ಕಾರ್ಸೋಗ್ (ಹಿಮಾಚಲ ಪ್ರದೇಶ): ಜಿಲ್ಲೆಯ ಸರ್ಟೆಯೋಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ವೃದ್ಧರಿಗೆ ಲಸಿಕೆ ನೀಡಲು ಆರೋಗ್ಯ ಇಲಾಖಾ ಸಿಬ್ಬಂದಿ ಬೆಟ್ಟ, ಗುಡ್ಡಗಳನ್ನು ಹತ್ತಿಳಿದು ಪ್ರಯಾಣಿಸಬೇಕಿದೆ.
ಸ್ವಾತಂತ್ರ್ಯ ಬಂದು 7 ದಶಕಗಳು ಪೂರೈಸಿದರೂ ಸರ್ಟೆಯೋಲಾ ಪಂಚಾಯಿತಿ ವ್ಯಾಪ್ತಿಗೆ ರಸ್ತೆ ಸೌಲಭ್ಯಗಳಿಲ್ಲ. ಆದರೂ, ಜನರ ರಕ್ಷಣೆಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಅಪಾಯ ಲೆಕ್ಕಿಸದೆ ತೆರಳಿ ವ್ಯಾಕ್ಸಿನ್ ನೀಡಿದ್ದಾರೆ. ವೈದ್ಯಕೀಯ ತಂಡವು ಒಂದೆಡೆ ಜೆಸಿಬಿ ಬಕೆಟ್ನಲ್ಲಿ ಕುಳಿತು ಹಳ್ಳ ದಾಟಬೇಕಾಯಿತು.
ಆರೋಗ್ಯ ಇಲಾಖೆಗೆ ಧನ್ಯವಾದ
ಗ್ರಾಮಕ್ಕೆ ರಸ್ತೆ ಸೌಲಭ್ಯವಿಲ್ಲದಿದ್ದರೂ ಬೆಟ್ಟಗುಡ್ಡ ಏರಿ ಬಂದು ವೃದ್ಧರಿಗೆ ಲಸಿಕೆ ನೀಡಿದ್ದಕ್ಕೆ ಪಂಚಾಯಿತಿ ವ್ಯಾಪ್ತಿಯ ಜನತೆ ಆರೋಗ್ಯ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ. ಇನ್ಮುಂದೆಯೂ ಜನರಿಗೆ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಗ್ರಾಮಗಳಿಗೆ ಬಂದು ಲಸಿಕೆ ನೀಡಲು ವೈದ್ಯರಿಗೆ ಮನವಿ ಮಾಡಲಾಗಿದೆ ಎಂದು ಪಂಚಾಯಿತಿ ಮುಖ್ಯಸ್ಥ ತಿಲಕ್ ವರ್ಮಾ ತಿಳಿಸಿದ್ದಾರೆ.