ETV Bharat / bharat

ದಶಕಗಳ ದಾಖಲೆ ಮುರಿದ ದೆಹಲಿಯಲ್ಲಿ ಸುರಿದ ಭಾರಿ ಮಳೆ: ವರುಣನ ಅಬ್ಬರಕ್ಕೆ ಜನ ತತ್ತರ.. ಕೇಜ್ರಿವಾಲ್​ ತುರ್ತುಸಭೆ - Heavy rain in Delhi

''ದೆಹಲಿಯಲ್ಲಿ ಎರಡು ದಿನಗಳಲ್ಲಿ 153 ಮಿಮೀ ದಾಖಲೆ ಮಳೆಯಾಗಿದೆ. ಜನರು ತೀವ್ರ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರದಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ'' ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದರು.

Heavy rain
ದಶಕಗಳ ದಾಖಲೆ ಮುರಿದ ದೆಹಲಿಯಲ್ಲಿ ಸುರಿದ ಭಾರಿ ಮಳೆ: ವರುಣನ ಅಬ್ಬರಕ್ಕೆ ಜನ ತತ್ತರ..
author img

By

Published : Jul 10, 2023, 9:10 PM IST

ನವದೆಹಲಿ: ''ಜುಲೈ 8 ಮತ್ತು 9 ರಂದು ದೆಹಲಿಯಲ್ಲಿ 153 ಮಿ.ಮೀ. ಮಳೆಯಾಗಿದ್ದು, ದಶಕಗಳ ದಾಖಲೆಯನ್ನು ಮುರಿದಿದೆ. ಯಮುನಾ ನದಿಯ 206 ಮೀಟರ್ ಗಡಿಯನ್ನು ದಾಟಿದ ನಂತರ, ನದಿ ಸುತ್ತಲಿನ ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಲಾಗುವುದು'' ಎಂದು ಕೇಜ್ರಿವಾಲ್ ಹೇಳಿದರು.

  • #WATCH | Water level in Yamuna river breaches danger mark at Old Railway Bridge. The water of the river is flowing at 205.76 meters at 8 PM.

    (Evening visuals) pic.twitter.com/NsGQdsrGtN

    — ANI (@ANI) July 10, 2023 " class="align-text-top noRightClick twitterSection" data=" ">

205.76 ಮೀಟರ್‌ಗಳಿಗೆ ತಲುಪಿದ ಯಮುನಾ ನದಿ ಹರಿವು: ನಗರದಲ್ಲಿ ಸೋಮವಾರ ನಡೆದ ತುರ್ತು ಸಭೆಯ ನಂತರ ಮಾತನಾಡಿದ ಅವರು, ''ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಸಿಡಬ್ಲ್ಯೂಸಿ ಪ್ರಕಾರ, ದೆಹಲಿಯಲ್ಲಿ ಯಮುನಾ ನದಿ 203.58 ಮೀಟರ್‌ಗಳಷ್ಟು ಹರಿಯುತ್ತಿದೆ. ನಾಳೆ ಬೆಳಗ್ಗೆ 205.5 ಮೀಟರ್ ತಲುಪುವ ನಿರೀಕ್ಷೆಯಿದೆ. ಅಲ್ಲದೇ, ಹವಾಮಾನ ಮುನ್ಸೂಚನೆಗಳ ಪ್ರಕಾರ, ಯಮುನಾದಲ್ಲಿ ನೀರಿನ ಮಟ್ಟವು ತುಂಬಾ ಹೆಚ್ಚಾಗುವ ನಿರೀಕ್ಷೆಯಿಲ್ಲ. ಆದರೆ, ಯಮುನಾ 206 ಮೀಟರ್ ಮಾರ್ಕ್ ಅನ್ನು ದಾಟಿದರೆ, ನಾವು ನದಿಯ ದಡದಲ್ಲಿ ಸ್ಥಳಾಂತರಿಸುವಿಕೆಯನ್ನು ಪ್ರಾರಂಭಿಸುತ್ತೇವೆ" ಎಂದು ಸಿಎಂ ಹೇಳಿದರು.

ಪರಸ್ಪರರತ್ತ ಬೆರಳು ತೋರಿಸುವ ಸಮಯವಲ್ಲ- ಸಿಎಂ: ''ಇದು ಪರಸ್ಪರರತ್ತ ಬೆರಳು ತೋರಿಸುವ ಸಮಯವಲ್ಲ. ಹವಾಮಾನ ಮುನ್ಸೂಚನೆಯ ಪ್ರಕಾರ, ಮಳೆಯ ತೀವ್ರತೆಯು ಕ್ರಮೇಣ ಕಡಿಮೆಯಾಗಲಿದೆ. ದೆಹಲಿ ಸರ್ಕಾರವು ಎಲ್ಲಾ ತುರ್ತು ಪರಿಸ್ಥಿತಿಗಳಿಗೆ ಸಿದ್ಧವಾಗಿದೆ ಎಂದ ಕೇಜ್ರಿವಾಲ್ ಅವರು, ''ಅಹಿತಕರ ಘಟನೆಗಳನ್ನು ತಪ್ಪಿಸಲು ರಸ್ತೆಗಳಲ್ಲಿನ ಗುಂಡಿಗಳನ್ನು ಕಲ್ಲುಗಳಿಂದ ಮುಚ್ಚಲಾಗುತ್ತದೆ. ಮಳೆ ನೀರಿನ ಸಮಸ್ಯೆ ಪರಿಹರಿಸಲು ಎನ್‌ಡಿಎಂಸಿಗೆ ಮನವಿ ಮಾಡಲಾಗಿದೆ. ಮೂರು ರಸ್ತೆ ಗುಹೆಗಳಲ್ಲಿನ ಘಟನೆಗಳ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ'' ಎಂದರು.

