ETV Bharat / bharat

ಭಾರತದ ಕೆಮ್ಮಿನ ಸಿರಪ್ ನಿಂದ 18 ಮಕ್ಕಳ ಸಾವು ಪ್ರಕರಣ.. ಕಂಪನಿ ವಿರುದ್ಧ ಕೇಂದ್ರ ಸರ್ಕಾರದಿಂದ ಕ್ರಮ​ - ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ

ಉಜ್ಬೇಕಿಸ್ತಾನ ದುರಂತ- ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ- ನೋಯ್ಡಾ ಮೂಲದ ಮರಿಯನ್ ಬಯೋಟೆಕ್‌ನ ಡಾಕ್-1 ಮ್ಯಾಕ್ಸ್ ಉತ್ಪಾದನೆಗೆ ನಿಷೇಧ

cough syrup
ಕೆಮ್ಮು ಸಿರಪ್
author img

By

Published : Dec 31, 2022, 4:11 PM IST

ನವದೆಹಲಿ: ಉಜ್ಬೇಕಿಸ್ತಾನದಲ್ಲಿ ಡಾಕ್-1 ಮ್ಯಾಕ್ಸ್ ಕೆಮ್ಮು ಸಿರಪ್ ಸೇವಿಸಿ 18 ಮಕ್ಕಳು ಮೃತಪಟ್ಟಿರುವ ಆರೋಪದ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವಾಲಯವು ನೋಯ್ಡಾ ಮೂಲದ ಮರಿಯನ್ ಬಯೋಟೆಕ್‌ನ ಡಾಕ್-1 ಮ್ಯಾಕ್ಸ್ ಉತ್ಪಾದನೆಯನ್ನು ನಿಷೇಧಿಸಿದೆ.

ಸಿಡಿಎಸ್‌ಸಿಒ ತಂಡ ಪರಿಶೀಲನೆ: ಉಜ್ಬೇಕಿಸ್ತಾನ್‌ ದೇಶಕ್ಕೆ ಕೆಮ್ಮು ಸಿರಪ್ ಮತ್ತು ಇತರ ಔಷಧಿಗಳ ಪ್ರಮುಖ ಪೂರೈಕೆದಾರ ಭಾರತವಾಗಿದೆ. ಗುರುವಾರ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ) ಮತ್ತು ಯುಪಿ ಡ್ರಗ್ಸ್ ಕಂಟ್ರೋಲ್ ಜಂಟಿ ತಂಡವು ನೋಯ್ಡಾದ ಮರಿಯನ್ ಬಯೋಟೆಕ್‌ನ ಉತ್ಪಾದನಾ ಘಟಕವನ್ನು ಪರಿಶೀಲಿಸಿತು.

"CDSCO ತಂಡವೂ ಪರಿಶೀಲಿಸಿ, ಕೆಮ್ಮು ಸಿರಪ್ ಡಾಕ್ 1 ಮ್ಯಾಕ್ಸ್‌ನಲ್ಲಿ ಕಲಬೆರಕೆ ವರದಿ ಪ್ರಕಟಿಸಿದೆ. ಕಳೆದ ರಾತ್ರಿ ಅದರ ನೋಯ್ಡಾ ಘಟಕದಲ್ಲಿ ಮರಿಯನ್ ಬಯೋಟೆಕ್‌ನ ಎಲ್ಲ ಉತ್ಪಾದನೆ ಸಿರಪ್​ಗಳಿಗೆ ತಡೆ ನೀಡಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ಇನ್ನೂ ನಡೆಯಲಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.

CDSCO ಉಜ್ಬೇಕಿಸ್ತಾನ್‌ನ ರಾಷ್ಟ್ರೀಯ ಔಷಧ ನಿಯಂತ್ರಕ ಜತೆಗೆ ನಿರಂತರ ಸಂಪರ್ಕದಲ್ಲಿದೆ. ಮರಿಯನ್ ಬಯೋಟೆಕ್ ರಫ್ತಿನ ಪರವಾನಗಿ ಪಡೆದ ಬಳಿಕ Dok1 ಮ್ಯಾಕ್ಸ್ ಕಾಗ್ ಮತ್ತು ಟ್ಯಾಬ್ಲೆಟ್‌ಗಳನ್ನು ತಯಾರಿಸಲು ಪ್ರಾರಂಭಿಸಿತು. ಅದು ಉತ್ತರ ಪ್ರದೇಶದ ಡ್ರಗ್ ಕಂಟ್ರೋಲರ್‌ದ ಪರವಾನಗಿಯನ್ನು ಹೊಂದಿದೆ. "ಕಂಪನಿಯು ಯಾವುದೇ ಅವ್ಯವಹಾರದಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದರೆ, ಅದರ ಪರವಾನಗಿಯನ್ನು ರದ್ದುಗೊಳಿಸಬಹುದು.ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು 'ಈಟಿವಿ ಭಾರತ'ಗೆ ತಿಳಿಸಿದ್ದಾರೆ.

