ETV Bharat / bharat

ಶರದ್ ಪವಾರ್ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಪ್ರಕರಣ: ಮಹಾ ಸರ್ಕಾರಕ್ಕೆ ಛೀಮಾರಿ ಹಾಕಿದ ಹೈಕೋರ್ಟ್​! - ಶರದ್ ಪವಾರ್ ವಿರುದ್ಧ ಆಕ್ಷೇಪಾರ್ಹ ಟ್ವೀಟ್

ಶರದ್ ಪವಾರ್ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಪ್ರಕರಣದಲ್ಲಿ ನಿಖಿಲ್ ಭಾಮ್ರೆ ವಿರುದ್ಧ ತೆಗೆದುಕೊಂಡ ಕ್ರಮಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ.

Nikhil Bhamre arrest in offensive tweet case, Nikhil Bhamre arrest news,  Bombay High Court on Nikhil Bhamre arrest, offensive tweet against Sharad Pawar, Bombay high court news, ಟ್ವೀಟ್ ಪ್ರಕರಣದಲ್ಲಿ ನಿಖಿಲ್ ಭಾಮ್ರೆ ಬಂಧನ, ನಿಖಿಲ್ ಭಾಮ್ರೆ ಬಂಧನ ಸುದ್ದಿ, ನಿಖಿಲ್ ಭಾಮ್ರೆ ಬಂಧನದ ಕುರಿತು ಬಾಂಬೆ ಹೈಕೋರ್ಟ್ ತೀರ್ಪು, ಶರದ್ ಪವಾರ್ ವಿರುದ್ಧ ಆಕ್ಷೇಪಾರ್ಹ ಟ್ವೀಟ್, ಬಾಂಬೆ ಹೈಕೋರ್ಟ್ ಸುದ್ದಿ,
ಬಾಂಬೆ ಹೈಕೋರ್ಟ್​
author img

By

Published : Jun 14, 2022, 1:25 PM IST

ಮುಂಬೈ: ಸಾಮಾಜಿಕ ಮಾಧ್ಯಮದಲ್ಲಿ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ ಎಂಬ ಪ್ರಕರಣದಲ್ಲಿ ಬಂಧಿತ ಯುವಕನ ವಿರುದ್ಧ ರಾಜ್ಯ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಮುಂಬೈ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಿ ಛೀಮಾರಿ ಹಾಕಿದೆ.

ಜೂನ್ 16 ರಂದು ಮತ್ತೆ ಅರ್ಜಿಯ ವಿಚಾರಣೆ ನಡೆಯಲಿದೆ. ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಮಿಲಿಂದ್ ಜಾಧವ್ ಅವರ ಪೀಠವು ಭಾಮ್ರೆ ವಿರುದ್ಧದ ಎಫ್‌ಐಆರ್‌ಗೆ ಟ್ವೀಟ್ ಹೇಗೆ ಆಧಾರವಾಗಬಹುದು ಎಂದು ಆಶ್ಚರ್ಯ ವ್ಯಕ್ತಪಡಿಸಿದೆ.

ರಾಜಕೀಯ ನಾಯಕರ ಹೆಸರನ್ನೂ ಉಲ್ಲೇಖಿಸದ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳು ನಿತ್ಯ ನೂರಾರು ಮತ್ತು ಸಾವಿರಾರು ಬರುತ್ತವೆ. ನೀವು ಪ್ರತಿ ಟ್ವೀಟ್ ಅನ್ನು ಗಮನಿಸುತ್ತೀರಾ?.. ಅಂತಹ ಎಫ್‌ಐಆರ್‌ಗಳು ನಮಗೆ ಬೇಡ. ವಿದ್ಯಾರ್ಥಿಯನ್ನು ಈ ರೀತಿ ಕಸ್ಟಡಿಯಲ್ಲಿ ಇರಿಸಿ ಎಂದು ಹೇಳಿಲ್ಲ ಅಂತಾ ಪೀಠ ಹೇಳಿತು.

ಎಫ್‌ಐಆರ್‌ ಓದಿದ ನ್ಯಾಯಾಲಯವು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. ಭಾಮ್ರೆ ಪ್ರಾಥಮಿಕ ಟ್ವೀಟ್ ಮತ್ತು ಒಬ್ಬರನ್ನು ಒಂದು ತಿಂಗಳು ಜೈಲಿನಲ್ಲಿಟ್ಟಿರುವುದರ ಬಗ್ಗೆ 48 ನೇ ಪುಟದಲ್ಲಿ ಹೆಸರಿಲ್ಲ. ಎಲ್ಲದಕ್ಕೂ ಆಧಾರವೇನು?.. ಪುಟ 48 ರ ಪ್ರಕಾರ ಎಫ್‌ಐಆರ್‌ಗೆ ಕಾರಣವೇನು ಎಂದು ನ್ಯಾಯಮೂರ್ತಿ ಶಿಂಧೆ ಪ್ರಶ್ನಿಸಿದರು.

