ETV Bharat / bharat

ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಸಾವು - ಇನ್ಸ್‌ಪೆಕ್ಟರ್‌ಗಳ ಸಾವು

Haryana Road Accident: ಕ್ಯಾಂಟರ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮೃತಪಟ್ಟಿದ್ದಾರೆ.

ಭೀಕರ ರಸ್ತೆ ಅಪಘಾತ
ಭೀಕರ ರಸ್ತೆ ಅಪಘಾತ
author img

By ETV Bharat Karnataka Team

Published : Jan 9, 2024, 1:31 PM IST

ಸೋನಿಪತ್ (ಹರಿಯಾಣ): ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಪೊಲೀಸ್​ ಇನ್ಸ್​​ಪೆಕ್ಟರ್‌ಗಳು ಮೃತಪಟ್ಟ ಘಟನೆ ಸೋನಿಪತ್ ಜಿಲ್ಲೆಯ ಕುಂಡಲಿ ಬಾರ್ಡರ್ ಬಳಿ ಸೋಮವಾರ ರಾತ್ರಿ ಸಂಭವಿಸಿದೆ. ದದನ್‌ಪುರ್ ಗ್ರಾಮದ ದಿನೇಶ್ ಬೇನಿವಾಲ್ ಮತ್ತು ನರ್ವಾನಾ ನಿವಾಸಿ ರಣಬೀರ್ ಚಾಹಲ್ ಮೃತ ಪೊಲೀಸ್​ ಇನ್ಸ್​​ಪೆಕ್ಟರ್‌ಗಳು. ಮೃತರು ದೆಹಲಿಯ ಪ್ರತ್ಯೇಕ ಪೊಲೀಸ್​ ಠಾಣಾದಲ್ಲಿ ಕಾರ್ಯ ನಿರ್ವವಹಿಸುತ್ತಿದ್ದರು.

ತಮ್ಮ ಮುಂದೆ ಚಲಿಸುತ್ತಿದ್ದ ಕ್ಯಾಂಟರ್​ಗೆ ಇವರ ಕಾರು ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಅಪಘಾತ ಸಂಭವಿಸಿದಾಗ ಇಬ್ಬರು ಇನ್ಸ್​​ಪೆಕ್ಟರ್‌ಗಳು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಬ್ಬರೂ ಮೃತಪಟ್ಟಿರುವುದಾಗಿ ಪೊಲೀಸ್​ ಮೂಲಗಳು ಖಚಿತಪಡಿಸಿವೆ.

  • #WATCH | Two Delhi Police inspectors died after their car rammed into a canter (truck) at around 11:30 pm last night near Kundali Border in Haryana's Sonipat district. pic.twitter.com/bH8BmkxXCU

    — ANI (@ANI) January 9, 2024 " class="align-text-top noRightClick twitterSection" data=" ">

ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರ ತಂಡ, ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದೆ. ಮೃತ ದಿನೇಶ್ ಬೇನಿವಾಲ್ ದೆಹಲಿಯ ಹೈದರ್‌ಪುರ ವಾಯವ್ಯ ಪೊಲೀಸ್​ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ರಣಧೀರ್ ಚಹಾಲ್ ದೆಹಲಿಯ ಆದರ್ಶ್ ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿಯೋಜಿಸುತ್ತಿದ್ದರು. ಇಬ್ಬರೂ ಸೋಮವಾರ ತಡರಾತ್ರಿ ದೆಹಲಿಯಿಂದ ಸೋನಿಪತ್ ಕಡೆಗೆ ಕಾರಿನಲ್ಲಿ ಬರುತ್ತಿದ್ದರು. ಕುಂಡಲಿ ಸಮೀಪ ಇವರ ಮುಂದೆ ಚಲಿಸುತ್ತಿದ್ದ ಕ್ಯಾಂಟರ್,​​ ಇದ್ದಕ್ಕಿದ್ದಂತೆ ಬ್ರೇಕ್​ ಹಾಕಿ ನಿಲ್ಲಿಸಿದಾಗ ಇವರ ಕಾರು ಕ್ಯಾಂಟರ್​ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರನ್ನು ದಿನೇಶ್ ಬೇನಿವಾಲ್ ಚಲಾಯಿಸುತ್ತಿದ್ದರು. ಅಪಘಾತದ ಸಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಅಪಘಾತದ ಬಳಿಕ ಟ್ರಕ್ ಚಾಲಕ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಿದ್ದಾರೆ.

ಕುಂಡಲಿ ಬಾರ್ಡರ್ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ದೆಹಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮೃತಪಟ್ಟಿದ್ದು, ಮೃತದೇಹಗಳನ್ನು ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದು ಪೊಲೀಸರು ಟ್ರಕ್ ಅನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. - ಕಟಾರ್ ಸಿಂಗ್, ಎಸ್‌ಐ, ಕುಂಡಲಿ ಪೊಲೀಸ್ ಠಾಣೆ.

ಇದನ್ನೂ ಓದಿ: ಕಾರು ಅಪಘಾತ: ವೈಎಸ್​ಆರ್​ಸಿಪಿ ಎಂಎಲ್​ಸಿ ಪರ್ವತ ರೆಡ್ಡಿಗೆ ಗಂಭೀರ ಗಾಯ, ಪಿಎ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.