ನವದೆಹಲಿ: ಇಂದು ಹನುಮ ಜಯಂತಿ. ಈ ಹಿನ್ನೆಲೆ ಶಾಂತಿ ಸುವ್ಯವಸ್ಥೆಯಿಂದ ಈ ದಿನ ಆಚರಣೆ ನಡೆಸಿ, ಕೋಮು ಸೌಹರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಇದೇ ಉದ್ದೇಶದಿಂದ ಈ ಹಿಂದೆ ಕೋಮು ಗಲಭೆಗೆ ಸಾಕ್ಷಿಯಾಗಿದ್ದ ದಹೆಲಿಯ ಜಹಂಗೀರ್ಪುರಿ ಪ್ರದೇಶದಲ್ಲಿ ಕಾನೂನು ಸುವಸ್ಥೆ ಕಾಪಾಡುವ ಉದ್ದೇಶದಿಂದ ಭಾರಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಬುಧವಾರ ಕೂಡ ದೆಹಲಿ ಪೊಲೀಸರು ಈ ಪ್ರದೇಶದಲ್ಲಿ ಫ್ಲಾಗ್ ಮಾರ್ಚ್ (ಮೆರವಣಿಗೆ) ನಡೆಸಿದರು.
ಈ ಮೊದಲು ಈ ಪ್ರದೇಶದಲ್ಲಿ ಯಾವುದೇ ಕಾರ್ಯಕ್ರಮ, ಮೆರವಣಿಗೆಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಆದರೆ, ಬಳಿಕ ಕೆಲವು ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಜಹಂಗೀರ್ಪುರದಲ್ಲಿ ಸಂಘಟಕರಿಂದ ಪ್ರತಿ ವರ್ಷ ಹನುಮನ್ ಜನ್ಮೋತ್ಸವವನ್ನು ಆಚರಣೆ ಮಾಡಲಾಗುವುದು. ಈ ಹಿನ್ನೆಲೆ ಶಾಂತಿ ಮತ್ತು ಸುರಕ್ಷಿತೆ ದೃಷ್ಟಿಯಿಂದ ಈ ಕಾರ್ಯಕ್ರಮ ನಡೆಯುವ ಭರವಸೆಯನ್ನು ನೀಡುತ್ತೇವೆ ಎಂದು ಕಾನೂನು ಮತ್ತು ಆದೇಶದ ಸ್ಪೆಷಲ್ ಕಮಿಷನರ್ ಆಫ್ ಪೊಲೀಸ್ ದೀಪೇಂದ್ರ ಪಾಠಕ್ ತಿಳಿಸಿದರು.
ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮೆರವಣಿಗೆ ನಡೆಸಲು ಇಚ್ಛೆ ವ್ಯಕ್ತಪಡಿಸಿದ್ದು, ಹೀಗಾಗಿ ಪೊಲೀಸರು ಹನುಮ ಜಯಂತಿಯ ಮಾರ್ಗವನ್ನು ಕ್ರಮಬದ್ಧಗೊಳಿಸಲು ಮನವಿ ಮಾಡಿದರು. ಮನವಿಯನ್ನು ಪರಿಶೀಲಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಜಿಲ್ಲೆಯಲ್ಲಿ ಸೂಕ್ತ ಭದ್ರತೆಯನ್ನು ನಿಯೋಜಿಸಲಾಗುವುದು ಎಂದಿದ್ದಾರೆ.
ಕಳೆದ ವರ್ಷ ಗಲಭೆ: ಕಳೆದ ವರ್ಷ ಏಪ್ರಿಲ್‌ನಲ್ಲಿ ಜಹಾಂಗೀರ್‌ಪುರಿಯಲ್ಲಿ ಹನುಮ ಜಯಂತಿಯಂದು ನಡೆದ ಮೆರವಣಿಗೆಯಲ್ಲಿ ಕೋಮು ಘರ್ಷಣೆ ಸಂಭವಿಸಿತ್ತು. ಈ ಗಲಭೆಯಲ್ಲಿ 8 ಪೊಲೀಸ್ ಸಿಬ್ಬಂದಿಗಳು ಮತ್ತು ನಾಗರಿಕರು ಗಾಯಗೊಂಡಿದ್ದರು. ಹನುಮ ಜಯಂತಿ ಮೆರವಣಿಗೆ ಮಸೀದಿ ಪ್ರದೇಶದ ಮೂಲಕ ಸಾಗುತ್ತಿದ್ದಾಗ, ಕಲ್ಲು ತೂರಾಟ ಪ್ರಾರಂಭವಾಗಿ, ಇದು ಘರ್ಷಣೆಗೆ ಕಾರಣವಾಗಿತ್ತು.
ಎಲ್ಲಾ ರಾಜ್ಯದಲ್ಲೂ ಬಿಗಿ ಕ್ರಮಕ್ಕೆ ಸೂಚನೆ: ರಾಮನವಮಿ ವೇಳೆ ಪಶ್ಚಿಮ ಬಂಗಾಳಧ ಹೌರಾ ಸೇರಿದಂತೆ ದೇಶದ ವಿವಿಧ ಕಡೆ ಕೋಮು ಗಲಭೆಗಳು ಆಗಿರುವ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕ್ಕೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚನೆ ನೀಡಿದೆ ಹನುಮ ಜಯಂತಿ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ, ಶಾಂತಿ ಕಾಪಾಡಲು ಎಲ್ಲಾ ರಾಜ್ಯಗಳಲ್ಲೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ತಿಳಿಸಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಅಡ್ಡಿಪಡಿಸುವ ಯಾವುದೇ ಅಂಶವನ್ನು ಮೇಲ್ವಿಚಾರಣೆ ಮಾಡಲು ಸೂಚನೆ ನೀಡಲಾಗಿದೆ.
ಹನುಮ ಜಯಂತಿ ಆಚರಣೆ ಮತ್ತು ಮೆರವಣಿಗೆಗೆ ಕುರಿತು ಎಲ್ಲಾ ರಾಜ್ಯಗಳಿಗೆ ಸಲಹೆಯನ್ನು ಕೇಂದ್ರ ಗೃಹ ಸಚಿವಾಲಯ ಸಲಹೆ ನೀಡಿದೆ. ರಾಜ್ಯ ಸರ್ಕಾರಗಳು ಕೂಡ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂದಾಬೇಕು. ಹಬ್ಬವನ್ನು ಶಾಂತಿಯುತವಾಗಿ ಆಚರಿಸುವುದು ಮತ್ತು ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಯಾವುದೇ ಅಂಶಗಳನ್ನು ಸೂಕ್ತವಾಗಿ ಮೇಲ್ವಿಚಾರಣೆ ನಡೆಸಿ, ಕ್ರಮಕ್ಕೆ ಮುಂದಾಗಬೇಕು ಎಂದು ಗೃಹ ಸಚಿವಾಲಯದ ಕಚೇರಿ ಬುಧವಾರ ಟ್ವೀಟ್ ಕೂಡ ಮಾಡಿದೆ.
ಇದನ್ನೂ ಓದಿ: ಸಮೋದ್ ಬೆಟ್ಟಗಳ ಮೇಲಿದೆ ಹನುಮಾನ್ ದೇವಾಲಯ.. ಭಕ್ತರ ಇಷ್ಟಾರ್ಥ ಈಡೇರಿಸುವ ಆಂಜನೇಯ