್ದಕ್ಕೂ ಬರಲಿದೆ 5G ನೆಟ್ವರ್ಕ್
High-speed data for the army: 5G network will come across the border
author img

By

Published : Aug 6, 2022, 6:20 PM IST

ನವದೆಹಲಿ: ಸೇನಾ ಕಾರ್ಯಕ್ಷೇತ್ರದಲ್ಲಿನ ಕಾರ್ಯಾಚರಣೆಯ ಅವಶ್ಯಕತೆಗಳನ್ನು ಬೆಂಬಲಿಸಲು ಸಂವಹನ ಮತ್ತು ಹೆಚ್ಚಿನ ವೇಗದ ಡೇಟಾ ನೆಟ್‌ವರ್ಕ್ ಅನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಭಾರತೀಯ ಸೇನೆಯು ಗಡಿಯುದ್ದಕ್ಕೂ 5G ನೆಟ್‌ವರ್ಕ್ ಸ್ಥಾಪಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಚೀನಾ ಈಗಾಗಲೇ ಉತ್ತಮ ಸಂವಹನಕ್ಕಾಗಿ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (LAC) 5ಜಿ ನೆಟ್‌ವರ್ಕ್ ಸ್ಥಾಪಿಸಲು ಪ್ರಾರಂಭಿಸಿದೆ.

ಯುದ್ಧತಂತ್ರದ ಪ್ರದೇಶದಲ್ಲಿನ ಮಿಲಿಟರಿ ಕಾರ್ಯಾಚರಣೆಗಳನ್ನು ಬೆಂಬಲಿಸಲು ಭಾರತೀಯ ಸೇನೆ 5ಜಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ, ರಕ್ಷಣಾ ಸೇವೆಗಳಲ್ಲಿ 5ಜಿ ಅನುಷ್ಠಾನದ ಕುರಿತು ಜಂಟಿ ಸೇನಾಪಡೆಗಳಿಂದ ಕೋರ್ ಆ್ಯಂಡ್ ಸಿಗ್ನಲ್ಸ್​ ವತಿಯಿಂದ ಅಧ್ಯಯನವನ್ನು ನಡೆಸಲಾಯಿತು. ಅಧ್ಯಯನವು ರಕ್ಷಣಾ ಪಡೆಗಳಿಗೆ 5ಜಿ ಸೇರ್ಪಡೆಗಾಗಿ ಮಾರ್ಗಸೂಚಿಯನ್ನು ಶಿಫಾರಸು ಮಾಡಿದೆ.

ಅಲ್ಲದೆ, ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ಮತ್ತು ಐಐಟಿ ಮದ್ರಾಸ್ ನಡುವೆ 5G ಟೆಸ್ಟ್‌ಬೆಡ್ ಸ್ಥಾಪನೆಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಫೀಲ್ಡ್ ಆರ್ಮಿಗಾಗಿ 5ಜಿ ಯ ಮಿಲಿಟರಿ ಬಳಕೆಯ ಪ್ರಕರಣಗಳ ಮೌಲ್ಯೀಕರಣವನ್ನು ಟೆಸ್ಟ್‌ಬೆಡ್ ಸುಗಮಗೊಳಿಸುತ್ತದೆ.

ಏತನ್ಮಧ್ಯೆ, ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಅದಾನಿ ಸೇರಿದಂತೆ ನಾಲ್ಕು ಕಂಪನಿಗಳ ಬಿಡ್‌ಗಳಲ್ಲಿ 1.50 ಲಕ್ಷ ಕೋಟಿ ರೂಪಾಯಿಗಳ ಸ್ಪೆಕ್ಟ್ರಮ್ ಹರಾಜನ್ನು ಸರ್ಕಾರ ಸೋಮವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಹೀಗಾಗಿ 5ಜಿ ಟೆಲಿಕಾಂ ಸೇವೆಗಳು ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.

5G ಸ್ಪೆಕ್ಟ್ರಮ್‌ ಬಿಡ್ಡಿಂಗ್ ಮುಗಿದ ನಂತರ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ಒಟ್ಟು 72,098 MHz ಸ್ಪೆಕ್ಟ್ರಮ್‌ನಲ್ಲಿ 51,236 MHz ಅಥವಾ ಸುಮಾರು 71 ಪ್ರತಿಶತದಷ್ಟು ಮಾರಾಟವಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.