ನವದೆಹಲಿ: ವಾಯುವ್ಯ ರಾಜಸ್ಥಾನ ಮತ್ತು ದಕ್ಷಿಣ ಹರಿಯಾಣ ಹೊರತುಪಡಿಸಿ ಮಂಗಳವಾರ ದೇಶಾದ್ಯಂತ ಯಾವುದೇ ಉಷ್ಣ ಅಲೆ (ಬಿಸಿ ಗಾಳಿ)ಯ ವಾತಾವರಣ ದಾಖಲಾಗಿಲ್ಲ. ಯಾವ ರಾಜ್ಯದಲ್ಲೂ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಟಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ರಾಜಸ್ಥಾನ, ಪಂಜಾಬ್, ದೆಹಲಿ ಮತ್ತು ಹರಿಯಾಣದಲ್ಲಿ ಗರಿಷ್ಠ ತಾಪಮಾನವು 2-4 ಡಿಗ್ರಿ ಸೆಲ್ಸಿಯಸ್ ಕುಸಿದಿದೆ. ಮುಂದಿನ ಐದು ದಿನಗಳಲ್ಲಿ ಪೂರ್ವ ಭಾರತ, ವಾಯುವ್ಯ, ಮಧ್ಯಭಾಗದಲ್ಲಿ ಯಾವುದೇ ಬಿಸಿಗಾಳಿಯ ಪರಿಸ್ಥಿತಿ ಕಂಡುಬರುವುದಿಲ್ಲ ಎಂದು ಮುನ್ಸೂಚನೆ ನೀಡಿದೆ. ವಾರ್ಧಾ (ಮಹಾರಾಷ್ಟ್ರ) ಮತ್ತು ರಾಜನಂದಗಾಂವ್ (ಛತ್ತೀಸ್‌ಗಢ) ದಲ್ಲಿ ಗರಿಷ್ಠ ತಾಪಮಾನ 44.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮುಂದಿನ ಮೂರು ದಿನಗಳಲ್ಲಿ ಮಧ್ಯಭಾರತದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ. ನಂತರದ ದಿನಗಳಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಬಹುದು. ಬುಧವಾರದಿಂದ ಮಹಾರಾಷ್ಟ್ರದಲ್ಲಿ ಗರಿಷ್ಠ ತಾಪಮಾನವು 2-4 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ. ಆದರೆ ದೇಶದ ಉಳಿದ ಭಾಗಗಳಲ್ಲಿ ಯಾವುದೇ ಗಮನಾರ್ಹ ಬದಲಾವಣೆ ನಿರೀಕ್ಷಿಸಲಾಗುವುದಿಲ್ಲ ಎಂದು ಐಎಂಡಿ ಹೇಳಿದೆ.
ಇದನ್ನೂ ಓದಿ: ಹೈದರಾಬಾದ್ನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳು ಜಲಾವೃತ, ಕೆಲವೆಡೆ ವಿದ್ಯುತ್ ಕಡಿತ, ಬೆಳೆಹಾನಿ