ಬೆಂಗಳೂರು : ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಸೂರ್ಯನ ಮೇಲ್ಮೈ ಅಧ್ಯಯನ ನಡೆಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿದ್ದ ಆದಿತ್ಯ ಎಲ್-1 ನೌಕೆಯು ಇಂದು ತನ್ನ ಗಮ್ಯಸ್ಥಾನ ತಲುಪಿದೆ. ಭೂಮಿಯಿಂದ 1.5 ಮಿಲಿಯನ್ ಕಿಲೋ ಮೀಟರ್ ದೂರದಲ್ಲಿರುವ ಲ್ಯಾಂಗ್ರೇಜಿಯನ್ ಪಾಯಿಂಟ್ನಲ್ಲಿ ಇಸ್ರೋ ತನ್ನ ನೌಕೆಯನ್ನು ಸ್ಥಿರಗೊಳಿಸಿದೆ.
-
India creates yet another landmark. India’s first solar observatory Aditya-L1 reaches it’s destination. It is a testament to the relentless dedication of our scientists in realising among the most complex and intricate space missions. I join the nation in applauding this…
— Narendra Modi (@narendramodi) January 6, 2024 " class="align-text-top noRightClick twitterSection" data="
">India creates yet another landmark. India’s first solar observatory Aditya-L1 reaches it’s destination. It is a testament to the relentless dedication of our scientists in realising among the most complex and intricate space missions. I join the nation in applauding this…
— Narendra Modi (@narendramodi) January 6, 2024India creates yet another landmark. India’s first solar observatory Aditya-L1 reaches it’s destination. It is a testament to the relentless dedication of our scientists in realising among the most complex and intricate space missions. I join the nation in applauding this…
— Narendra Modi (@narendramodi) January 6, 2024
ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ಸೂರ್ಯ-ಭೂಮಿಯ ನಡುವಿನ ಲ್ಯಾಗ್ರೇಂಜ್ ಪಾಯಿಂಟ್ 1 (ಎಲ್ 1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗಿದೆ. L1 ಬಿಂದುವಿನ ಸುತ್ತಲಿನ ಹಾಲೋ ಕಕ್ಷೆಯಲ್ಲಿ ಉಪಗ್ರಹವು ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿದೆ. ಜೊತೆಗೆ ಸೌರ ಚಟುವಟಿಕೆಗಳು ಮತ್ತು ಅಲ್ಲಿನ ಹವಾಮಾನದ ಮೇಲೂ ನಿಗಾ ವಹಿಸಲಿದೆ.
-
Another grand feat accomplished by ISRO! As part of India’s maiden solar mission, Aditya L1, the observatory has been placed in the final orbit and reached its destination at Lagrange Point 1. Congratulations to the entire Indian scientist community for the great achievement!…
— President of India (@rashtrapatibhvn) January 6, 2024 " class="align-text-top noRightClick twitterSection" data="
">Another grand feat accomplished by ISRO! As part of India’s maiden solar mission, Aditya L1, the observatory has been placed in the final orbit and reached its destination at Lagrange Point 1. Congratulations to the entire Indian scientist community for the great achievement!…
— President of India (@rashtrapatibhvn) January 6, 2024Another grand feat accomplished by ISRO! As part of India’s maiden solar mission, Aditya L1, the observatory has been placed in the final orbit and reached its destination at Lagrange Point 1. Congratulations to the entire Indian scientist community for the great achievement!…
— President of India (@rashtrapatibhvn) January 6, 2024
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಭಾರತದ ಮೊದಲ ಸೌರ ವೀಕ್ಷಣಾಲಯ ಆದಿತ್ಯ-ಎಲ್ 1 ತನ್ನ ನಿಗದಿತ ಕಕ್ಷೆ ತಲುಪಿದೆ. ಇದು ಅತ್ಯಂತ ಸಂಕೀರ್ಣ ಮತ್ತು ಕ್ಲಿಷ್ಟಕರ ಬಾಹ್ಯಾಕಾಶ ಕಾರ್ಯಾಚರಣೆಯಾಗಿದ್ದು, ಇದರ ಸಾಧನೆ ನಮ್ಮ ವಿಜ್ಞಾನಿಗಳ ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಅಸಾಧಾರಣ ಸಾಧನೆಯನ್ನು ಶ್ಲಾಘಿಸಲು ದೇಶದ ಜನತೆಯೊಂದಿಗೆ ನಾನು ಕೂಡ ಭಾಗಿಯಾಗುತ್ತೇನೆ. ಮನುಕುಲದ ಪ್ರಯೋಜನಕ್ಕಾಗಿ ನಾವು ವಿಜ್ಞಾನದಲ್ಲಿ ಹೊಸ ಮೈಲಿಗಲ್ಲುಗಳನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
-
𝐈𝐧𝐝𝐢𝐚, 𝐈 𝐝𝐢𝐝 𝐢𝐭. 𝐈 𝐡𝐚𝐯𝐞 𝐫𝐞𝐚𝐜𝐡𝐞𝐝 𝐭𝐨 𝐦𝐲 𝐝𝐞𝐬𝐭𝐢𝐧𝐚𝐭𝐢𝐨𝐧!
