ಕತುವಾ(ಜಮ್ಮು ಕಾಶ್ಮೀರ): ಕಣಿವೆ ನಾಡಿನಲ್ಲಿ ಭಯೋತ್ಪಾದಕರ ಅಟ್ಟಹಾಸ ಮಾತ್ರವಲ್ಲ, ಈಗ ಮಾದಕ ವಸ್ತು ಕಳ್ಳಸಾಗಣೆಯೂ ಅಲ್ಲಿನ ಪೊಲೀಸರಿಗೆ ಮತ್ತು ಭದ್ರತಾ ಪಡೆಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಮಂಗಳವಾರ ಕತುವಾ ನಗರದ ಹಿರಾನಗರ್ ಸೆಕ್ಟರ್ನಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ದಾಳಿ ನಡೆಸಿ, ಸುಮಾರು 135 ಕೋಟಿ ರೂಪಾಯಿ ಮೌಲ್ಯದ 27 ಕಿಲೋಗ್ರಾಂ ಹೆರಾಯಿನ್ ವಶಪಡಿಸಿಕೊಂಡಿದೆ.
ಈ ಕಾರ್ಯಾಚರಣೆಯಲ್ಲಿ ಓರ್ವ ಮಾದಕ ವಸ್ತು ಕಳ್ಳಸಾಗಣೆದಾರನನ್ನು ಹೊಡೆದುರುಳಿಸಲಾಗಿದೆ. ಮಾದಕ ವಸ್ತು ಕಳ್ಳಸಾಗಣೆದಾರ ಗಡಿಯ ಹೊರಗಡೆಯಿಂದ ಒಳಗೆ ನುಸುಳಿದ್ದನ್ನು ಗಮನಿಸಿದ ಬಿಎಸ್ಎಫ್ ಯೋಧರು ಆತನನ್ನು ಅಲ್ಲಿಯೇ ನಿಲ್ಲುವಂತೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: 'ಗಾಲ್ವಾನ್ ಘರ್ಷಣೆಯ ನಂತರ ಸಿದ್ಧತೆ, ತರಬೇತಿ ಅನಿವಾರ್ಯವೆಂದು ಚೀನಾ ಅರಿತುಕೊಂಡಿದೆ'
ಈ ವೇಳೆ ಪರಾರಿಯಾಗಲು ವ್ಯಕ್ತಿ ಪ್ರಯತ್ನಿಸಿದ್ದು, ಈ ವೇಳೆ ಗುಂಡು ಹಾರಿಸಲಾಗಿದೆ ಎಂದು ಬಿಎಸ್ಎಫ್ ಮಾಹಿತಿ ನೀಡಿದೆ. ಜನವರಿ 23ರಂದು ಸುಮಾರು 150 ಮೀಟರ್ ಉದ್ದದ ಸುರಂಗವನ್ನು ಸೇನೆ ಪತ್ತೆ ಹಚ್ಚಿದ್ದು, ಇಂತಹ ಸುರಂಗವನ್ನು ಭಯೋತ್ಪಾದಕರು ಬಳಸಿರಬಹುದೆಂದು ಶಂಕಿಸಲಾಗಿದೆ.