ಓದಿ: ಶರದ್​ ಪವಾರ್​ ಬಗ್ಗೆ ವಿವಾದಾತ್ಮಕ ಪೋಸ್ಟ್: ಮರಾಠಿ ನಟಿ ಪೊಲೀಸ್​ ವಶಕ್ಕೆ

ವಿವಿಧೆಡೆ ದಾಖಲಾದ ಅಪರಾಧಗಳನ್ನು ರದ್ದುಪಡಿಸುವಂತೆ ಹಾಗೂ ಅರ್ಜಿ ವಿಚಾರಣೆ ಬಾಕಿ ಇರುವಾಗಲೇ ಜಾಮೀನು ನೀಡುವಂತೆ ಕೋರಿ ಭಾಮ್ರೆ ಪರವಾಗಿ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ಎಸ್. ಎಸ್. ಶಿಂಧೆ ಮತ್ತು ಎನ್. ಎಂ. ಜಾಧವ್ ಅವರ ಪೀಠದ ಮುಂದೆ ವಿಚಾರಣೆ ನಡೆಸಿತು.

ಮಹಾರಾಷ್ಟ್ರದಂತಹ ರಾಜ್ಯದಲ್ಲಿ ಯುವಕರಿಗೆ ಹೀಗಾಗುತ್ತಿರುವುದು ದುರದೃಷ್ಟಕರ. ನಾವು ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಅಂತಾ ಭಾಮ್ರೆ ಪರ ವಕೀಲರಾದ ಸುಭಾಷ್ ಝಾ ಹೇಳಿದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153, 153 ಎ, 500, 501, 504, 505 ಮತ್ತು 506 ರ ಅಡಿಯಲ್ಲಿ ಭಾಮ್ರೆ ವಿರುದ್ಧ ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದರು.

ಉನ್ನತ ವ್ಯಕ್ತಿಗಳ ಕೀರ್ತಿಗೆ ಚ್ಯುತಿ ಬರುವುದು ನಮಗೆ ಇಷ್ಟವಿಲ್ಲ: ಪ್ರಸ್ತುತ ಪ್ರಕರಣದಲ್ಲಿ ಆರೋಪಿ ವಿರುದ್ಧ ಆರೋಪಗಳನ್ನು ಸಲ್ಲಿಸಿರುವುದು ಪವಾರ್ ಅವರ ಪ್ರತಿಷ್ಠೆಗೆ ಮತ್ತಷ್ಟು ಹಾನಿಯಾಗುತ್ತದೆ. ನೀವು ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ವಿಜೇತರ ಹೆಸರನ್ನು ಹಾಳುಮಾಡುತ್ತೀರಿ.

ಅಂತಹ ವಿದ್ಯಾರ್ಥಿಯನ್ನು ಜೈಲಿಗೆ ಹಾಕಲು ಪವಾರ್ ಅವರಂತಹ ಮಹಾನ್ ವ್ಯಕ್ತಿಯೂ ಇಷ್ಟಪಡುವುದಿಲ್ಲ. ಉನ್ನತ ವ್ಯಕ್ತಿಗಳ ಕೀರ್ತಿಗೆ ಚ್ಯುತಿ ಬರುವುದು ನಮಗೆ ಇಷ್ಟವಿಲ್ಲ ಎಂದು ನ್ಯಾಯಮೂರ್ತಿ ಶಿಂಧೆ ಹೇಳಿದ್ದಾರೆ.

ವಿಚಾರಣೆಯ ಮೊದಲು, ನ್ಯಾಯಮೂರ್ತಿ ಶಿಂಧೆ ಅವರು ರಾಜ್ಯ ಗೃಹ ಇಲಾಖೆಯ ಸೂಚನೆಗಳ ಮೇರೆಗೆ ಭಾಮ್ರೆಯನ್ನು ಕಸ್ಟಡಿಯಿಂದ ಬಿಡುಗಡೆ ಮಾಡುವಂತೆ ಕೋರಿ ನಿರಾಕ್ಷೇಪಣಾ ಅರ್ಜಿ ಸಲ್ಲಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಿಗೆ ಸೂಚಿಸಿದರು. ‘ನಮ್ಮ ವಿನಮ್ರ ಅಭಿಪ್ರಾಯದಲ್ಲಿ ನೀವು ಬಂದು ನಿರಾಕ್ಷೇಪಣಾ ಹೇಳಿಕೆ ನೀಡಿದರೆ ರಾಜ್ಯದ ಗೌರವ ಉಳಿಯುತ್ತದೆ’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಕೋರ್ಟ್ ಹೇಳಿತು.

ನಾಸಿಕ್‌ನ ಯುವ ಫಾರ್ಮಸಿಸ್ಟ್ ನಿಖಿಲ್ ಭಾಮ್ರೆ ಸಾಮಾಜಿಕ ಮಾಧ್ಯಮದಲ್ಲಿ ಪವಾರ್ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದರು. ಥಾಣೆ ಎನ್‌ಸಿಪಿ ಜಿಲ್ಲಾಧ್ಯಕ್ಷ ಆನಂದ್ ಪರಾಂಜಪೆ ನೀಡಿದ ದೂರಿನ ಮೇರೆಗೆ ಪೊಲೀಸರು ನಿಖಿಲ್ ಭಮ್ರೆ ವಿರುದ್ಧ ಪ್ರಕರಣ ದಾಖಲಿಸಿ ಮೇ 18 ರಂದು ಬಂಧಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.