ETV Bharat / bharat

ಜಲ್ಗಾಂವ್‌ನಲ್ಲಿ ಬೇರ್ಪಟ್ಟ ರೈಲಿನ ಬೋಗಿ -ಇಂಜಿನ್​: ತಪ್ಪಿತು ಭಾರಿ ಅನಾಹುತ

author img

By

Published : Jul 26, 2022, 5:03 PM IST

Updated : Jul 26, 2022, 7:07 PM IST

ಲೋಕಮಾನ್ಯ ತಿಲಕ್ ಟರ್ಮಿನಸ್ ಪಾಟ್ಲಿಪುತ್ರ ಎಕ್ಸ್‌ಪ್ರೆಸ್ ಮುಂಬೈನಿಂದ ಭೂಸಾವಲ್‌ಗೆ ತೆರಳುತ್ತಿದ್ದಾಗ ಈ ಘಟನೆ ಜರುಗಿದೆ.

HALF PATLIPUTRA EXPRESS WENT FORWARD HALF REMAINED BEHIND DUE TO COUPLING BROKE

ಜಲಗಾಂವ್ (ಮಹಾರಾಷ್ಟ್ರ): ಜಿಲ್ಲೆಯ ಚಾಲಿಸ್‌ಗಾಂವ್ ರೈಲು ನಿಲ್ದಾಣದ ಬಳಿಯ ವಾಗ್ಲೆ ಗ್ರಾಮದ ಬಳಿ ಎಕ್ಸ್‌ಪ್ರೆಸ್‌ ರೈಲಿನ ಕೋಚ್ ಮತ್ತು ಇಂಜಿನ್ ಬೇರ್ಪಟ್ಟ ಆಘಾತಕಾರಿ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಅಹಿತಕರ ಘಟನೆ ನಡೆದಿಲ್ಲ ಎಂದು ತಿಳಿದುಬಂದಿದೆ.

ಲೋಕಮಾನ್ಯ ತಿಲಕ್ ಟರ್ಮಿನಸ್ ಪಾಟ್ಲಿಪುತ್ರ ಎಕ್ಸ್‌ಪ್ರೆಸ್ ಮುಂಬೈನಿಂದ ಭೂಸಾವಲ್‌ಗೆ ಪ್ರಯಾಣಿಸುತ್ತಿದ್ದಾಗ ಈ ಅವಘಡ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ರೈಲ್ವೆ ಭದ್ರತಾ ಪಡೆ ಮತ್ತು ರೈಲ್ವೆ ಇಲಾಖೆ ನೌಕರರು ಸ್ಥಳಕ್ಕೆ ಧಾವಿಸಿ, ನಂತರ ಬೋಗಿಗಳಿಂದ ದೂರ ಸಂಚರಿಸಿದ್ದ ಎಂಜಿನ್ ಅನ್ನು ಮರಳಿ ತಂದು ಕೋಚ್‌ಗಳಿಗೆ ಜೋಡಿಸಿದ್ದಾರೆ.

ಜಲ್ಗಾಂವ್‌ನಲ್ಲಿ ಬೇರ್ಪಟ್ಟ ರೈಲಿನ ಬೋಗಿ -ಇಂಜಿನ್​: ತಪ್ಪಿತು ಭಾರಿ ಅನಾಹುತ

ಈ ಘಟನೆಯ ನಂತರ ಪ್ರಯಾಣಿಕರಲ್ಲಿ ಭಯ ಉಂಟಾಗಿತ್ತು. ಎಲ್ಲಾ ಪ್ರಯಾಣಿಕರು ಬೋಗಿಗಳಿಂದ ಹೊರಗಿಳಿದಿದ್ದರು. ಘಟನೆಯ ಪ್ರತ್ಯಕ್ಷದರ್ಶಿಗಳಿಂದ ಪಡೆದ ಮಾಹಿತಿ ಪ್ರಕಾರ, ಈ ಅಪಘಾತದಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಆಗಿಲ್ಲ.

ಇದನ್ನೂ ಓದಿ : ವಿರೋಧದ ನಡುವೆಯೂ ಮದುವೆಯಾದ ಜೋಡಿ: ಅಮಾನುಷವಾಗಿ ಕೊಲೆ ಮಾಡಿದ ತಂದೆ

Last Updated : Jul 26, 2022, 7:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.