ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿನ ಅಧಿವೇಶನವು ಫಲಪ್ರದವಾಗಿ ನಡೆಯುವಂತೆ ಸಹಕಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂಸದರಿಗೆ ಮನವಿ ಮಾಡಿದರು.
ಚಳಿಗಾಲದ ಅಧಿವೇಶನದ ಮೊದಲ ದಿನ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಿರಂತರ ಅಡ್ಡಿಗಳಿಂದಾಗಿ ಕಲಾಪದಲ್ಲಿ ಭಾಗವಹಿಸಲು ತಮಗೆ ಅವಕಾಶ ಸಿಗುತ್ತಿಲ್ಲ ಹೊಸ ಸಂಸದರು ಆಗಾಗ ದೂರುತ್ತಾರೆ ಎಂದು ಪ್ರಧಾನಿ ಹೇಳಿದರು.
ಮೊದಲ ಬಾರಿಗೆ ಸಂಸದರಾದವರು ಪ್ರಜಾಪ್ರಭುತ್ವದ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಗರಿಷ್ಠ ಅವಕಾಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ಅವರು ಸದಸ್ಯರನ್ನು ವಿನಂತಿಸಿದರು. ಇದು ರಾಜ್ಯಸಭೆಯ ಅಧ್ಯಕ್ಷರಾಗಿ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರ ಮೊದಲ ಅಧಿವೇಶನವಾಗಿದೆ ಎಂದ ಪ್ರಧಾನಿ, ಉಪರಾಷ್ಟ್ರಪತಿಯವರಿಗೆ ಶುಭಾಶಯ ಸಲ್ಲಿಸುವುದಾಗಿ ತಿಳಿಸಿದರು.
-
PM Modi welcomes Vice President Jagdeep Dhankar to officiate on Rajya Sabha's Chair
— ANI Digital (@ani_digital) December 7, 2022 " class="align-text-top noRightClick twitterSection" data="
Read @ANI Story | https://t.co/N7GZMW92Q5#ParliamentWinterSession #JagdeepDhankar #PMModi pic.twitter.com/ebZpAhPw00
">PM Modi welcomes Vice President Jagdeep Dhankar to officiate on Rajya Sabha's Chair
— ANI Digital (@ani_digital) December 7, 2022
Read @ANI Story | https://t.co/N7GZMW92Q5#ParliamentWinterSession #JagdeepDhankar #PMModi pic.twitter.com/ebZpAhPw00PM Modi welcomes Vice President Jagdeep Dhankar to officiate on Rajya Sabha's Chair
— ANI Digital (@ani_digital) December 7, 2022
Read @ANI Story | https://t.co/N7GZMW92Q5#ParliamentWinterSession #JagdeepDhankar #PMModi pic.twitter.com/ebZpAhPw00
ಭಾರತವು ಜಿ 20 ಅಧ್ಯಕ್ಷ ಸ್ಥಾನವನ್ನು ಪಡೆದಿರುವ ಈ ಸಮಯದಲ್ಲಿ ಚಳಿಗಾಲದ ಅಧಿವೇಶನ ಕೂಡ ಪ್ರಾರಂಭವಾಗಿದೆ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಸಾಮರ್ಥ್ಯ ಮತ್ತು ಆಕಾಂಕ್ಷೆಗಳನ್ನು ಪ್ರದರ್ಶಿಸಲು ಇದು ಒಂದು ದೊಡ್ಡ ಅವಕಾಶವಾಗಿದೆ ಎಂದು ಅವರು ಹೇಳಿದರು.
ಪ್ರಸ್ತುತ ಅಂತಾರಾಷ್ಟ್ರೀಯ ಸನ್ನಿವೇಶವನ್ನು ಪರಿಗಣಿಸಿ, ಸಂಸತ್ತಿನಲ್ಲಿ ಸರ್ಕಾರವು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತದೆ ಎಂದು ಪ್ರಧಾನಿ ಹೇಳಿದರು. ಅಧಿವೇಶನದ ಸುಗಮ ಕಾರ್ಯನಿರ್ವಹಣೆ ಖಚಿತಪಡಿಸಿಕೊಳ್ಳಲು ಎಲ್ಲಾ ಪಕ್ಷಗಳ ಮುಖಂಡರಿಗೆ ಮನವಿ ಮಾಡಿದರು.
ಇದನ್ನೂ ಓದಿ: ಮಥುರಾ ಕ್ಷೇತ್ರದಿಂದ ಕಂಗನಾ ರಾಜಕೀಯ ಸುಳಿವು: ಒಳ್ಳೆಯ ವಿಚಾರವೆಂದ ಹೇಮಾ ಮಾಲಿನಿ