ETV Bharat / bharat

ಶಾಲೆಯಲ್ಲಿ ಡ್ರೆಸ್​​ ಕೋಡ್​ ಅನುಸರಿಸಬೇಕು.. ಹಿಜಾಬ್​ ತೀರ್ಪಿನ ಬಗ್ಗೆ ಹೇಮಾ ಮಾಲಿನಿ - ಹಿಜಾಬ್ ಬ್ಯಾನ್​ ಬಗ್ಗೆ ಹೇಮಾ ಮಾಲಿನಿ ಮಾತು

ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್​​​ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್​​ನಿಂದ ಮಹತ್ವದ ತೀರ್ಪು ಹೊರಬಿದ್ದಿದೆ. ಇದಕ್ಕೆ ಸಂಬಂಸಿದಂತೆ ಸಂಸದೆ ಹೇಮಾ ಮಾಲಿನಿ ಪ್ರತಿಕ್ರಿಯೆ ನೀಡಿದ್ದಾರೆ..

Hema Malini reaction on Hijab ban
ಹಿಜಾಬ್ ಬ್ಯಾನ್​ ಬಗ್ಗೆ ಹೇಮಾ ಮಾಲಿನಿ ಮಾತು
author img

By

Published : Mar 15, 2022, 3:03 PM IST

ನವದೆಹಲಿ : ಶಾಲಾ-ಕಾಲೇಜ್​​ಗಳಲ್ಲಿ ಹಿಜಾಬ್​ ಧರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್​ನಿಂದ ಐತಿಹಾಸಿಕ ತೀರ್ಪು ಹೊರ ಬಿದ್ದಿದೆ. ಇದಕ್ಕೆ ಸಂಬಂಧಿಸಿದಂತೆ ಅನೇಕರು ವಿವಿಧ ರೀತಿಯ ಪ್ರತಿಕ್ರಿಯೆ ನೀಡಿದ್ದು, ಇದೀಗ ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತರೆ ಸಂಸ್ಥೆ ಅಥವಾ ಕೆಲಸ ಮಾಡುವ ಸ್ಥಳಗಳಲ್ಲಿ ಹಿಜಾಬ್ ಮೇಲೆ ಹೊಸ ನಿಷೇಧ ಹೇರುವ ಅಗತ್ಯವಿಲ್ಲ ಎಂದಿರುವ ಅವರು, ಶಾಲೆಯಲ್ಲಿ ಡ್ರೆಸ್ ಕೋಡ್​​ ಅನುಸರಿಸಬೇಕು ಎಂದು ಹೇಳಿದ್ದಾರೆ. ಈ ಮೂಲಕ ಕರ್ನಾಟಕ ಹೈಕೋರ್ಟ್​​​ನ ತೀರ್ಪು ಸ್ವಾಗತ ಮಾಡಿದ್ದಾರೆ.

ಹಿಜಾಬ್ ಬ್ಯಾನ್​ ಬಗ್ಗೆ ಸಂಸದೆ ಹೇಮಾ ಮಾಲಿನಿ ಮಾತು..

ಇದೇ ವಿಚಾರವಾಗಿ ಮಾತನಾಡಿರುವ ಕೇರಳ ರಾಜ್ಯಪಾಲ ಆರಿಫ್​ ಮೊಹಮ್ಮದ್ ಖಾನ್​, ಇಸ್ಲಾಂ ಧರ್ಮ ನಂಬಿಕೆಯ ಆಚರಣೆ ಮೇಲೆ ನಿಂತಿದ್ದು, ಖುರಾನ್​​ನಲ್ಲಿ ಹಿಜಾಬ್​ ಬಗ್ಗೆ ಏಳು ಸಲ ಉಲ್ಲೇಖವಾಗಿದೆ. ಆದರೆ, ಡ್ರೆಸ್​​ ಕೋಡ್​​ ಸಂದರ್ಭದಲ್ಲಿ ಇದರ ಬಗ್ಗೆ ಯಾವುದೇ ರೀತಿಯ ಉಲ್ಲೇಖವಿಲ್ಲ ಎಂದಿದ್ದಾರೆ.

  • #HijabVerdict | Islam itself defines what's essential to the practice of the faith, so the judiciary's job has become easy. Hijab has been mentioned 7 times in the Quran, but not in the context of the dress code: Kerala Governor Arif Mohammad Khan pic.twitter.com/CR8CHr7ytH

    — ANI (@ANI) March 15, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಹಿಜಾಬ್​ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅಗತ್ಯತೆ ಅಲ್ಲ: ಹೈಕೋರ್ಟ್

ಹಿಜಾಬ್​ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಡಿಸಿರುವ ಕರ್ನಾಟಕ ಹೈಕೋರ್ಟ್​, ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದಿದ್ದು,ಹಿಜಾಬ್​ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅಗತ್ಯತೆಯೂ ಅಲ್ಲ ಎಂದು ಹೇಳಿದೆ.

ಕಳೆದ ಜನವರಿ ತಿಂಗಳಿಂದಲೂ ಹಿಜಾಬ್​ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿದ್ದವು. ಹಿಜಾಬ್​ ಧರಿಸುವುದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿಕೊಂಡು ಬರುವ ಮೂಲಕ ವಿವಾದ ಮತ್ತಷ್ಟು ಕಾವು ಪಡೆದಿತ್ತು. ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಿಂದ ಆರಂಭವಾಗಿದ್ದ ಹಿಜಾಬ್​ ವಿವಾದ ದೇಶಾದ್ಯಂತ ವ್ಯಾಪಿಸಿತ್ತು.

ಉಡುಪಿ ಸರ್ಕಾರಿ ಕಾಲೇಜಿನಲ್ಲಿ ತರಗತಿಗೆ ಹಿಜಾಬ್ ಧರಿಸಿ ಹಾಜರಾಗುವುದಕ್ಕೆ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಆರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಅಲ್ಲಿಂದ ಆರಂಭವಾಗಿದ್ದ ಈ ವಿವಾದದ ಹಿನ್ನೆಲೆಯಲ್ಲಿ ಸಮವಸ್ತ್ರ ಕಡ್ಡಾಯಗೊಳಿಸುವ ಸಂಬಂಧ ಫೆ.5ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.