  • #WATCH दिल्ली: यमुना नदी का जलस्तर खतरे के निशान के पार पहुंच गया है। यमुना में खतरे का निशान 204.50 मीटर है और दोपहर 1 बजे तक यमुना का जलस्तर 204.63 मीटर दर्ज किया गया। दोपहर एक बजे 1,90,837 क्यूसेक पानी हथिनीकुंड बैराज से यमुना में छोड़ा गया है। pic.twitter.com/hyff5wk41l

    — ANI_HindiNews (@AHindinews) July 10, 2023 " class="align-text-top noRightClick twitterSection" data=" ">

ಹತ್ನಿಕುಂದ ಬ್ಯಾರೇಜ್‌ನ ಹರಿವು 3,05,768 ಕ್ಯೂಸೆಕ್‌ಗೆ ಏರಿಕೆ: ಸೋಮವಾರ ಬೆಳಗ್ಗೆ 5ಕ್ಕೆ ಹತ್ನಿಕುಂದ ಬ್ಯಾರೇಜ್‌ನ ಹರಿವಿನ ಪ್ರಮಾಣ ಕ್ರಮೇಣ 3,05,768 ಕ್ಯೂಸೆಕ್‌ಗೆ ಏರಿಕೆಯಾಗಿದೆ ಎಂದು ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ ತಿಳಿಸಿದೆ. 1 ಗಂಟೆಗೆ 1,90,837 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಸಾಮಾನ್ಯವಾಗಿ ಬ್ಯಾರೇಜ್‌ನ ಹರಿವಿನ ಪ್ರಮಾಣ 352 ಕ್ಯೂಸೆಕ್‌ನಷ್ಟಿದ್ದರೂ ಜಲಾನಯನ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವುದರಿಂದ ನೀರಿನ ಹರಿವು ಹೆಚ್ಚಾಗುತ್ತದೆ. ಬ್ಯಾರೇಜ್‌ನಿಂದ ನೀರು ದೆಹಲಿಗೆ ಬರಲು ಸುಮಾರು ಎರಡು ಮೂರು ದಿನಗಳು ಬೇಕಾಗುತ್ತದೆ ಎಂದು ತಿಳಿಸಿದೆ.

ಯಲ್ಲೋ ಅಲರ್ಟ್ ಘೋಷಣೆ: ''ಇಂದು ಮತ್ತು ನಾಳೆ ರಾಷ್ಟ್ರ ರಾಜಧಾನಿಯಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ ಎಂದು ಐಎಂಡಿ ದೆಹಲಿಯ ವಿಜ್ಞಾನಿ ಸೋಮ ಸೇನ್ ಹೇಳಿದ್ದಾರೆ. ''ನಾವು ದೆಹಲಿಯಲ್ಲಿ 12 ಸೆಂ.ಮೀ ವರೆಗಿನ ಮಳೆಯನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ ನಿರೀಕ್ಷೆಗೂ ಮೀರಿ ಮಳೆ ಸುರಿದಿದೆ. ಇಲಾಖೆಯಿಂದ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಜೊತೆಗೆ ವಾಯವ್ಯ ಹಿಮಾಲಯ ಪ್ರದೇಶದ ಮೇಲೆ ಸ್ವಲ್ಪ ಮಳೆ ಕಡಿಮೆಯಾಗಿದೆ" ಎಂದರು.

ಮಳೆಯಿದಿಂದ ತುರ್ತು ಕಿಟ್‌ಗಳು ಹಾನಿ: ಮುಂಗಾರು ಮಳೆ ಅವಾಂತರದಿಂದ ದೆಹಲಿಯ ಮೇಲೆ ಪರಿಣಾಮ ಬೀರುತ್ತಲೇ ಇರುತ್ತಿದೆ. ಅದರ ವ್ಯಾಪ್ತಿಯು ನಗರದ ಆಗ್ನೇಯ ಪ್ರದೇಶವನ್ನು ತಲುಪಿದೆ. ಇಲ್ಲಿನ ಸರ್ಕಾರಿ ಸ್ವಾಮ್ಯದ ಜಂಗ್ಪುರದ ವಾರ್ಡ್ ಸಂಖ್ಯೆ 142ರಲ್ಲಿನ ಗೋದಾಮಿನಲ್ಲಿ ಮಳೆ ನೀರು ನುಗ್ಗಿದರಿಂದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಂಗ್ರಹಿಸಿದ್ದ ತುರ್ತು ಪರಿಹಾರದ ಕಿಟ್‌ಗಳನ್ನು ಹಾನಿಯಾಗಿವೆ. ತುರ್ತು ಸಮಯದಲ್ಲಿ ಸ್ಥಳೀಯರಿಗೆ ವಿತರಿಸಬೇಕಾಗಿದ್ದ ಸರ್ಕಾರದ ಪರಿಹಾರ ಕಿಟ್‌ಗಳು ಸಂಪೂರ್ಣ ನಾಶವಾಗಿವೆ. ಹಾನಿಗೊಳಗಾದ ಕಿಟ್‌ಗಳನ್ನು ಮತ್ತಷ್ಟು ಹಾನಿಯಾಗದಂತೆ ರಕ್ಷಿಸುವ ಪ್ರಯತ್ನದಲ್ಲಿ ಕೆಲಸಗಾರರು ತೊಡಗಿದರು.

ಇದನ್ನೂ ಓದಿ: ಪಂಜಾಬ್​ನಲ್ಲಿ ಭೀಕರ ಪ್ರವಾಹ.. ಹಲವು ಪ್ರದೇಶಗಳು ಜಲಾವೃತ: ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.