ಚಂಡೀಗಢ (ಹರಿಯಾಣ): ಆಸ್ಪತ್ರೆಗಳಿಗೆ ವಿಐಪಿಗಳ ಭೇಟಿಯ ಸಮಯದಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆ ಮತ್ತು ದಾಖಲಾತಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹರಿಯಾಣದ ಎಲ್ಲಾ ಜಿಲ್ಲೆಗಳ ಮುಖ್ಯ ವೈದ್ಯಕೀಯ ಅಧಿಕಾರಿಗಳಿಗೆ (CMO) ಆರೋಗ್ಯ ಸಚಿವ ಅನಿಲ್ ವಿಜ್ ನಿರ್ದೇಶನ ನೀಡಿದ್ದಾರೆ.
ಜಿಂದ್ ಸಿವಿಲ್ ಆಸ್ಪತ್ರೆಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಬರುತ್ತಾರೆಂದು ಅಧಿಕಾರಿಗಳು ಕೆಲವು ಕಟ್ಟುನಿಟ್ಟಾದ ಪ್ರೋಟೋಕಾಲ್ಗಳನ್ನು ಜಾರಿಗೆ ತಂದಿದ್ದು, ಇದು ರೋಗಿಗಳ ಚಿಕಿತ್ಸೆಗೆ ಸ್ವಲ್ಪ ಅನಾನುಕೂಲತೆಯನ್ನುಂಟು ಮಾಡಿತ್ತು.
ಈ ವಿಚಾರವನ್ನು ಜಿಂದ್ ಆಸ್ಪತ್ರೆಯ ವೈದ್ಯರೊಬ್ಬರು ಸಿಎಂ ಬಳಿಯೇ ಹೇಳಿಕೊಂಡಿದ್ದಾರೆ. ತಕ್ಷಣವೇ ಸಿಎಂ ಖಟ್ಟರ್ ಅವರು ರೋಗಿಗಳು ಅಥವಾ ಅವರನ್ನು ನೋಡಿಕೊಳ್ಳುವ ವೈದ್ಯಕೀಯ ಸಿಬ್ಬಂದಿಗೆ ಯಾವುದೇ ಅನಾನುಕೂಲತೆಯನ್ನು ಆಗದಂತೆ ಕ್ರಮಕ್ಕೆ ಸೂಚಿಸಿದ್ದರು.
-
All CMO should ensure that treatment and admissions of Corona patients are not effected during VIP movements in the Hospitals. Our first priority is the patients and there treatment.
— ANIL VIJ MINISTER HARYANA (@anilvijminister) April 30, 2021 " class="align-text-top noRightClick twitterSection" data="
">All CMO should ensure that treatment and admissions of Corona patients are not effected during VIP movements in the Hospitals. Our first priority is the patients and there treatment.
— ANIL VIJ MINISTER HARYANA (@anilvijminister) April 30, 2021All CMO should ensure that treatment and admissions of Corona patients are not effected during VIP movements in the Hospitals. Our first priority is the patients and there treatment.
— ANIL VIJ MINISTER HARYANA (@anilvijminister) April 30, 2021
ಈ ಘಟನೆ ಬೆನ್ನಲ್ಲೇ ಟ್ವೀಟ್ ಮಾಡಿರುವ ಅನಿಲ್ ವಿಜ್, ರೋಗಿಗಳು ಮತ್ತು ಅವರ ಚಿಕಿತ್ಸೆಯೇ ನಮ್ಮ ಮೊದಲ ಆದ್ಯತೆ ಆಗಿರಬೇಕು. ವಿಐಪಿಗಳ ಭೇಟಿ ವೇಳೆ ಕೋವಿಡ್ ರೋಗಿಗಳಿಗೆ ಯಾವ ತೊಂದರೆಯೂ ಆಗಬಾರದು ಎಂದು ಹೇಳಿದ್ದಾರೆ.