— ISRO InSight (@ISROSight) January 6, 2024 " class="align-text-top noRightClick twitterSection" data="
Aditya-L1 has successfully entered the Halo orbit around the L1 point.#ISRO #AdityaL1Mission #AdityaL1 pic.twitter.com/6gwgz7XZQx
">𝐈𝐧𝐝𝐢𝐚, 𝐈 𝐝𝐢𝐝 𝐢𝐭. 𝐈 𝐡𝐚𝐯𝐞 𝐫𝐞𝐚𝐜𝐡𝐞𝐝 𝐭𝐨 𝐦𝐲 𝐝𝐞𝐬𝐭𝐢𝐧𝐚𝐭𝐢𝐨𝐧!
— ISRO InSight (@ISROSight) January 6, 2024
Aditya-L1 has successfully entered the Halo orbit around the L1 point.#ISRO #AdityaL1Mission #AdityaL1 pic.twitter.com/6gwgz7XZQx𝐈𝐧𝐝𝐢𝐚, 𝐈 𝐝𝐢𝐝 𝐢𝐭. 𝐈 𝐡𝐚𝐯𝐞 𝐫𝐞𝐚𝐜𝐡𝐞𝐝 𝐭𝐨 𝐦𝐲 𝐝𝐞𝐬𝐭𝐢𝐧𝐚𝐭𝐢𝐨𝐧!
— ISRO InSight (@ISROSight) January 6, 2024
Aditya-L1 has successfully entered the Halo orbit around the L1 point.#ISRO #AdityaL1Mission #AdityaL1 pic.twitter.com/6gwgz7XZQx
ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಶ್ಲಾಘಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಇಸ್ರೋ ಮತ್ತೊಂದು ದೊಡ್ಡ ಸಾಧನೆ ಮಾಡಿದೆ. ಭಾರತದ ಚೊಚ್ಚಲ ಸೌರ ವೀಕ್ಷಣಾಲಯ ಆದಿತ್ಯ L1 ಭಾಗವಾಗಿ ನೌಕೆಯನ್ನು ಅಂತಿಮ ಕಕ್ಷೆಗೆ ಇರಿಸಲಾಗಿದೆ ಮತ್ತು ನೌಕೆಯು ಲಾಗ್ರೇಂಜ್ ಪಾಯಿಂಟ್ 1 ತಲುಪಿದೆ. ಈ ಮಹಾನ್ ಸಾಧನೆ ಮಾಡಿದ ಇಡೀ ಭಾರತೀಯ ವಿಜ್ಞಾನಿ ಸಮುದಾಯಕ್ಕೆ ಅಭಿನಂದನೆಗಳು.
ಈ ಯೋಜನೆಯು ಸೂರ್ಯ ಮತ್ತು ಭೂಮಿಯ ವ್ಯವಸ್ಥೆಯ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ ಮತ್ತು ಇಡೀ ಮನುಕುಲಕ್ಕೆ ಪ್ರಯೋಜನವನ್ನು ನೀಡುತ್ತದೆ. ಇಸ್ರೋ ಕಾರ್ಯಾಚರಣೆಗಳಲ್ಲಿ ಮಹಿಳಾ ವಿಜ್ಞಾನಿಗಳ ಗಮನಾರ್ಹ ಭಾಗವಹಿಸುವಿಕೆಯು ಮಹಿಳಾ ಸಬಲೀಕರಣವನ್ನು ಉನ್ನತ ಕಕ್ಷೆಗೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾರೆ.
ಆದಿತ್ಯ ಎಲ್ 1 ಗಗನ ನೌಕೆಯನ್ನು ಕಳೆದ ವರ್ಷ ಸೆಪ್ಟೆಂಬರ್ 2ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. ಈ ನೌಕೆಯು ಒಟ್ಟು 126 ದಿನಗಳ ಪ್ರಯಾಣದಲ್ಲಿ ಸುಮಾರು 3.7 ಮಿಲಿಯನ್ ಕಿ.ಮೀ. ಗಳನ್ನು ಕ್ರಮಿಸಿದೆ. ಸದ್ಯ ಹಾಲೋ ಕಕ್ಷೆಯಲ್ಲಿ ನೌಕೆಯನ್ನು ಸೇರಿಸಲಾಗಿದ್ದು, ಈ ಕಕ್ಷೆಯಲ್ಲಿ ನೌಕೆಯು ಸೂರ್ಯನ ಮೇಲ್ಮೈ ಅಧ್ಯಯನ ನಡೆಸಲಿದೆ.
ಇದನ್ನೂ ಓದಿ : ಇಂದು ಸಂಜೆ 4 ಗಂಟೆಗೆ ಎಲ್-1 ಪಾಯಿಂಟ್ನಲ್ಲಿ ಆದಿತ್ಯ ನೌಕೆ ಕೂರಿಸುವ ಪ್ರಕ್ರಿಯೆ: ಇಸ್ರೋ