ETV Bharat / bharat

ಅಶ್ಲೀಲ ಫೋಟೋ ಇಟ್ಟುಕೊಂಡು ಹಣಕ್ಕೆ ಬೇಡಿಕೆಯಿಟ್ಟ ಹೆಡ್‌ ಕಾನ್ಸ್‌ಟೇಬಲ್‌

ಈ ಕುರಿತು ದೇವಾಲಯದ ಆಡಳಿತಾಧಿಕಾರಿ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಹೆಡ್​ ಕಾನ್ಸ್‌ಟೇಬಲ್‌ ಕನಕರಾವ್ ಮತ್ತು ದಲಿತ ಸಮುದಾಯದ ಮುಖಂಡ ಮತ್ತು ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ..

author img

By

Published : Jul 3, 2021, 9:46 PM IST

head constable
ಹೆಡ್​ ಕಾನ್ಸ್‌ಟೇಬಲ್‌

ಪೂರ್ವ ಗೋದಾವರಿ: ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಹೆಡ್​ ಕಾನ್ಸ್‌ಟೇಬಲ್‌​ವೊಬ್ಬರು ಹಣ ನೀಡುವಂತೆ ಬೆದರಿಕೆ ಹಾಕಿರುವ ಘಟನೆ ಪೂರ್ವ ಗೋದಾವರಿ ಜಿಲ್ಲೆಯ ಪೆದ್ದಾಪುರಂನಲ್ಲಿ ನಡೆದಿದೆ.

ಕನಕರಾವ್​ ಎಂಬಾತ ಬೆದರಿಕೆ ಹಾಕಿರುವ ಪೊಲೀಸ್ ಹೆಡ್​ ಕಾನ್ಸ್‌ಟೇಬಲ್‌. ಪೆದ್ದಾಪುರಂನ ಆರ್ ಮುರಳಿ ಮೋಹನ್ ನೀಡಿದ ವಿವರಗಳ ಪ್ರಕಾರ, ಕನಕರಾವ್ ಸೂರ್ಯನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೇವಾಲಯದ ಅರ್ಚಕರ ಸಂಬಂಧಿ ಬಾಲಕನೊಂದಿಗೆ ಮಹಿಳಾ ಭಕ್ತರು ಸ್ನಾನ ಮಾಡುತ್ತಿರುವ ಫೋಟೋಗಳನ್ನು ತೆಗೆದು ತನಗೆ ಕಳುಹಿಸುವಂತೆ ಕೇಳಿಕೊಂಡಿದ್ದಾನೆ.

ಅಪ್ರಾಪ್ತ ಬಾಲಕ ಫೋಟೋಗಳನ್ನು ತೆಗೆದು ಕನಕರಾವ್​ಗೆ ಕಳುಹಿಸಿದ್ದಾನೆ. ನಂತರ ಹೆಡ್​ ಕಾನ್ಸ್‌ಟೇಬಲ್‌ ಪೆದ್ದಾಪುರಂನ ದಲಿತ ಸಮುದಾಯದ ಮುಖಂಡರೋರ್ವರಿಗೆ ಈ ಫೋಟೋಗಳನ್ನು ಶೇರ್​ ಮಾಡಿದ್ದಾನೆ.

ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಹೆಡ್​ ಕಾನ್ಸ್‌ಟೇಬಲ್‌ ಮತ್ತು ದಲಿತ ಮುಖಂಡ, ದೇವಾಲಯದ ಆಡಳಿತಾಧಿಕಾರಿಗಳ ಕುಟುಂಬಕ್ಕೆ 5 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಹಣ ನೀಡದಿದ್ದರೆ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ತಿಳಿಸಿದ್ದಾನೆ.

ಈ ಕುರಿತು ದೇವಾಲಯದ ಆಡಳಿತಾಧಿಕಾರಿ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಹೆಡ್​ ಕಾನ್ಸ್‌ಟೇಬಲ್‌ ಕನಕರಾವ್ ಮತ್ತು ದಲಿತ ಸಮುದಾಯದ ಮುಖಂಡ ಮತ್ತು ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.