ಈ ಮೊದಲು ಕೆಮ್ಮಿನ ಸಿರಪ್‌ನ ಮಾದರಿಗಳನ್ನು ಪರೀಕ್ಷೆಗಾಗಿ ಚಂಡೀಗಢದ ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯಕ್ಕೆ (RDTL) ಕಳುಹಿಸಲಾಗಿದೆ. Doc-1 Max syrup ಬಳಕೆಯ ನಂತರ ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳು ಸಾವಿಗೀಡಾದ ನಂತರ, ಉಜ್ಬೇಕಿಸ್ತಾನ್ ಸರ್ಕಾರವು ಈಗಾಗಲೇ Marion Biotech ನ ಕಾನೂನು ಪ್ರತಿನಿಧಿಯ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.

'ಉಜ್ಬೇಕಿಸ್ತಾನ್ ಅಧಿಕಾರಿಗಳು ಈ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ತೆಗೆದುಕೊಳ್ಳದಿದ್ದರೂ, ಉಜ್ಬೇಕಿಸ್ತಾನ್‌ದ ಭಾರತ ರಾಯಭಾರ ಕಚೇರಿ ಸಂಪರ್ಕಿಸಿ ಅವರ ತನಿಖೆಯ ಕುರಿತು ಹೆಚ್ಚಿನ ಮಾಹಿತಿ ಕೇಳಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದರು.

ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು 'ಉಜ್ಬೇಕಿಸ್ತಾನ್ ಅಧಿಕಾರಿಗಳು ಕಂಪನಿಯ ಸ್ಥಳೀಯ ಪ್ರತಿನಿಧಿ ಸೇರಿದಂತೆ ಕೆಲವು ಜನರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ ಎನ್ನುವುದು ತಿಳಿದಿದ್ದು, ಈ ಹಿನ್ನೆಲೆ ಅವರಿಗೆ ಯಾವುದೇ ರೀತಿ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಕರಣ ಏನು?: ಭಾರತ ತಯಾರಿಸಿದ ಕೆಮ್ಮಿನ ಸಿರಪ್​ ಸೇವಿಸಿ ದಕ್ಷಿಣ ಆಫ್ರಿಕಾದ ಗಾಂಬಿಯಾದಲ್ಲಿ ಮಕ್ಕಳು ಸಾವನ್ನಪ್ಪಿದ ಆರೋಪದ ಬಳಿಕ, ಉಜ್ಬೇಕಿಸ್ತಾನದಲ್ಲೂ ಇಂಥಹದ್ದೇ ದುರಂತ ಸಂಭವಿಸಿತು.

ಮಧ್ಯ ಏಷ್ಯಾ ರಾಷ್ಟ್ರವಾದ ಉಜ್ಬೇಕಿಸ್ತಾನದಲ್ಲಿ ಭಾರತೀಯ ಕಂಪನಿ ನೋಯ್ಡಾ ಮೂಲದ ಮರಿಯನ್ ಬಯೋಟೆಕ್‌ನ ತಯಾರಿಸಿದ ಡಾಕ್ 1 ಮ್ಯಾಕ್ಸ್ ಕೆಮ್ಮಿನ ಸಿರಪ್​ ಸೇವಿಸಿ 21 ಮಕ್ಕಳು ಉಸಿರಾಟದ ಸಮಸ್ಯೆಗೆ ಒಳಗಾಗಿದ್ದರು. ಅದರಲ್ಲಿ 18 ಮಕ್ಕಳು ಮೃತಪಟ್ಟಿದ್ದರು.

ಮೃತ ಮಕ್ಕಳು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುವ ಮೊದಲು ಈ ಔಷಧಿಯನ್ನು 2 ರಿಂದ 7 ದಿನಗಳವರೆಗೆ ದಿನಕ್ಕೆ 3 ರಿಂದ 4 ಬಾರಿ, 2.5- 5 ಎಂಎಲ್​ ತೆಗೆದುಕೊಂಡಿದ್ದಾರೆ.ಆದರೆ ಈ ಕೆಮ್ಮಿನ ಸಿರಪ್ ಮಕ್ಕಳು ತೆಗೆದುಕೊಂಡು ಬಳಿಕ ಆರೋಗ್ಯ ಹದಗೆಟ್ಟು ಉಸಿರಾಟದ ತೊಂದರೆ ಅನುಭವಿಸಿ ಸಾವಿಗೀಡಾಗಿದ್ದರು. ಇದನ್ನೂ ಗಂಭೀರವಾಗಿ ಪರಿಗಣಿಸಿದ ಅಲ್ಲಿನ ಸರ್ಕಾರ ತನಿಖೆಗೆ ಆದೇಶಿಸಿತು. ಕಂಪನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿತು.

ಇದನ್ನೂಓದಿ:ಒಂದೇ ಹಳಿ ಮೇಲೆ ಬಂದ ಎರಡು ರೈಲು: ಕೂದಲೆಳೆ ಅಂತರದಲ್ಲಿ ತಪ್ಪಿದ ಅಪಘಾತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.