ಕೋಲ್ಕತ್ತಾ: ಮುಂದಿನ ಎರಡು ದಿನಗಳವರೆಗೆ ಪಶ್ಚಿಮ ಬಂಗಾಳದ ಅನೇಕ ಕಡೆ್ಳಲ್ಲಿ ಮಧ್ಯಮದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶನಿವಾರ ರಾತ್ರಿಯವರೆಗೆ ರಾಜ್ಯಾದ್ಯಂತ ಮಧ್ಯಮದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇದು ಭಾನುವಾರದವರೆಗೆ ಸಹ ಮುಂದುವರಿಯಬಹುದು. ಆದಾಗ್ಯೂ, ಭಾನುವಾರ ಮಧ್ಯಾಹ್ನದ ವೇಳೆ ಹವಾಮಾನ ಪರಿಸ್ಥಿತಿಗಳ ಸುಧಾರಣೆಯ ಸಾಧ್ಯತೆಗಳಿವೆ ಎನ್ನಲಾಗಿದೆ.
ರಾಜ್ಯದ ಪಶ್ಚಿಮ ಶ್ರೇಣಿಯ ಪುರುಲಿಯಾ, ಬಂಕುರಾ, ಬಿರ್ಭುಮ್, ಮುರ್ಷಿದಾಬಾದ್ ಮತ್ತು ಪಶ್ಚಿಮ ಬುರ್ದ್ವಾನ್ ಜಿಲ್ಲೆಗಳಲ್ಲಿ ಪ್ರಾರಂಭವಾದ ಮಳೆಯು ಶನಿವಾರದವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಬಂಗಾಳದ ಡಾರ್ಜಿಲಿಂಗ್, ಜಲ್ಪೈಗುರಿ, ಕಾಲಿಂಪಾಂಗ್ ಮತ್ತು ಅಲಿಪುರ್ದುವಾರ್ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂಬರುವ ಕೆಲ ದಿನಗಳವರೆಗೆ ಮಳೆಯ ಪ್ರಮಾಣವು ಸಾಕಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಬುಧವಾರ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಇಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಬೆಹಾಲಾ, ಕಿಡ್ಡರ್‌ಪೋರ್, ಮೊಮಿನ್‌ಪುರ ರಸ್ತೆ, ಬಾಗ್‌ಬಜಾರ್ ಮತ್ತು ಕಾಕುರಿಯಾ ಪ್ರದೇಶದಲ್ಲಿ ನೀರು ನಿಂತು ಜನರ ಓಡಾಟಕ್ಕೆ ಅಡೆ ತಡೆಯಾಗಿದೆ.
ಗುಜರಾತದಲ್ಲೂ ಭಾರಿ ಮಳೆ: ಜೂನ್ 20ರ ವೇಳೆ ಗುಜರಾತ್ ಪ್ರವೇಶಿಸಲಿರುವ ಮಾನ್ಸೂನ್ ಮಾರುತ, ಡಿಯು, ಉನಾ ಮತ್ತು ಸೂರತ್ನಲ್ಲಿ ಅಬ್ಬರಿಸಲಿದೆ. ಒಂದು ವಾರದವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಸೌರಾಷ್ಟ್ರದ ಕರಾವಳಿ ಭಾಗಗಳು, ರಾಜ್ಯ ರಾಜಧಾನಿ ಗಾಂಧಿನಗರ, ಅವಳಿನಗರ ಅಹಮದಾಬಾದ್ ಸೇರಿದಂತೆ ಮಧ್ಯ ಗುಜರಾತ್ನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.