ನವದೆಹಲಿ: ಕೆಲ ಜಾಗತಿಕ ಬ್ರಾಂಡ್‌ಗಳು/ಕಂಪನಿಗಳು ಭಾರತದಿಂದ ಹೊರನಡೆಯುತ್ತಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ವಾಗ್ದಾಳಿ ನಡೆಸಿದ್ದಾರೆ. ನಿರುದ್ಯೋಗ ಸಮಸ್ಯೆ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುಡುಗಿರುವ ರಾಹುಲ್ ಗಾಂಧಿ, ಹೇಟ್-ಇನ್-ಇಂಡಿಯಾ ಮತ್ತು ಮೇಕ್-ಇನ್-ಇಂಡಿಯಾ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ ಎಂದು ಖಾರವಾಗಿ ಟೀಕಿಸಿದ್ದಾರೆ. ಜೊತೆಗೆ ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಗಮನಹರಿಸುವಂತೆ ಪ್ರಧಾನಿ ಅವರನ್ನು ಒತ್ತಾಯಿಸಿದ್ದಾರೆ.
-
The ease of driving business out of India.
— Rahul Gandhi (@RahulGandhi) April 27, 2022 " class="align-text-top noRightClick twitterSection" data="
❌ 7 Global Brands
❌ 9 Factories
❌ 649 Dealerships
❌ 84,000 Jobs
Modi ji, Hate-in-India and Make-in-India can’t coexist!
Time to focus on India's devastating unemployment crisis instead. pic.twitter.com/uXSOll4ndD
">The ease of driving business out of India.
— Rahul Gandhi (@RahulGandhi) April 27, 2022
❌ 7 Global Brands
❌ 9 Factories
❌ 649 Dealerships
❌ 84,000 Jobs
Modi ji, Hate-in-India and Make-in-India can’t coexist!
Time to focus on India's devastating unemployment crisis instead. pic.twitter.com/uXSOll4ndDThe ease of driving business out of India.
— Rahul Gandhi (@RahulGandhi) April 27, 2022
❌ 7 Global Brands
❌ 9 Factories
❌ 649 Dealerships
❌ 84,000 Jobs
Modi ji, Hate-in-India and Make-in-India can’t coexist!
Time to focus on India's devastating unemployment crisis instead. pic.twitter.com/uXSOll4ndD
7 ಜಾಗತಿಕ ಬ್ರ್ಯಾಂಡ್‌ಗಳು-9 ಕಾರ್ಖಾನೆಗಳು, 649 ಡೀಲರ್‌ಶಿಪ್‌ಗಳು, 84,000 ಉದ್ಯೋಗಗಳು ಭಾರತದಿಂದ ಹೋಗಿವೆ ಎಂದು ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಹೇಳಿದ್ದಾರೆ. 2017ರಲ್ಲಿ ಸೆವರ್ಲೆಟ್ (Chevrolet), 2018ರಲ್ಲಿ ಮ್ಯಾನ್ ಟ್ರಕ್ಸ್, 2019 ರಲ್ಲಿ ಫಿಯೆಟ್ ಮತ್ತು ಯುನೈಟೆಡ್ ಮೋಟರ್ಸ್, 2020ರಲ್ಲಿ ಹಾರ್ಲೆ ಡೇವಿಡ್ಸನ್, 2021ರಲ್ಲಿ ಫೋರ್ಡ್ ಮತ್ತು 2022ರಲ್ಲಿ ಡಾಟ್ಸನ್ ದೇಶದಿಂದ ನಿರ್ಗಮಿಸಿದ ಏಳು ಜಾಗತಿಕ ಬ್ರ್ಯಾಂಡ್‌ಗಳನ್ನು ತೋರಿಸುವ ಚಿತ್ರವನ್ನು ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದೇಶಾದ್ಯಂತ ಸುಮಾರು 201 ಗಿಗಾವ್ಯಾಟ್‌ನಷ್ಟು ವಿದ್ಯುತ್ ಬೇಡಿಕೆ ಪೂರೈಸಲಾಗಿದೆ: ಕೇಂದ್ರ
'ಮೋದಿ ಜಿ, ಹೇಟ್ - ಇನ್ - ಇಂಡಿಯಾ ಮತ್ತು ಮೇಕ್-ಇನ್-ಇಂಡಿಯಾ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ! ಬದಲಿಗೆ ಭಾರತದ ವಿನಾಶಕಾರಿ ನಿರುದ್ಯೋಗ ಬಿಕ್ಕಟ್ಟಿನ ಮೇಲೆ ಗಮನ ಕೇಂದ್ರೀಕರಿಸುವ ಸಮಯವಿದು' ಎಂದು ಹೇಳಿದ್ದಾರೆ.