ETV Bharat / bharat

50 ಲೀ.ಟ್ಯಾಂಕ್ ಸಾಮರ್ಥ್ಯದ ಕಾರಿಗೆ 57 ಲೀ. ಪೆಟ್ರೋಲ್ ಬಿಲ್ ನೀಡಿ ವಂಚನೆ ಆರೋಪ: ಪೆಟ್ರೋಲ್ ಬಂಕ್​​ ಸೀಲ್ - ವಂಚನೆ ಪತ್ತೆ

ಪೆಟ್ರೋಲ್ ಬಂಕ್​ನಿಂದ ವಂಚನೆ. ಕಾರಿನ 50 ಲೀಟರ್ ಟ್ಯಾಂಕ್‌ನಲ್ಲಿ 57 ಲೀಟರ್ ಪೆಟ್ರೋಲ್ ತುಂಬಿದ್ದಾಗಿ ಬಿಲ್​​. ಬಂಕ್​ ಸೀಲ್ ಮಾಡಿದ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರು.

petrol bunk
ಪೆಟ್ರೋಲ್ ಬಂಕ್​
author img

By

Published : Feb 10, 2023, 12:40 PM IST

ಜಬಲ್‌ಪುರ (ಮಧ್ಯಪ್ರದೇಶ): ಕೋವಿಡ್​​ ಅವಧಿಯಲ್ಲಿ ನಕಲಿ ರೆಮ್ಡೆಸಿವಿರ್ ಪ್ರಕರಣದ ಪ್ರಮುಖ ಆರೋಪಿ ಸರಬ್ಜಿತ್ ಸಿಂಗ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಈ ಬಾರಿ ಕಾರಿನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಪೆಟ್ರೋಲ್ ಹಾಕಿರುವ ಬಿಲ್​ ನೀಡಿರುವ ದೂರಿನ ಮೇರೆಗೆ ಮಧ್ಯ ಪ್ರದೇಶ ನ್ಯಾಯಾಧೀಶರು ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ ತೂಕ ಮತ್ತು ಅಳತೆ ಇಲಾಖೆ ಪೆಟ್ರೋಲ್ ಬಂಕ್​ನ್ನು ಸೀಲ್ ಮಾಡಿದೆ. ಪೆಟ್ರೋಲ್ ಬಂಕ್​ ಯಂತ್ರಗಳನ್ನು ಪರಿಶೀಲಿಸುವವರೆಗೆ ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವನ್ನು ನಿಷೇಧಿಸಲಾಗಿದೆ.

ಹೆಚ್ಚುವರಿ ಬಿಲ್​ ನೀಡಿ ವಂಚನೆ: ಮೂಲಗಳ ಪ್ರಕಾರ, ಮಧ್ಯ ಪ್ರದೇಶ ಹೈಕೋರ್ಟ್ ನ್ಯಾಯಾಧೀಶರು ನಿನ್ನೆ(ಗುರುವಾರ) ರಾತ್ರಿ ಪೆಟ್ರೋಲ್ ಬಂಕ್​ಗೆ ಪೆಟ್ರೋಲ್ ತುಂಬಿಸಲು ತೆರಳಿದ್ದರು. ಪೆಟ್ರೋಲ್ ಟ್ಯಾಂಕ್ ತುಂಬಲು ಸೂಚನೆಯ ಮೇರೆಗೆ ಬಂಕ್​ ಉದ್ಯೋಗಿ ಕಾರಿಗೆ ಪೆಟ್ರೋಲ್​ ಪೂರ್ಣ ಮಾಡಿದರು. ಕಾರು ತುಂಬುತ್ತಿದ್ದಾಗ ಮೀಟರ್ ರೀಡಿಂಗ್ ಪ್ರಕಾರ 57 ಲೀಟರ್ ಪೆಟ್ರೋಲ್ ಕಾರಿಗೆ ಹಾಕಲಾಗಿದೆ ಎಂದು ಬಿಲ್​​ ನೀಡಲಾಗಿದೆ. ಅಷ್ಟರಲ್ಲಿ ಕಾರಿನಲ್ಲಿ ಕುಳಿತಿದ್ದ ನ್ಯಾಯಾಧೀಶರು ಬಿಲ್​​ ನೋಡಿ ಶಾಕ್​ ಆಗಿದ್ದಾರೆ. ಏಕೆಂದರೆ ವಾಹನದಲ್ಲಿ ಪೆಟ್ರೋಲ್‌ನ ಒಟ್ಟು ಮಿತಿ 50 ಲೀಟರ್‌ ಆಗಿತ್ತು. ಇಂತಹ ಪರಿಸ್ಥಿತಿಯಲ್ಲಿ ವಾಹನಕ್ಕೆ ಹೆಚ್ಚು ಪೆಟ್ರೋಲ್ ಬಿಲ್​ ನೋಡಿ ಅನುಮಾನಗೊಂಡು ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.

