ETV Bharat / bharat

Just ಕಮೆಂಟ್​ನಿಂದ ಕನಸು ನನಸಾಯ್ತು..: ಜ್ಯುವೆಲ್ಲರಿ ಕಂಪನಿಯ 'ಹೃದಯ' ಮಿಡಿದ ಕತೆ! - heart patient in jewellery ad

ನಾನೂ ಆ ಆಭರಣಗಳನ್ನು ಧರಿಸಿ, ತುಂಬಾ ಫೋಟೋಗಳನ್ನು ತೆಗೆಸಿಕೊಳ್ಳಬೇಕು. ಮಲಬಾರ್ ಗೋಲ್ಡ್ ಅಂಡ್​ ಡೈಮಂಡ್ಸ್ ನನಗೆ ಆ ಆಭರಣಗಳನ್ನು ಧರಿಸಲು ಮತ್ತು ಜಾಹೀರಾತಿಗೆ ಅವಕಾಶ ನೀಡುವಿರಾ ಎಂದು ಧನ್ಯಾ ಕಮೆಂಟ್ ಮಾಡಿದ್ದಳು.

Heart patient's Insta comment makes her overnight sensation; finds endorsement from Kareena

author img

By

Published : Sep 8, 2021, 11:51 AM IST

ಇಡುಕ್ಕಿ, ಕೇರಳ: ಸಾಮಾಜಿಕ ಜಾಲತಾಣಗಳಿಂದ ಏನಾದರೂ ಆಗಬಹುದು. ಒಳಿತು, ಕೆಡಕುಗಳು ನಾವು ಯಾವ ರೀತಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳುತ್ತೇವೋ, ಅದನ್ನೇ ಅವಲಂಬಿಸಿರುತ್ತದೆ. ಇಲ್ಲಿ ಇನ್​​​​​ಸ್ಟಾಗ್ರಾಂನ ಒಂದೇ ಒಂದು ಕಮೆಂಟ್​​​​ 21 ವರ್ಷ ವಯಸ್ಸಿನ ಹೃದಯ ಸಂಬಂಧಿ ಸಮಸ್ಯೆಯಿರುವ ಯುವತಿಯೊಬ್ಬಳು ಆಸೆಯನ್ನು ಪೂರೈಸಿದೆ.

ಆಕೆಯ ಹೆಸರು, ಧನ್ಯಾ ಸೋಜನ್.. ಅತ್ಯಂತ ಅಪರೂಪವಾದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಗಿರುವುದು ಕಂಜೆಸ್ಟಿವ್ ಹಾರ್ಟ್ ಫೇಲ್ಯೂರ್ (Congestive Heart Failure).. ಈ ಸಮಸ್ಯೆ ಇರುವ ರೋಗಿಗಳಲ್ಲಿ ಹೃದಯ ಸರಿಯಾಗಿ ಕೆಲಸ ಮಾಡುವುದಿಲ್ಲ. ಅಂದರೆ, ಕೆಲವೊಂದು ಭಾಗಗಳಿಗೆ ರಕ್ತ ಪಂಪ್​ ಮಾಡಲು ಹೃದಯಕ್ಕೆ ಸಾಧ್ಯವಾಗುವುದಿಲ್ಲ.

ನಟಿ ಕರೀನಾ ಕಪೂರ್ ಹಂಚಿಕೊಂಡ ವಿಡಿಯೋ

ಜಾಹೀರಾತಿಗೆ ಕಮೆಂಟ್​ ಮಾಡಿದ್ದ ಧನ್ಯಾ

ಇಂತಹ ಅಪರೂಪದ ಮತ್ತು ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ ಧನ್ಯಾ ಸೋಜನ್, ಒಂದು ಬಾರಿ ಪ್ರಖ್ಯಾತ ಚಿನ್ನದ ಮಾರಾಟದ ಕಂಪನಿಯೊಂದರ ಜಾಹೀರಾತನ್ನು ಇನ್​​​​​​​​​​ಸ್ಟಾಗ್ರಾಂನಲ್ಲಿ ವೀಕ್ಷಿಸಿದ್ದರು. ಆ ಜಾಹೀರಾತಿನ ಆಭರಣಗಳನ್ನು ನೋಡಿ, ನಾನೂ ಆ ಆಭರಣಗಳನ್ನು ಧರಿಸಿ, ತುಂಬಾ ಫೋಟೋಗಳನ್ನು ತೆಗೆಸಿಕೊಳ್ಳಬೇಕು. ಮಲಬಾರ್ ಗೋಲ್ಡ್ ಅಂಡ್​ ಡೈಮಂಡ್ಸ್ ನನಗೆ ಆ ಆಭರಣಗಳನ್ನು ಧರಿಸಲು ಮತ್ತು ಜಾಹೀರಾತಿಗೆ ಅವಕಾಶ ನೀಡುವಿರಾ ಎಂದು ಕಮೆಂಟ್ ಮಾಡಿದ್ದಳು..

ನನಸಾಯ್ತು ಕನಸು..!

ಸಾಮಾನ್ಯವಾಗಿ ಎಲ್ಲ ಕಮೆಂಟ್ ಮಾಡುವಂತೆ, ಧನ್ಯಾ ಈ ಜಾಹೀರಾತಿಗೆ ಕಮೆಂಟ್ ಮಾಡಿದ್ದಳು. ಕೆಲವೇ ದಿನಗಳಲ್ಲಿ ಆಕೆಗೆ ಮಲಬಾರ್ ಗೋಲ್ಡ್ ಅಂಡ್​​ ಡೈಮಂಡ್ಸ್​ನ ಬ್ಯುಸಿನೆಸ್​ ಟೀಂನಿಂದ ಕರೆಬಂದಿತ್ತು. ಮುಂದಿನ ವಾರ ಕೊಚ್ಚಿಯಲ್ಲಿ ನಡೆಯುತ್ತಿರುವ ಜಾಹೀರಾತು ಶೂಟಿಂಗ್​ನಲ್ಲಿ ಪಾಲ್ಗೊಳ್ಳುವಂತೆ ಕೇಳಿದ್ದರು. ಜಾಹೀರಾತು ನಿರ್ದೇಶಕ ರೋಹನ್ ಮ್ಯಾಥ್ಯೂ ಆಕೆಯ ಕಥೆಯನ್ನು ಚಿತ್ರಿಸಿದ್ದು, ಆಕೆ ತಾನು ಇಷ್ಟ ಪಟ್ಟ ಆಭರಣದೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಬಾಲಿವುಡ್ ನಟಿ ಕರೀನಾ ಕಪೂರ್ ಕೂಡಾ ಇನ್ಸ್​​ಟಾದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಧನ್ಯಾಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.