ETV Bharat / bharat

1971ರ ಯುದ್ಧದ ಹೀರೋ, ವೀರಸೇನಾನಿ ಭೈರೋನ್​ ಸಿಂಗ್​ ರಾಥೋಡ್ ನಿಧನ - ಪಾಕ್​ ಮೇಲೆ ಯುದ್ಧ

1971ರ ಭಾರತ- ಪಾಕಿಸ್ತಾನ ಯುದ್ಧದ ವೀರಸೇನಾನಿ, ಬಿಎಸ್​ಎಫ್​ ನಿವೃತ್ತ ಯೋಧ ಭೈರೋನ್​ ಸಿಂಗ್​ ರಾಥೋಡ್ ಅವರು ಸೋಮವಾರ ಅನಾರೋಗ್ಯದಿಂದ ಹುತಾತ್ಮರಾದರು.

hero-of-longewala
ವೀರಸೇನಾನಿ ಭೈರೋನ್​ ಸಿಂಗ್​ ರಾಥೋಡ್ ಹುತಾತ್ಮ
author img

By

Published : Dec 20, 2022, 7:08 AM IST

Updated : Dec 20, 2022, 8:13 AM IST

ಜೋಧ್‌ಪುರ(ರಾಜಸ್ಥಾನ): ಪಾಕಿಸ್ತಾನದ 90 ಸಾವಿರ ಸೈನಿಕರನ್ನು ಸದೆಬಡಿದು ವಿಜಯ ಕಹಳೆ ಮೊಳಗಿಸಿದ 'ವಿಜಯ್​ ದಿವಸ್​'ಗೆ 50 ವಸಂತಗಳು ಕಳೆದಿವೆ. 1971 ಡಿಸೆಂಬರ್​ 16 ರಂದು ಪಾಕಿಸ್ತಾನ ಸೇನೆಯ ವಿರುದ್ಧ ಸಿಕ್ಕ ವಿಜಯದ ಸಂಭ್ರಮಾಚರಣೆ ಕಳೆದ ವಾರವಷ್ಟೇ ನಡೆಸಲಾಗಿತ್ತು. ಈ ಮಧ್ಯೆಯೇ ರಣಭೂಮಿಯಲ್ಲಿ ಹೋರಾಡಿ ಜಯ ತಂದಿದ್ದ ವೀರಯೋಧ ಭೈರೋನ್​ ಸಿಂಗ್​ ರಾಥೋಡ್​(81) ಅವರು ಅನಾರೋಗ್ಯದಿಂದ ಸೋಮವಾರ ಹುತಾತ್ಮರಾಗಿದ್ದಾರೆ.

1971 ರ ಯುದ್ಧದಲ್ಲಿ ಧೀರೋದಾತ್ತವಾಗಿ ಹೋರಾಡಿದ ರಾಥೋಡ್​ ಅವರು ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ವಿಜಯ್​ ದಿವಸ್​ 50 ರ ಸಂಭ್ರಮದ ಎರಡು ದಿನದ ಮೊದಲು ಅವರನ್ನು ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ತೀವ್ರ ಅನಾರೋಗ್ಯದಿಂದ ವೀರಯೋಧ ಕೊನೆಯುಸಿರೆಳೆದಿದ್ದಾರೆ.

ಬಾರ್ಡರ್​ನಲ್ಲಿ ಎದೆಯೊಡ್ಡಿದ್ದ ಜವಾನ್​​: ಪಶ್ಚಿಮ ಪಾಕಿಸ್ತಾನದಿಂದ(ಈಗಿನ ಪಾಕಿಸ್ತಾನ) ಪೂರ್ವ ಪಾಕಿಸ್ತಾನವನ್ನು (ಈಗಿನ ಬಾಂಗ್ಲಾದೇಶ) ವಿಮುಕ್ತಿಗೊಳಿಸಲು ಪಾಕ್​ ಮೇಲೆ ಯುದ್ಧ ಸಾರಿತು. 1971 ರಲ್ಲಿ ನಡೆದ ರಣದಲ್ಲಿ ಭಾರತ ವಿಜಯದುಂದುಬಿ ಮೊಳಗಿಸಿತು. ರಾಜಸ್ಥಾನದ ಲಾಂಗೆವಾಲಾ ಪೋಸ್ಟ್​ನಲ್ಲಿ ಭೈರೋನ್​ ಸಿಂಗ್​ ರಾಥೋಡ್​ ಅವರು ತೋರಿದ ಶೌರ್ಯ ಅಜರಾಮರ. ಅವರ ಸಾಹಸದಿಂದ ಪಾಕ್ ಪಡೆಗಳು ಮಂಡಿಯೂರಿದವು.

ಭೈರೋನ್​ ಸಿಂಗ್​ರ ಧೈರ್ಯ, ಸಾಹಸಗಳನ್ನು ಬಾಲಿವುಡ್​ ನಟ ಸುನೀಲ್​ ಶೆಟ್ಟಿ ಅವರ ಬಾರ್ಡರ್​ ಸಿನಿಮಾದಲ್ಲಿ ಕಾಣಬಹುದಾಗಿದೆ. 1987ರಲ್ಲಿ ಗಡಿ ಭದ್ರತಾ ಪಡೆಯಿಂದ(ಬಿಎಸ್​ಎಫ್​) ಇವರು ನಿವೃತ್ತರಾಗಿದ್ದರು. ರಾಥೋಡ್​ರ ಸೇವಾ ಸಾಹಸಕ್ಕೆ 1972 ರಲ್ಲಿ ಸೇನಾ ಪದಕ ನೀಡಿ ಗೌರವಿಸಲಾಗಿದೆ.

ಮಾತನಾಡಲು ಬಯಸಿದ್ದ ಪ್ರಧಾನಿ ಮೋದಿ: ವಿಜಯ್​ ದಿವಸ್​ 50 ರ ಸಂಭ್ರಮದಂದು ಪ್ರಧಾನಿ ನರೇಂದ್ರ ಮೋದಿ ಅವರು ವೀರಯೋಧ ಭೈರೋನ್​ ಸಿಂಗ್​ ಅವರ ಜೊತೆ ಮಾತನಾಡಲು ಬಯಸಿದ್ದರು. ಆದರೆ, ಅನಾರೋಗ್ಯಕ್ಕೀಡಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಅದು ಸಾಧ್ಯವಾಗಲಿಲ್ಲ. ಸಿಂಗ್​ರ ಶೌರ್ಯ, ಸಾಹಸಗಳನ್ನು ಶ್ಲಾಘಿಸಿದ ಪ್ರಧಾನಿ, ಬೇಗನೇ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದರು. ಇದಾದ ನಾಲ್ಕು ದಿನಗಳ ಬಳಿಕ ಅವರು ಬ್ರೇನ್​ಸ್ಟ್ರೋಕ್​​ನಿಂದಾಗಿ ವೀರ ಯೋಧ ಇಹಲೋಕ ತ್ಯಜಿಸಿದ್ದಾರೆ. ಧೀರ ಯೋಧನ ಅಗಲಿಕೆಗೆ ಬಿಎಸ್​​ಎಫ್​ ಸಂತಾಪ ಸೂಚಿಸಿದೆ.

ಓದಿ: ಬೇರ್ಪಟ್ಟ ಹಳಿಗಳು.. ಗ್ರಾಮಸ್ಥರ ಸಮಯಪ್ರಜ್ಞೆಯಿಂದ ತಪ್ಪಿದ ರೈಲು ದುರಂತ

Last Updated : Dec 20, 2022, 8:13 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.