petrol bunk
ಪೆಟ್ರೋಲ್ ಬಂಕ್​ ಸೀಲ್​​

ಅಧಿಕಾರಿಗಳಿಗೆ ಛೀಮಾರಿ: ನ್ಯಾಯಾಧೀಶರ ದೂರಿನ ಮೇರೆಗೆ ತೂಕ ಮತ್ತು ಅಳತೆ ಇಲಾಖೆ ವಿಭಾಗದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಯಂತ್ರಗಳ ಪ್ರಾಥಮಿಕ ಪರಿಶೀಲನೆ ನಡೆಸಿದರು. ಅವರ ಕಾರಿನ ಟ್ಯಾಂಕ್ ಸಾಮರ್ಥ್ಯ 50 ಲೀಟರ್ ಆಗಿದೆ. ಆಗಲೇ 5 ರಿಂದ 7 ಲೀಟರ್ ಪೆಟ್ರೋಲ್ ಇತ್ತು. ಉದ್ಯೋಗಿ ಎಲ್ಲಿಂದ 57 ಲೀಟರ್ ಪೆಟ್ರೋಲ್ ತುಂಬಿಸಿದ್ದಾನೆ. ಈ ರೀತಿ ದಿನನಿತ್ಯ ಸಾವಿರಾರು ಜನರ ದರೋಡೆ ನಡೆಯುತ್ತಿದ್ದು, ಆಡಳಿತ ಮೌನವಾಗಿದೆ ಎಂದು ಅಧಿಕಾರಿಗಳಿಗೆ ನ್ಯಾಯಾಧೀಶರು ಛೀಮಾರಿ ಹಾಕಿದರು.

ಪೆಟ್ರೋಲ್ ಬಂಕ್​​ ಸೀಲ್: ಈ ಪೆಟ್ರೋಲ್ ಬಂಕ್​​ ಜಿಲ್ಲಾ ಕೇಂದ್ರದಿಂದ ಸ್ವಲ್ಪ ದೂರದಲ್ಲಿದೆ. ನಿತ್ಯ ಸಾವಿರಾರು ಲೀಟರ್ ಪೆಟ್ರೋಲ್, ಡೀಸೆಲ್ ಮಾರಾಟವಾಗುತ್ತಿತ್ತು. ಈವರೆಗೆ ಗ್ರಾಹಕರಿಗೆ ಲಕ್ಷಾಂತರ ರೂಪಾಯಿ ವಂಚನೆ ನಡೆದಿದೆ ಎನ್ನಲಾಗಿದೆ. ಈ ಘಟನೆಯ ನಂತರ, ಆಡಳಿತ ಅಧಿಕಾರಿಗಳು ತಕ್ಷಣ ಪೆಟ್ರೋಲ್ ಪಂಪ್ ಅನ್ನು ಸೀಲ್ ಮಾಡಿದ್ದಾರೆ. ಇನ್ನು ಈ ಘಟನೆಯ ಕೇಂದ್ರಬಿಂದು ನಿರಂತರವಾಗಿ ವಿವಾದಗಳಲ್ಲಿ ಸಿಲುಕಿರುವ ಸರಬ್ಜಿತ್ ಸಿಂಗ್ ಮೋಖಾ. ಈತ ಬಂಕ್​ನ ಮಾಲೀಕನಾಗಿದ್ದು, ನಕಲಿ ರೆಮ್‌ಡೆಸಿವಿರ್ ಪ್ರಕರಣದ ಪ್ರಮುಖ ಆರೋಪಿ.

ಯಂತ್ರಗಳ ತಪಾಸಣೆ: ಎಲ್ಲಾ ಯಂತ್ರಗಳನ್ನು ಪರಿಶೀಲಿಸಿದ ನಂತರವೇ ಈ ಪೆಟ್ರೋಲ್ ಬಂಕ್​​ನಲ್ಲಿ ಡೀಸೆಲ್ ಅಥವಾ ಪೆಟ್ರೋಲ್ ಮಾರಾಟವನ್ನು ಪುನರಾರಂಭಿಸಲಾಗುತ್ತದೆ. ಈ ಬಗ್ಗೆ ಮಾಪನಶಾಸ್ತ್ರ ಇಲಾಖೆಯ ಉಪ ನಿಯಂತ್ರಕರು ತನಿಖೆ ನಡೆಸುತ್ತಿದ್ದಾರೆ. ತಾಂತ್ರಿಕ ಮಟ್ಟದಲ್ಲಿ ಅಡಚಣೆಯಾಗಿದೆಯೇ ಅಥವಾ ವಂಚನೆ ನಡೆದಿದೆಯೇ ಎಂದು ಇಲಾಖೆ ಕೂಲಂಕಷವಾಗಿ ಪರಿಶೀಲಿಸುತ್ತಿದೆ.

ಇದನ್ನೂ ಓದಿ: ಪ್ರಬಲ ಭೂಕಂಪಕ್ಕೆ ನಲುಗಿದ ಟರ್ಕಿ-ಸಿರಿಯಾ : 21 ಸಾವಿರಕ್ಕೂ ಅಧಿಕ ಮಂದಿ ಬಲಿ.. ಆಹಾರಕ್ಕಾಗಿ ಬದುಕುಳಿದವರ ಪರದಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.