ETV Bharat / bharat

ತರಗತಿಯಲ್ಲಿ ತ್ರಿವರ್ಣ ಧ್ವಜದಿಂದ ಬ್ಲ್ಯಾಕ್‌ಬೋರ್ಡ್ ಸ್ವಚ್ಛಗೊಳಿಸಿದ ಮುಖ್ಯ ಶಿಕ್ಷಕ!

ತರಗತಿಯಲ್ಲೇ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಮುಖ್ಯ ಶಿಕ್ಷಕನನ್ನು ಜಾರ್ಖಂಡ್‌ ಶಿಕ್ಷಣ ಇಲಾಖೆ ಸೇವೆಯಿಂದ ವಜಾಗೊಳಿಸಿದೆ.

headmaster-held-for-cutting-and-using-tricolour-to-clean-blackboard
ತರಗತಿಯಲ್ಲಿ ತ್ರಿವರ್ಣ ಧ್ವಜದಿಂದ ಬೋರ್ಡ್ ಸ್ವಚ್ಛಗೊಳಿಸಿದ ಮುಖ್ಯ ಶಿಕ್ಷಕ
author img

By

Published : Dec 9, 2022, 7:52 PM IST

ರಾಂಚಿ(ಜಾರ್ಖಂಡ್​): ಶಾಲೆಯಲ್ಲಿ ವಿದ್ಯಾರ್ಥಿಗಳ ಮುಂದೆಯೇ ರಾಷ್ಟ್ರಧ್ವಜವನ್ನು ಕತ್ತರಿಸಿ ಅದರಿಂದ ಕುರ್ಚಿ, ಮೇಜು ಮತ್ತು ಬೋರ್ಡ್​​ ಸ್ವಚ್ಛಗೊಳಿಸಿದ ಆರೋಪದಡಿ ಓರ್ವ ಮುಖ್ಯ ಶಿಕ್ಷಕನನ್ನು ಬಂಧಿಸಲಾಗಿದೆ. ಈ ಘಟನೆ ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಘಟಶಿಲಾದಲ್ಲಿರುವ ಶಾಲೆಯ ಮುಖ್ಯ ಶಿಕ್ಷಕ, ಆರೋಪಿ ಶಫಾಕ್ ಇಕ್ಬಾಲ್ ಬಂಧಿತರು.

ಗುರುವಾರ ತರಗತಿಯಲ್ಲೇ ರಾಷ್ಟ್ರಧ್ವಜಕ್ಕೆ ಶಫಾಕ್ ಇಕ್ಬಾಲ್ ಅಪಮಾನ ಮಾಡಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಇದರಿಂದ ಅನೇಕ ಗ್ರಾಮಸ್ಥರು ಶಾಲೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಇದರ ಮಾಹಿತಿ ಪಡೆದ ಬ್ಲಾಕ್ ಶಿಕ್ಷಣ ವಿಸ್ತರಣಾಧಿಕಾರಿ ಸುಬೋಧ ರೈ ಮತ್ತು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಕೇಶವ ಭಾರತಿ ಪೊಲೀಸರೊಂದಿಗೆ ಶಾಲೆಗೆ ಆಗಮಿಸಿದ್ದಾರೆ.

ಆರೋಪಿಯನ್ನು ವಿಚಾರಿಸಿದಾಗ ಧ್ವಜವನ್ನು ಇಲಿ ಕಡಿದು ಹಾಕಿತ್ತು. ನನ್ನ ಅರಿವಿಗೆ ಬಾರದೆ ಅದನ್ನು ಸ್ವಚ್ಛ ಮಾಡಲು ಬಳಕೆ ಮಾಡಿದ್ದೇನೆ ಎಂದು ಹೇಳಿದ್ದಾನೆ. ಇದೇ ವೇಳೆ ಪೊಲೀಸರು ಶಿಕ್ಷಕನ ಕಪಾಟಿನಿಂದ ಕತ್ತರಿಸಿದ್ದ ತ್ರಿವರ್ಣ ಧ್ವಜವನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆ ನಂತರ ಆರೋಪಿ ಶಿಕ್ಷಕನನ್ನು ಶಿಕ್ಷಣ ಇಲಾಖೆ ತಕ್ಷಣವೇ ಸೇವೆಯಿಂದ ವಜಾ ಮಾಡಿದೆ.

ಇದನ್ನೂ ಓದಿ: ಎಂಬಿಬಿಎಸ್ ತರಗತಿಗೆ ಹಾಜರಾದ ದ್ವಿತೀಯ ಪಿಯು ವಿದ್ಯಾರ್ಥಿನಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.