ETV Bharat / bharat

ಬಿಗ್​ಬಾಸ್​ ಶೋನಲ್ಲಿ ಅಶ್ಲೀಲತೆ ಪ್ರದರ್ಶನ.. ಕಾರ್ಯಕ್ರಮದ ವಿರುದ್ಧ ಆಂಧ್ರ ಹೈಕೋರ್ಟ್ ಗರಂ

author img

By

Published : Oct 1, 2022, 8:02 AM IST

ಅಶ್ಲೀಲತೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತೆಲುಗು ಬಿಗ್​ಬಾಸ್​ ಕಾರ್ಯಕ್ರಮದ ಮೇಲೆ ಆಂಧ್ರಪ್ರದೇಶ ಹೈಕೋರ್ಟ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನೋಟಿಸ್​ ಜಾರಿ ಮಾಡಿದ್ದು, ವಿವರಣೆ ಕೋರಿದೆ.

high-court-strongly-reacted-on-obscenity
ಬಿಗ್​ಬಾಸ್​ ಶೋನಲ್ಲಿ ಅಶ್ಲೀಲತೆ ಪ್ರದರ್ಶನ

ಅಮರಾವತಿ(ಆಂಧ್ರಪ್ರದೇಶ): ಮನರಂಜನೆ ಹೆಸರಲ್ಲಿ ನಡೆಸಲಾಗುವ ಟಿವಿ ರಿಯಾಲಿಟಿ ಶೋಗಳು ಹದ್ದು ಮೀರುತ್ತಿದ್ದು ಸಭ್ಯತೆ ಕಾಪಾಡಿಕೊಳ್ಳುತ್ತಿಲ್ಲ. ಮಾತು, ನಡೆಯಲ್ಲಿ ಅಶ್ಲೀಲತೆ ಹೆಚ್ಚಾಗಿದೆ ಎಂದು ಆರೋಪಿಸಿ ಆಂಧ್ರಪ್ರದೇಶ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​ ಕಾರ್ಯಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ವಿವರಣೆ ನೀಡುವಂತೆ ನೋಟಿಸ್​ ಜಾರಿ ಮಾಡಿದೆ.

ತೆಲುಗು ಬಿಗ್​ಬಾಸ್​ ಕಾರ್ಯಕ್ರಮದಲ್ಲಿ ಅಶ್ಲೀಲತೆ ಹೆಚ್ಚಾಗಿದೆ. ಇದನ್ನು ತಡೆಯಬೇಕು ಎಂದು ಕೋರಿ ಮಹಿಳಾ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್​) ಯನ್ನು ಸಲ್ಲಿಸಿದ್ದಾರೆ. ರಿಯಾಲಿಟಿ ಶೋನಲ್ಲಿ ಐಬಿಎಫ್ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿಲ್ಲ ಎಂದು ವಕೀಲರು ವಾದಿಸಿದರು. ಸಾಕಷ್ಟು ಅಶ್ಲೀಲತೆ ಪ್ರದರ್ಶನ ಮಾಡಲಾಗುತ್ತಿದೆ. ತಕ್ಷಣವೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಅರ್ಜಿದಾರರ ಪರವಾಗಿ ಪೀಠವನ್ನು ಕೋರಿದರು.

ಕಾರ್ಯಕ್ರಮದ ನಡೆಯ ಮೇಲೆ ಹೈಕೋರ್ಟ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಈ ಬಗ್ಗೆ ವಿವರಣೆ ನೀಡಲು ರಿಯಾಲಿಟಿ ಶೋ ಪರ ವಕೀಲರಿಗೆ ಸೂಚಿಸಿತು. ವಿವರಣೆ ನೀಡಲು ವಕೀಲರು ನ್ಯಾಯಾಲಯಕ್ಕೆ ಕಾಲಾವಕಾಶ ಕೋರಿದ್ದರಿಂದ, ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 11ಕ್ಕೆ ಮುಂದೂಡಿತು.

ಓದಿ: ಭೂ ಕಬಳಿಕೆ ಆರೋಪ: ಸಚಿವ ಭೈರತಿ ಬಸವರಾಜ್ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.