ETV Bharat / bharat

ಮುಂಬೈನಲ್ಲಿ ಪ್ರವಾಹ ಭೀತಿ: ರೈಲ್ವೆ ಹಳಿ, ರಸ್ತೆಗಳು ಜಲಾವೃತ.. ಜನ ಜೀವನ ಅಸ್ತವ್ಯಸ್ತ - ಮುಂಬೈನಲ್ಲಿ ಮಳೆ

ಬಿಟ್ಟೂಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ವಾಣಿಜ್ಯನಗರಿ ಮುಂಬೈ ಅಕ್ಷರಶಃ ತತ್ತರಿಸಿ ಹೋಗಿದೆ. ಜನರು ಕೆಲಸಗಳಿಗೆ ತೆರಳಲು ಪರದಾಡುವಂಥ ಸ್ಥಿತಿ ಎದುರಾಗಿದೆ.

ಮುಂಬೈನಲ್ಲಿ ಪ್ರವಾಹ ಭೀತಿ
ಮುಂಬೈನಲ್ಲಿ ಪ್ರವಾಹ ಭೀತಿ
author img

By

Published : Jul 18, 2021, 7:06 AM IST

Updated : Jul 18, 2021, 9:11 AM IST

ಮುಂಬೈ: ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಬಡಾವಣೆಗಳೆಲ್ಲ ನದಿಗಳಾಗಿ ಮಾರ್ಪಟ್ಟಿವೆ. ಪ್ರವಾಹ ಭೀತಿ ಎದುರಾಗಿದ್ದು, ವಾಹನಗಳೆಲ್ಲ ಕೊಚ್ಚಿ ಹೋಗುತ್ತಿವೆ. ಸಿಯಾನ್​ ರೈಲ್ವೆ ಹಳಿ ಜಲಾವೃತಗೊಂಡಿದ್ದು, ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಮುಂಬೈನಲ್ಲಿ ಪ್ರವಾಹ ಭೀತಿ.. ರೈಲ್ವೆ ಹಳಿಗಳು ಜಲಾವೃತ:

ನಿತ್ಯ ವ್ಯಾಪಾರ ವಹಿವಾಟು ನಡೆಸುವ ನಗರದ ಬೃಹತ್ ಗಾಂಧಿ ಮಾರುಕಟ್ಟೆ ಪ್ರದೇಶವು ಮುಳುಗಿ ಹೋಗಿದ್ದು, ಪ್ರಯಾಣಿಕರ ಸಂಚಾರ ಅಸ್ತವ್ಯಸ್ತವಾಗಿದೆ. ವಾಹನಗಳೆಲ್ಲ ನೀರಿನಲ್ಲಿ ಮುಳುಗುತ್ತಿವೆ.

ಮುಂಬೈನಲ್ಲಿ ಪ್ರವಾಹ ಭೀತಿ: ರೈಲ್ವೆ ಹಳಿ, ರಸ್ತೆಗಳು ಜಲಾವೃತ..

ಪ್ರವಾಹ ಭೀತಿ ದಟ್ಟವಾಗಿರುವುದರಿಂದ ಜನರು ಮನೆ ಬಿಟ್ಟು ಹೊರ ಬಾರದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಆದರೂ, ಬೊರಿವಾಲಿ ಪ್ರದೇಶದ ರಸ್ತೆಯಲ್ಲಿ ಹರಿಯುತ್ತಿರುವ ನೀರಿನಲ್ಲಿ ಯುವಕರು ಕುಣಿದು, ಕುಪ್ಪಳಿಸಿ ಎಂಜಾಯ್ ಮಾಡಿದ್ದಾರೆ.

ಇದನ್ನೂ ಓದಿ:ವರುಣಾರ್ಭಟಕ್ಕೆ ಕೊಡಗಿನಲ್ಲಿ ಇಬ್ಬರು ಬಲಿ... ಪ್ರಾಣ ಕಳೆದುಕೊಂಡ ಕೂಲಿ ಕಾರ್ಮಿಕರು

Last Updated : Jul 18, 2021, 9:11 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.