ಚಂಡೀಗಢ(ಪಂಜಾಬ್): ಪಂಜಾಬ್ ವಿಧಾನಸಭೆಯ ಕೊನೆಯ ದಿನದ ಅಧಿವೇಶನದ ಪ್ರಾರಂಭವಾಗುವ ಮೊದಲು, ಪಂಜಾಬ್ ವ್ಯವಹಾರಗಳ ಉಸ್ತುವಾರಿ ಹರೀಶ್ ರಾವತ್ ಅವರು ಪಂಜಾಬ್ ಭವನದಲ್ಲಿ ನವಜೋತ್ ಸಿಂಗ್ ಸಿಧು ಜೊತೆ ಚಹಾ ಸೇವಿಸುತ್ತಾ ಮಾತುಕತೆ ನಡೆಸಿದ್ದಾರೆ.
ನಿನ್ನೆ ಸಂಜೆ ಚಂಡೀಗಢಕ್ಕೆ ಆಗಮಿಸಿದ ಹರೀಶ್ ರಾವತ್ , ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಭೇಟಿಯಾಗಿ ಅವರೊಂದಿಗೆ ಊಟ ಸೇವಿಸಿದ್ರು. ಜೊತೆಗೆ 2022 ರ ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು.
ಇನ್ನು ನವಜೋತ್ ಸಿಂಗ್ ಸಿಧು ಅವರು ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ನಿರಂತರವಾಗಿ ಕೋಪಗೊಂಡಿದ್ದು, ಮಾಧ್ಯಮಗಳಿಂದ ದೂರ ಉಳಿದಿದ್ದರು. ಸದ್ಯ ಸಿಧು ಅವರಿಗೆ ಶೀಘ್ರದಲ್ಲೇ ಹೈಕಮಾಂಡ್‌ನಿಂದ ದೊಡ್ಡ ನಿರ್ಧಾರವೊಂದು ಹೊರ ಬೀಳಬಹುದು ಎಂಬ ಸುದ್ದಿಯೂ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ:ವಿದೇಶಿ ನಿಧಿಯ ಒಳಹರಿವಿಗೆ ತ್ರಿಶತಕ ಸಿಡಿಸಿದ ಮುಂಬೈ ಷೇರುಪೇಟೆ!