ಬೆಂಗಳೂರು : ಸ್ವದೇಶಿ ರಕ್ಷಣಾ ತಂತ್ರಜ್ಞಾನ ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದತ್ತ ಸಾಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹಾಕ್-ಐ ಕಾರ್ಯಕ್ರಮದ ಅಡಿಯಲ್ಲಿ ಸ್ಮಾರ್ಟ್ ಆ್ಯಂಟಿ ಏರ್ಫೀಲ್ಡ್ ವೆಪನ್ (ಎಸ್ಎಎಡಬ್ಲ್ಯೂ) ಅನ್ನು ಒಡಿಶಾ ಕರಾವಳಿಯಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ.
ಹಾಕ್-ಐ ಏರ್ಕ್ರಾಫ್ಟ್ನಿಂದ ಎಸ್ಎಎಡಬ್ಲ್ಯೂ ಅನ್ನು ಪರೀಕ್ಷೆ ಮಾಡಲಾಗಿದ್ದು, ಈ ಸಾಧನವನ್ನು ರಿಸರ್ಚ್ ಸೆಂಟರ್ ಇಮರಾತ್ (ಆರ್ಸಿಐ) ಮತ್ತು ಡಿಆರ್ಡಿಒ ಜಂಟಿಯಾಗಿ ಅಭಿವೃದ್ಧಿ ಪಡಿಸಿವೆ. ಅದರಲ್ಲೂ ಇಂಡಿಯನ್ ಹಾಕ್-ಎಂಕೆ132 ವಿಮಾನದಿಂದ ಹಾರಿಸಬಹುದಾದ ಮೊದಲ ಸ್ಮಾರ್ಟ್ ಸಾಧನವನ್ನು ಡಿಆರ್ಡಿಒ ಇದೇ ಮೊದಲ ಬಾರಿಗೆ ಅಭಿವೃದ್ಧಿ ಪಡಿಸಿದೆ.
ಇದನ್ನೂ ಓದಿ: ಬೀಜಿಂಗ್ ಗಣಿ ಸ್ಫೋಟ; ಓರ್ವ ಕಾರ್ಮಿಕ ಸಾವು, 10 ಜನ ನಾಪತ್ತೆ
ಹೆಚ್ಎಎಲ್ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಗಮನ ಹರಿಸಿದ್ದು, ಕಂಪನಿ ಒಡೆತನದ ಹಾಕ್-ಐ ಅನ್ನು ಇಲ್ಲಿ ತಯಾರಾಗುವ ಸಾಧನಗಳ ಪರೀಕ್ಷೆಗೆ ಬಳಸಲಾಗುತ್ತದೆ ಎಂದು ಹೆಚ್ಎಎಲ್ನ ಸಿಎಂಡಿ ಆರ್. ಮಾಧವನ್ ಮಾಹಿತಿ ನೀಡಿದ್ದಾರೆ.
ಪರೀಕ್ಷೆಗೆ ಒಳಪಟ್ಟ ಸಾಧನವನ್ನು ಹೊತ್ತೊಯ್ದಿದ್ದ ಏರ್ಕ್ರಾಫ್ಟ್ ಅನ್ನು ನಿವೃತ್ತ ವಿಂಗ್ ಕಮಾಂಡರ್ ಪಿ.ಅಶ್ವತಿ ಹಾಗೂ ಮತ್ತೋರ್ವ ನಿವೃತ್ತ ವಿಂಗ್ ಕಮಾಂಡರ್ ಆದ ಎಂ. ಪಾಟೀಲ್ ನಡೆಸಿದ್ದಾರೆ.