ETV Bharat / bharat

ನಿಮಗಾದ ಅಡೆತಡೆ ಯಾವುದೇ ಮಹತ್ವಾಕಾಂಕ್ಷಿ ಕ್ರಿಕೆಟರ್ಸ್​ಗೂ ಆಗದಿರಲಿ: ತಿವಾರಿಗೆ ಹರ್ಭಜನ್​ ಟ್ವೀಟ್​​ - ಪಶ್ಚಿಮ ಬಂಗಾಳ ವಿಧಾನಸಭೆ

ಟೀಂ ಇಂಡಿಯಾ ಮಾಜಿ ಕ್ರಿಕೆಟರ್​ ಮನೋಜ್ ತಿವಾರಿ ಇದೀಗ ಪಶ್ಚಿಮ ಬಂಗಾಳ ಕ್ರೀಡಾ ಸಚಿವರಾಗಿ ಆಯ್ಕೆಯಾಗಿದ್ದು, ಅವರಿಗೆ ಹರ್ಭಜನ್ ಸಿಂಗ್ ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ.

Harbhajan congratulate Tiwary
Harbhajan congratulate Tiwary
author img

By

Published : May 14, 2021, 8:49 PM IST

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಪಕ್ಷದಿಂದ ಸ್ಪರ್ಧೆ ಮಾಡಿ ಗೆಲುವು ದಾಖಲಿಸಿರುವ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಇದೀಗ ಅಲ್ಲಿನ ಕ್ರೀಡಾ ಸಚಿವರಾಗಿ ಆಯ್ಕೆಯಾಗಿದ್ದಾರೆ.

ಮನೋಜ್ ತಿವಾರಿ ರಾಜಕೀಯ ಜೀವನ ಆರಂಭ ಮಾಡ್ತಿದ್ದಂತೆ ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್​ ಟ್ವೀಟ್ ಮೂಲಕ ವಿಶ್ ಮಾಡಿದ್ದಾರೆ.

ಅಭಿನಂದನೆಗಳು... ನಿಮ್ಮ ವೃತ್ತಿ ಜೀವನದಲ್ಲಿ ನೀವು ಎದುರಿಸಿದ ಅಡೆತಡೆ ಯಾವುದೇ ಮಹತ್ವಾಕಾಂಕ್ಷಿ ಕ್ರಿಕೆಟಿಗನು ಅನುಭವಿಸದಿರಲಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಅಂತಹ ಅದ್ಭುತ ಆಟಗಾರನಾದ ಬಳಿಕ ಕೂಡ ನೀವೂ ಅನೇಕ ತೊಂದರೆ ಅನುಭವಿಸಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.

  • Congratulations @tiwarymanoj .. with the hurdles you have faced in your career (after being such a magnificent player) I hope no aspiring cricketer goes through the same experience .. God bless you ! All the Best https://t.co/J96MD7qABq

    — Harbhajan Turbanator (@harbhajan_singh) May 13, 2021 " class="align-text-top noRightClick twitterSection" data=" ">

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ವೇಳೆ ಮನೋಜ್ ತಿವಾರಿ ಶಿಬಪುರ್​ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಇಲ್ಲಿ ಕಣಕ್ಕಿಳಿದಿದ್ದ ಬಿಜೆಪಿಯ ರತಿನ್​ ಚಕ್ರವರ್ತಿ ವಿರುದ್ಧ 32 ಸಾವಿರಕ್ಕೂ ಅಧಿಕ ಮತ ಪಡೆದು ಜಯಗಳಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಕ್ರೀಡಾ ಸಚಿವ ಸ್ಥಾನ ನೀಡಲಾಗಿದೆ.

ಇದನ್ನೂ ಓದಿ: ಪ. ಬಂಗಾಳ ಚುನಾವಣೆ : ಟಿಎಂಸಿ ಅಭ್ಯರ್ಥಿ ಕ್ರಿಕೆಟಿಗ ಮನೋಜ್ ತಿವಾರಿ ಭರ್ಜರಿ ಜಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.