ಗುರುಗ್ರಾಮ್ (ಹರಿಯಾಣ) : ಹರಿಯಾಣದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದೆ. ಖಂಡಸಾ ರಸ್ತೆಯ ಪಟೌಡಿ ಚೌಕ್‌ನಲ್ಲಿ ಹಲವಾರು ಮಾಂಸದ ಅಂಗಡಿಗಳು, ಕಸ ಮತ್ತು ಪೀಠೋಪಕರಣ ದುರಸ್ತಿ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಮಂಗಳವಾರ ಸೆಕ್ಟರ್-70 ರಲ್ಲಿ ಹಲವಾರು ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
#WATCH | Flag march by Rapid Action Force personnel in Badshahpur, Gurugram district following recent incidents of violence in Haryana pic.twitter.com/yt0gPiaDob
— ANI (@ANI) August 2, 2023 " class="align-text-top noRightClick twitterSection" data="
">#WATCH | Flag march by Rapid Action Force personnel in Badshahpur, Gurugram district following recent incidents of violence in Haryana pic.twitter.com/yt0gPiaDob
— ANI (@ANI) August 2, 2023#WATCH | Flag march by Rapid Action Force personnel in Badshahpur, Gurugram district following recent incidents of violence in Haryana pic.twitter.com/yt0gPiaDob
— ANI (@ANI) August 2, 2023
ಮಂಗಳವಾರ ಬೆಳಗ್ಗೆ ಬಾದಶಹಪುರ ಪ್ರದೇಶದಲ್ಲಿ ಉದ್ರಿಕ್ತರ ಗುಂಪು ಕನಿಷ್ಠ ನಾಲ್ಕು ತಿನಿಸು ಮತ್ತು ಸ್ಕ್ರ್ಯಾಪ್ ಅಂಗಡಿಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರದಿದೆ ಎಂದು ಅಲ್ಲಿನ ಪೊಲೀಸ್ ಮೂಲಗಳು ತಿಳಿಸಿವೆ. ವಿವಿಧ ವಾಹನಗಳಲ್ಲಿ ಬಂದಿದ್ದ 200ಕ್ಕೂ ಹೆಚ್ಚು ಮಂದಿ ಪೆಟ್ರೋಲ್ ಬಾಟಲಿಗಳನ್ನು ಹಿಡಿದು ಅಂಗಡಿ, ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದಾರೆ. ಕೋಮು ಹಿಂಸಾಚಾರವು ಪಲ್ವಾಲ್‌ಗೆ ಹರಡಿದೆ. ಇಲ್ಲಿ ಸುಮಾರು 25-30 ಕ್ಕೂ ಹೆಚ್ಚು ಗುಡಿಸಲುಗಳನ್ನು ಸುಟ್ಟು ಹಾಕಲಾಗಿದೆ ಎಂದು ವರದಿ ಆಗಿದೆ.
ಗುರುಗ್ರಾಮ್‌ನ ಸೆಕ್ಟರ್ 57 ಪ್ರದೇಶದಲ್ಲಿ, 26 ವರ್ಷದ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ನೆರೆಯ ನುಹ್ ಜಿಲ್ಲೆಯಿಂದ ಹಿಂಸಾಚಾರ ಹರಡುತ್ತಿದ್ದಂತೆ ಪ್ರಮುಖ ಸ್ಥಳವೊಂದರ ಮೇಲೆ ದಾಳಿ ನಡೆಸಿ ಸುಟ್ಟು ಹಾಕಲಾಗಿದೆ ಎಂದು ಹರಿಯಾಣ ಪೊಲೀಸರು ಮಾಹಿತಿ ನೀಡಿದ್ದಾರೆ.
ಹೊಸ ಬೆಳವಣಿಗೆಗಳ ನಂತರ, ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರದಂತೆ ಗುರುಗ್ರಾಮ್ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. "ಗುರುಗ್ರಾಮ್‌ನಲ್ಲಿ ವರದಿಯಾದ ಹಿಂಸಾಚಾರದ ನಡುವೆ, ಗುರುಗ್ರಾಮ್‌ನ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಯಾವುದೇ ಹಿಂಸಾಚಾರ ನಡೆದಿದ್ದು ಕಂಡು ಬಂದರೆ, 112ಕ್ಕೆ ಡಯಲ್ ಮಾಡುವ ಮೂಲಕ ಗುರುಗ್ರಾಮ್ ಪೊಲೀಸರಿಗೆ ಮಾಹಿತಿ ನೀಡಬಹುದು" ಎಂದು ಅಪರಾಧ ವಿಭಾಗದ ಎಸಿಪಿ ವರುಣ್ ದಹಿಯಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
5 ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿ: ನುಹ್ನಲ್ಲಿ ಘರ್ಷಣೆಯಿಂದ ಹರಿಯಾಣದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ಇಂದು ಕೆಲವೆಡೆ ಹಿಂಸಾಚಾರದ ವರದಿ ಆಗಿದೆ. 5 ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಜೊತೆಗೆ ನುಹ್, ಫರಿದಾಬಾದ್, ಗುರುಗ್ರಾಮ್ ಮತ್ತು ಪಲ್ವಾಲ್‌ನಲ್ಲಿರುವ ಶಿಕ್ಷಣ ಸಂಸ್ಥೆಗಳು ಹಾಗೂ ಕೋಚಿಂಗ್ ಸೆಂಟರ್‌ಗಳನ್ನು ಬಂದ್ ಮಾಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಡೆಪ್ಯುಟಿ ಕಮಿಷನರ್ ಪ್ರಶಾಂತ್ ಪನ್ವಾರ್ ಅವರು ಪರಿಸ್ಥಿತಿ ನಿಯಂತ್ರಣದ ಬಗ್ಗೆ ಸರ್ವ ಸಮಾಜದ ಸಭೆ ಕರೆದು ಚರ್ಚಿಸಿದ್ದಾರೆ. ಶಾಂತಿ ಭಂಗ ಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.