ಚೆನ್ನೈ(ತಮಿಳುನಾಡು): ತಮಿಳುನಾಡಿನ ಮಹಿಳೆಯೊಬ್ಬರು ಭಾರತೀಯ ಮೂಲದ ಅಮೆರಿಕನ್ ಪ್ರಜೆಯನ್ನು ವರ್ಚುವಲ್ ಮೋಡ್ ಮೂಲಕ ಮದುವೆಯಾಗಲು ವೇದಿಕೆ ಸಿದ್ಧವಾಗಿದೆ. ಆನ್‌ಲೈನ್ ವಿವಾಹಕ್ಕೆ ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠಕ್ಕೆ ಈ ಜೋಡಿ ಧನ್ಯವಾದ ಸಲ್ಲಿಸಿದೆ.
ಮದುವೆ ಮಾನವನ ಮೂಲಭೂತ ಹಕ್ಕು ಮತ್ತು ವಿಶೇಷ ವಿವಾಹ ಕಾಯ್ದೆ 1954 ರ ಸೆಕ್ಷನ್ 12 ಮತ್ತು 13 ಈ ಹಕ್ಕನ್ನು ಜಾರಿಗೊಳಿಸುವ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕು ಎಂದು ರಿಟ್ ಅರ್ಜಿಯನ್ನು ಆಲಿಸಿದ ನಂತರ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಈ ಆದೇಶ ಹೊರಡಿಸಿದ್ದಾರೆ.
ಅರ್ಜಿದಾರರ ಪರ ವಕೀಲರು ಕನ್ಯಾಕುಮಾರಿ ನಿವಾಸಿ ಸುದರ್ಶಿನಿ ಅವರಿಗೆ ರಾಹುಲ್ ಎಲ್ ಮಧು ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಾಹವನ್ನು ನೆರವೇರಿಸಲು ನಿರ್ದೇಶನವನ್ನು ಕೋರಿದ್ದರು. 1954ರ ಹಿಂದು ವಿಶೇಷ ವಿವಾಹ ಕಾಯ್ದೆಯಡಿ ವಿವಾಹ ನೋಂದಣಿ ಮಾಡಿಸಿ ವಿವಾಹ ಪ್ರಮಾಣಪತ್ರ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.
ಮೂರು ಸಾಕ್ಷಿಗಳ ಸಮ್ಮುಖದಲ್ಲಿ ವರ್ಚುವಲ್ ಮೋಡ್ ಮೂಲಕ ಅರ್ಜಿದಾರರ ವಿವಾಹವನ್ನು ರಾಹುಲ್ ಎಲ್ ಮಧು ಅವರೊಂದಿಗೆ ವಿವಾಹವಾಗಲು ಅನುಕೂಲವಾಗುವಂತೆ ನ್ಯಾಯಾಲಯವು ಸಬ್ ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದೆ.
ವಿದೇಶಿ ಪ್ರಜೆ ಜೊತೆ ಪ್ರೀತಿ: ಕನ್ಯಾಕುಮಾರಿ ನಿವಾಸಿ ಸುದರ್ಶಿನಿ ಹಾಗೂ ಅಮೆರಿಕ ಪ್ರಜೆ ರಾಹುಲ್ ಮಧು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗಲು ಬಯಸಿದ್ದರು ಮತ್ತು ರಾಹುಲ್ ಭಾರತಕ್ಕೆ ಭೇಟಿ ನೀಡಿದ್ದರು. ಮೇ 5, 2022 ರಂದು ಅವರು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಸಬ್ ರಿಜಿಸ್ಟ್ರಾರ್‌ಗೆ ಅರ್ಜಿದಾರರೊಂದಿಗೆ ಜಂಟಿ ಅರ್ಜಿಯನ್ನು ಸಲ್ಲಿಸಿದ್ದರು. ನೋಟಿಸ್ ಪ್ರಕಟವಾದ ನಂತರ ರಾಹುಲ್ ತಂದೆ ಮತ್ತು ಮತ್ತೊಬ್ಬ ವ್ಯಕ್ತಿ ಆಕ್ಷೇಪಣೆಗಳನ್ನು ಸಲ್ಲಿಸಿದ್ದರು.
ಆಕ್ಷೇಪಣೆಗಳು ಸಮಂಜಸವಲ್ಲ ಎಂಬ ತೀರ್ಮಾನಕ್ಕೆ ನೋಂದಣಿ ಅಧಿಕಾರಿ ತೀರ್ಮಾನಿಸಿದ್ದಾರೆ. ಈ ನೋಟಿಸ್ನ 30 ದಿನಗಳ ಅವಧಿಯು ಜೂನ್ 12, 2022 ರಂದು ಮುಕ್ತಾಯಗೊಂಡಿತ್ತು. ಮರುದಿನ ಈ ಜೋಡಿ ಸಬ್-ರಿಜಿಸ್ಟ್ರಾರ್ ಮುಂದೆ ಹಾಜರಾಗಿದ್ದರು.
ಅದರೆ ಇದಕ್ಕೂ ಮೊದಲು ಅವರು ವಿದೇಶಕ್ಕೆ ಹಾರಿದ್ದರು. ಈಗ ವೀಸಾ ಅಗತ್ಯತೆಗಳ ಕಾರಣ ರಾಹುಲ್ ವಿದೇಶದಿಂದ ಹಿಂತಿರುಗಲು ಸಾಧ್ಯವಾಗಿಲ್ಲ. ಅದರ ಜೊತೆ ಇಲ್ಲಿ ಹೆಚ್ಚು ಸಮಯ ಕಾಯಲು ಸಹ ಸಾಧ್ಯವಾಗದ ಕಾರಣ ವಧು ಭಾರತದಲ್ಲಿದ್ದರೂ, ಮದುಮಗ ಅಮೆರಿಕದಲ್ಲಿದ್ದರೂ ಕಾನೂನಿನ ಅಡಿಯಲ್ಲಿ ವಿವಾಹವಾಗಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮಾಡೆಲ್, ಶ್ರೀನಗರದಲ್ಲಿ ಕೋಳಿ ಸಾಕಾಣಿಕೆ : ಯಶಸ್ಸು ಕಂಡ ಯುವಕ!