ಕರ್ನಾಲ್ (ಹರಿಯಾಣ): ಪತ್ನಿಯೊಂದಿಗೆ ನಡೆದ ಗಲಾಟೆ ನಂತರ ತನ್ನ ಮೂವರು ಅಪ್ರಾಪ್ತ ಮಕ್ಕಳನ್ನು ಕಾಲುವೆಗೆ ಎಸೆದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ.
ಸುಶೀಲ್ ಕುಮಾರ್ ಎಂಬ ಆರೋಪಿ ಸೋಮವಾರ ತನ್ನ ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ನಂತರ ತನ್ನ ಮೂವರು ಮಕ್ಕಳನ್ನು ಏನಾದರೂ ಖರೀದಿಸುವ ನೆಪದಲ್ಲಿ ಮಾರುಕಟ್ಟೆಗೆ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ ಎಂದು ಕುಂಜ್ಪುರ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಮುನಿಶ್ ಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.