ಚೆನ್ನೈ(ತಮಿಳುನಾಡು): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸವನ್ನು ಹಿಂದಿನ ಎಐಎಡಿಎಂಕೆ ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಆದೇಶವನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.
ಈ ಹಿಂದೆ ತಮಿಳುನಾಡಿನಲ್ಲಿ ಆಡಳಿತ ನಡೆಸಿದ್ದ ಎಐಎಡಿಎಂಕೆ ಸರ್ಕಾರ ಈ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತನೆ ಮಾಡಿತ್ತು. ಇದನ್ನು ಪ್ರಶ್ನೆ ಮಾಡಿದ್ದ ವಾರಸುದಾರರಾದ ದೀಪಾ ಮತ್ತು ದೀಪಕ್ ಸವಾಲು ಹಾಕಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆ ನಡೆಸಿರುವ ಮದ್ರಾಸ್ ಹೈಕೋರ್ಟ್ ಇದೀಗ ಜಯಲಲಿತಾ ಅವರ ಏಕೈಕ ಸಹೋದರ ಜಯಕುಮಾರ್ ಅವರ ಮಕ್ಕಳಾದ ದೀಪಾ ಮತ್ತು ದೀಪಕ್ ಅವರಿಗೆ ನಿವಾಸ ಹಸ್ತಾಂತರ ಮಾಡುವಂತೆ ನಿರ್ದೇಶನ ನೀಡಿದೆ.
![Madras High Court](https://etvbharatimages.akamaized.net/etvbharat/prod-images/13722956_546_13722956_1637748399813.png)
ಇದನ್ನೂ ಓದಿ: IPL 2022: ಸಿಎಸ್ಕೆಯಿಂದ ಧೋನಿ, ಜಡೇಜಾ, ಋತುರಾಜ್ ರಿಟೈನ್, ಲಕ್ನೋ ತಂಡಕ್ಕೆ ರಾಹುಲ್ ಕ್ಯಾಪ್ಟನ್
1960ರಲ್ಲಿ ಜಯಲಲಿತಾ ಅವರ ತಾಯಿ ಸಂಧ್ಯಾ ಪೋಯಸ್ ಗಾರ್ಡನ್ ಬಂಗಲೆ ಖರೀದಿ ಮಾಡಿದ್ದರು. ಇದರಲ್ಲೇ ಅವರು ವಾಸವಾಗಿದ್ದರು. 2016ರಲ್ಲಿ ಜಯಲಲಿತಾ ಮರಣದ ನಂತರ ತಮಿಳುನಾಡು ಸರ್ಕಾರ ಪೋಯಸ್ ಗಾರ್ಡನ್ ಬಂಗಲೆಯನ್ನ ಸ್ಮಾರಕವಾಗಿ ಪರಿವರ್ತನೆ ಮಾಡಿ ಘೋಷಣೆ ಮಾಡಿತು.
ಸರ್ಕಾರದ ಸ್ವಾಧೀನ ಆದೇಶ ರದ್ದುಪಡಿಸಲಾಗಿದ್ದು, ಇದೀಗ ವಾರಸುದಾರರಿಗೆ ವೇದ ನಿಲಯಂ ನಿವಾಸ ಮುಂದಿನ ಮೂರು ವಾರಗಳಲ್ಲಿ ಹಸ್ತಾಂತರ ಮಾಡಲು ಚೆನ್ನೈ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ.