ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರಿಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಆತ್ಮೀಯವಾಗಿ ಬರಮಾಡಿಕೊಂಡು ಕೆಲಹೊತ್ತು ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರೇ ಖುದ್ದಾಗಿ ದೇವೇಗೌಡರ ಕೈ ಹಿಡಿದು, ಅವರನ್ನು ಕುರ್ಚಿಯಲ್ಲಿ ಕೂರಿಸಿದರು. ಇದರ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದು, ಸಂಸತ್ನಲ್ಲಿ ದೇವೇಗೌಡರನ್ನು ಭೇಟಿಯಾಗಿ ಬಹಳ ಸಂತೋಷವಾಯಿತು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
-
Had a great meeting with our former PM Shri @H_D_Devegowda Ji in Parliament today. pic.twitter.com/89is38aUYn
— Narendra Modi (@narendramodi) November 30, 2021 " class="align-text-top noRightClick twitterSection" data="
">Had a great meeting with our former PM Shri @H_D_Devegowda Ji in Parliament today. pic.twitter.com/89is38aUYn
— Narendra Modi (@narendramodi) November 30, 2021Had a great meeting with our former PM Shri @H_D_Devegowda Ji in Parliament today. pic.twitter.com/89is38aUYn
— Narendra Modi (@narendramodi) November 30, 2021
ದೇವೇಗೌಡರ ಬಗ್ಗೆ ಪ್ರಧಾನಿ ಮೋದಿ ಈ ಹಿಂದಿನಿಂದಲೂ ಅಪಾರವಾದ ಪ್ರೀತಿ, ಗೌರವ ಇಟ್ಟುಕೊಂಡಿದ್ದಾರೆ. ಇದಕ್ಕೆ ಉಭಯ ನಾಯಕರ ಭೇಟಿಯ ಕೆಲವು ಫೋಟೋಗಳೇ ಸಾಕ್ಷಿಯಾಗಿವೆ.
ಇದನ್ನೂ ಓದಿ: 5 ವರ್ಷಗಳಲ್ಲಿ ಆರು ಲಕ್ಷ ಭಾರತೀಯರು 'ಪೌರತ್ವ' ತ್ಯಜಿಸಿದ್ದಾರೆ: ಕೇಂದ್ರ ಸರ್ಕಾರ
ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಲು ಹೆಚ್ಡಿಡಿ ದೆಹಲಿಗೆ ತೆರಳಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದಾರೆ.
ನಿನ್ನೆಯಿಂದ ಆರಂಭಗೊಂಡಿರುವ ಸಂಸತ್ ಚಳಿಗಾಲದ ಅಧಿವೇಶನ ಡಿಸೆಂಬರ್ 23ರವರೆಗೆ ನಡೆಯಲಿದ್ದು, ಮಹತ್ವದ ವಿಷಯಗಳು ಚರ್ಚೆಯಾಗಲಿವೆ.