ETV Bharat / bharat

ದೇಶದಲ್ಲಿ 2.43 ಕೋಟಿ ಜನರಿಗೆ ವ್ಯಾಕ್ಸಿನ್​​: ಮಹಾರಾಷ್ಟ್ರ ಬಗ್ಗೆ ಆತಂಕ ವ್ಯಕ್ತಪಡಿಸಿದ ಕೇಂದ್ರ - ದೇಶದಲ್ಲಿ 2.43 ಕೋಟಿ ಜನರಿಗೆ ವ್ಯಾಕ್ಸಿನ್

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್​​ನ ಎರಡನೇ ಅಲೆ ಜೋರಾಗಿದೆ. ಒಂದೇ ದಿನ 13 ಸಾವಿರಕ್ಕೂ ಅಧಿಕ ಸೋಂಕಿತ ಪ್ರಕರಣಗಳು ಕಾಣಿಸಿಕೊಂಡಿವೆ. ಇದೇ ವಿಚಾರವಾಗಿ ಕೇಂದ್ರ ಆರೋಗ್ಯ ಇಲಾಖೆ ಮಾತನಾಡಿದ್ದು, ಆತಂಕ ವ್ಯಕ್ತಪಡಿಸಿದೆ.

Health Secretary Rajesh Bhushan
Health Secretary Rajesh Bhushan
author img

By

Published : Mar 11, 2021, 5:24 PM IST

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್​ ವಿರುದ್ಧದ ಹೋರಾಟ ಮುಂದುವರೆದಿದೆ. ಈಗಾಗಲೇ ದೇಶಾದ್ಯಂತ 2ನೇ ಹಂತದ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿದೆ. ಇದರ ಮಧ್ಯೆ ಮಹಾರಾಷ್ಟ್ರದಲ್ಲಿ ಹೆಚ್ಚು ಕೋವಿಡ್​ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಮತ್ತಷ್ಟು ಚಿಂತೆಗೊಳಗಾಗುವಂತೆ ಮಾಡಿದೆ.

'ಯಾವುದೇ ರಾಜ್ಯದಲ್ಲೂ ವ್ಯಾಕ್ಸಿನ್ ಕೊರತೆ ಇಲ್ಲ'

ಕೇಂದ್ರ ಆರೋಗ್ಯ ಇಲಾಖೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ದೇಶದಲ್ಲಿ ಇಲ್ಲಿಯವರೆಗೆ 2.43 ಕೋಟಿ ಜನರಿಗೆ ಕೋವಿಡ್​ ವ್ಯಾಕ್ಸಿನ್ ನೀಡಲಾಗಿದೆ. ಯಾವುದೇ ರಾಜ್ಯದಲ್ಲೂ ಕೋವಿಡ್​ ವ್ಯಾಕ್ಸಿನ್​ ಕೊರತೆ ಇಲ್ಲ ಎಂದು ಹೇಳಿದೆ. ಆದರೆ ಮಹಾರಾಷ್ಟ್ರದಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಚಿಂತೆಗೀಡಾಗುವಂತೆ ಮಾಡಿದೆ ಎಂದಿದೆ.

ಆರೋಗ್ಯ ಇಲಾಖೆ ಕಾರ್ಯದರ್ಶಿ ಸುದ್ದಿಗೋಷ್ಠಿ

'ಕೋವಿಡ್‌ ಲಘುವಾಗಿ ಪರಿಗಣಿಸಬೇಡಿ, ಅಗತ್ಯ ಮುನ್ನೆಚ್ಚರಿಕೆ ವಹಿಸಿ'

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಐಸಿಎಂಆರ್‌ ಡಿಜಿ ಡಾ.ಬಲರಾಮ್ ಭಾರ್ಗವ್​, ಕಡಿಮೆ ಪರೀಕ್ಷೆ, ಟ್ರ್ಯಾಕಿಂಗ್​ ಮತ್ತು ಪತ್ತೆ ಹಚ್ಚುವಿಕೆ ಕಡಿಮೆ ಮಾಡಿರುವ ಕಾರಣ ಇಷ್ಟೊಂದು ಕೇಸ್‌ಗಳು ಕಾಣಿಸಿಕೊಳ್ಳುತ್ತಿವೆ. ಇದೊಂದು ಗಂಭೀರ ವಿಷಯವಾಗಿದ್ದು, ವೈರಸ್​​ ಅನ್ನು ಯಾರೂ ಕೂಡಾ ಲಘುವಾಗಿ ತೆಗೆದುಕೊಳ್ಳಬೇಡಿ. ಇದರಿಂದ ಹೊರಬರಬೇಕಾದರೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ ಎಂದಿದ್ದಾರೆ.

  • Maharashtra has shown a worrisome trend. The mutant strain has not been found incriminating in this surge in cases. It is just related to reduced testing, tracking & tracing and COVID inappropriate behaviour and large congregations: ICMR DG Dr Balram Bhargava pic.twitter.com/BhrkiF1cQB

    — ANI (@ANI) March 11, 2021 " class="align-text-top noRightClick twitterSection" data=" ">

ಇದನ್ನೂ ಓದಿ: ರಸ್ತೆಗಳಲ್ಲಿ ಬಿಲ್‌ಬೋರ್ಡ್‌ ಹಾಕಿ ಭಾರತಕ್ಕೆ ವಿಶೇಷವಾಗಿ ಧನ್ಯವಾದ ಅರ್ಪಿಸಿದ ಕೆನಡಾ

ಮಹಾರಾಷ್ಟ್ರದ ಜತೆಗೆ ಮಧ್ಯಪ್ರದೇಶ, ಗುಜರಾತ್​, ಹರಿಯಾಣ, ಕೇರಳ ಹಾಗೂ ಪಂಜಾಬ್​ದಲ್ಲಿ ಅತಿ ಹೆಚ್ಚಿನ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ಅಲ್ಲಿನ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಸಭೆ ನಡೆಸಲಿದ್ದೇವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.