ಹೈದರಾಬಾದ್: ಹೈದರಾಬಾದ್‌ನ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಬಿರು ಬಿಸಿಲಿನಿಂದ ಕಂಗೆಟ್ಟ ಜನತೆಗೆ ಸ್ವಲ್ಪ ರಿಲೀಫ್ ಸಿಕ್ಕಂತಾಗಿದೆ.
ಮಂಗಳವಾರ ಸಂಜೆಯಿಂದ ತಂಪು ಗಾಳಿ ಮತ್ತು ಮೋಡದಿಂದ ಕೂಡಿದ ವಾತಾವರಣವಿತ್ತು. ಇಂದು ಬೆಳಿಗ್ಗೆಯಿಂದ ಹೈದರಾಬಾದ್‌ನಲ್ಲಿ ಮಳೆಯಾಗುತ್ತಿದೆ.
ಹೈದರಾಬಾದ್‌ನ ಪಂಜಗುಟ್ಟ, ಖೈರತಾಬಾದ್, ಎರ್ರಮಂಜಿಲ್, ಅಮೀರ್‌ಪೇಟ್, ಎಸ್‌ಆರ್ ನಗರ, ಕರ್ಮನ್‌ಘಾಟ್, ಚಂಪಪೇಟ್, ಐಎಸ್ ಸದಾನ್, ಮೀರ್‌ಪೇಟ್, ಸಂತೋಷ್ ನಗರ, ಮಿಯಾಪುರ, ಚಂದನಗರ, ಗಚ್ಚಿಬೌಲಿ, ಮಾಧಾಪುರ, ಕುಟ್ಬುಲ್ಲಾಪುರ, ಕೋಟಿ, ಎಲ್.ಬಿ.ನಗರ, ವನಸ್ಥಲಿಪುರಂ ಹಾಗು ಹಯತ್ ನಗರ ಸೇರಿ ನಗರದ ಹಲವೆಡೆ ಮಳೆ ಸುರಿಯುತ್ತಿದೆ.
ಇದನ್ನೂ ಓದಿ: ಮಾಸ್ಕ್ ಮರೆತ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ 2,000 ರೂ ದಂಡ
ಹೈದರಾಬಾದ್‌ನಲ್ಲಿ ಅಕಾಲಿಕ ಮಳೆಯಾಗುವ ಬಗ್ಗೆ ಜಿಎಚ್‌ಎಂಸಿ ಅಧಿಕಾರಿಗಳು ಮತ್ತು ಡಿಆರ್‌ಎಫ್ ಸಿಬ್ಬಂದಿಗೆ ಮುನ್ನೆಚ್ಚರಿಕೆ ನೀಡಿತ್ತು.
ಮೆದಕ್, ವಿಕರಾಬಾದ್, ಕರೀಂನಗರ, ಸಂಗಾರೆಡ್ಡಿ, ರಂಗಾರೆಡ್ಡಿ ಮತ್ತು ಪೆದ್ದಂಪಲ್ಲಿ ಜಿಲ್ಲೆಗಳಲ್ಲಿ 25 ರಿಂದ 30 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.