ETV Bharat / bharat

ನಡುರಸ್ತೆಯಲ್ಲೇ ದೊಣ್ಣೆಯಿಂದ ಎರಡು ಕುಟುಂಬಗಳ ಹೊಡೆದಾಟ: ಕಾರಣವಾಗಿದ್ದು ಕೋಳಿ! - ಕೋಳಿ ವಿಚಾರವಾಗಿ ಹೊಡೆದಾಟ

ಸಾಕು ಕೋಳಿವೊಂದು ಪಕ್ಕದ ಮನೆಗೆ ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಜಗಳವಾಗಿದ್ದು, ನಡುರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

clash between two families erupted about a hen

author img

By

Published : Jan 13, 2022, 9:49 PM IST

ಕರ್ನೂಲ್​(ಆಂಧ್ರಪ್ರದೇಶ): ಭೂ ವಿವಾದ, ಮನೆ ಮುಂದಿನ ರಸ್ತೆ ವಿಚಾರವಾಗಿ ಅಕ್ಕ-ಪಕ್ಕದ ಮನೆಯವರ ಮಧ್ಯೆ ಜಗಳವಾಗುವುದು ಸಾಮಾನ್ಯ. ಆದರೆ, ಆಂಧ್ರಪ್ರದೇಶದ ಕರ್ನೂಲ್​​ನಲ್ಲಿ ಕೋಳಿ ವಿಚಾರಕ್ಕೆ ಎರಡು ಕುಟುಂಬಗಳು ನಡುರಸ್ತೆಯಲ್ಲೇ ದೊಣ್ಣೆಯಿಂದ ಬಡಿದಾಡಿಕೊಂಡಿವೆ.

ಕರ್ನೂಲ್​ ಜಿಲ್ಲೆಯ ಆದೋನಿಯಲ್ಲಿ ಈ ಘಟನೆ ನಡೆದಿದೆ. ಸಾಕು ಕೋಳಿಯೊಂದು ನೆರೆಮನೆಯೊಳಗೆ ಹೋಗಿರುವ ವಿಚಾರಕ್ಕೆ ಎರಡು ಕುಟುಂಬ ನಡುರಸ್ತೆಯಲ್ಲೇ ಸಂಘರ್ಷಕ್ಕಿಳಿವೆ. ಈ ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ನಡುರಸ್ತೆಯಲ್ಲೇ ದೊಣ್ಣೆಯಿಂದ ಹೊಡೆದಾಡಿಕೊಂಡ ಎರಡು ಕುಟುಂಬ

ಇದನ್ನೂ ಓದಿ: Photos: ಯುಪಿ ಚುನಾವಣೆಯಲ್ಲಿ 'ಬಿಕಿನಿ ಗರ್ಲ್'​ಗೆ ಕಾಂಗ್ರೆಸ್ ಟಿಕೆಟ್!

ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದು, ಈಗಾಗಲೇ ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ತಮ್ಮ ಮನೆಯ ಸಾಕು ಕೋಳಿಯೊಂದು ಪಕ್ಕದ ಮನೆಯೊಳಗೆ ಹೋಗಿದ್ದರಿಂದ ಅದನ್ನು ತೆಗೆದುಕೊಂಡು ಬರಲು ಮಹಿಳೆಯೋರ್ವಳು ಹೋಗಿದ್ದಾಳೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಸಂತ್ರಸ್ತೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಇದರಿಂದ ಕೋಪಗೊಂಡಿರುವ ನೆರೆಮನೆಯವರು ಪೊಲೀಸರಿಗೆ ದೂರು ನೀಡುತ್ತೀರಾ? ಎಂದು ದೊಣ್ಣೆಯಿಂದ ದಾಳಿ ನಡೆಸಿದ್ದಾರೆ. ಇದಾದ ನಂತರ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.